Wednesday 22 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 26: 79-88

 

ದ್ರೋಣಂ ತತಃ ಶೈಶುಪಾಲಿಃ ಸಪುತ್ರೋ ಜಾರಾಸನ್ಧಿಃ ಕಾಶಿರಾಜಃ ಸಶೈವ್ಯಃ ।

ಸಮಾಸದನ್ ಕೈಕಯಾಶ್ಚೈವ ಪಞ್ಚ ಸಮಾರ್ದ್ದಯನ್ ಬಾಣಗಣೈಶ್ಚ ಸರ್ವಶಃ ॥ ೨೬.೭೯ ॥

 

ಆನಂತರ ಶಿಶುಪಾಲಪುತ್ರ ಧೃಷ್ಟಕೇತು, ಜರಾಸಂಧಪುತ್ರ ಸಹದೇವ, ಭೀಮನ ಮಾವ ಕಾಶೀರಾಜ, ಶೈಬ್ಯ, ಐವರು ಕೇಕಯರು, ದ್ರೋಣಾಚಾರ್ಯರನ್ನು ಎದುರುಗೊಂಡು ಹಾಗೂ ಎಲ್ಲೆಡೆಯಿಂದ ಬಾಣಗಳಿಂದ ದಾಳಿ ನಡೆಸಿ ಅವರನ್ನು ಪೀಡಿಸಿದರು.

 

ಸ ತಾನ್ ಕ್ರಮೇಣೈವ ನಿಕೃತ್ತಕನ್ಧರಾಞ್ಛರೋತ್ತಮೈರತ್ರ ವಿಧಾಯ ವಿಪ್ರಃ ।

ನಿನಾಯ ಲೋಕಂ ಪರಮರ್ಕ್ಕಮಣ್ಡಲಂ ವ್ರಜನ್ತಿ ನಿರ್ಭಿದ್ಯ ಯಮೂರ್ಧ್ವರೇತಸಃ ॥ ೨೬.೮೦ ॥

 

ಹೀಗೆ ಬಂದ ಅವರೆಲ್ಲರ ಕತ್ತುಗಳನ್ನು ಕ್ರಮವಾಗಿ ಆ ದ್ರೋಣರು ತನ್ನ ಬಾಣಗಳಿಂದ ಕತ್ತರಿಸುತ್ತಾರೆ, ಸೂರ್ಯಮಂಡಲದ ಆಚೆ ಇರುವ ಸನ್ಯಾಸಿಗಳು

ಭೇದಿಸಿ ಹೋಗುವ ಲೋಕಕ್ಕೆ ಕಳಿಸಿಕೊಡುತ್ತಾರೆ.

 

ವಿಧೂಯಮಾನೇ ಗುರುಣೋರುಸೈನ್ಯೇ ಪೃಥಾಸುತಾನಾಂ ಪೃತನಾಃ ಪರೇಷಾಮ್ ।

ಪ್ರಾಯೋ ರಣೇ ಮಾರುತಸೂನುನೈವ ಹತಪ್ರವೀರಾ ಮೃದಿತಾಃ ಪರಾದ್ರವನ್ ॥೨೬.೮೧॥

 

ಹೀಗೆ ದ್ರೋಣರಿಂದ ಪಾಂಡವರ ಸೈನ್ಯವು ನಾಶಮಾಡಲ್ಪಡುತ್ತಿದ್ದಾಗ,

ಅತ್ತ ಕೌರವರ ಸೇನೆ ಭೀಮನಿಂದ ತಮ್ಮ ವೀರರನ್ನು ಕಳೆದುಕೊಂಡಿತ್ತಾಗ,

ಅತ್ಯಂತ ಪೀಡಿತವಾಗಿ ಪರಾಭವಗೊಂಡು ಪಲಾಯನ ಮಾಡಿದವಾಗ.

 

ಅಲಮ್ಭುಸೋ ನಾಮ ತದೈವ ರಾಕ್ಷಸಃ ಸಮಾಸದನ್ಮಾರುತಿಮುಗ್ರಪೌರುಷಮ್ ।

ಸ ಪೀಡಿತಸ್ತೇನ ಶರೈಃ ಸುತೇಜನೈಃ ಕ್ಷಣಾದದೃಶ್ಯತ್ವಮವಾಪ ಮಾಯಯಾ ॥೨೬.೮೨ ॥

 

ಆಗಲೇ ಅಲಂಬುಸ ಎನ್ನುವ ರಾಕ್ಷಸ ಉಗ್ರವಾದ ಪರಾಕ್ರಮದ ಭೀಮಸೇನಗೆ ಎದುರಾದ,

ಭೀಮನ ತೀಕ್ಷ್ಣಬಾಣಗಳಿಂದ ನೋವುಂಡು ಕ್ಷಣದಲ್ಲೇ ಮಾಯಾವಿದ್ಯೆಯಿಂದ ಅದೃಶ್ಯನಾದ.

 

ಸೋSದೃಶ್ಯರೂಪೋSನುಚರಾನಪೀಡಯದ್ ಭೀಮಸ್ಯ ತದ್ ವೀಕ್ಷ್ಯ ಚುಕೋಪ ಮಾರುತಿಃ ।

ಅಸ್ತ್ರಜ್ಞತಾಮಾತ್ಮನಿ ಕೇಶವಾಜ್ಞಯಾ ಸನ್ದರ್ಶಯನ್ನಾಗತಧರ್ಮ್ಮಸಙ್ಕಟಃ ॥೨೬.೮೩ ॥

 

ತ್ವಾಷ್ಟ್ರಾಸ್ತ್ರಮಾದತ್ತ ಸ ಕಾಮ್ಯಕರ್ಮ್ಮಹೀನೋSಪಿ ಭೀಮಸ್ತತ ಉತ್ಥಿಥಾಃ ಶರಾಃ ।

ತೇ ಬಾಣವರ್ಯ್ಯಾಸ್ತದದೃಶ್ಯವೇಧಿನೋ ರಕ್ಷೋ ವಿದಾರ್ಯ್ಯಾSವಿವಿಶುರ್ದ್ಧರಾತಳಮ್ ॥ ೨೬.೮೪ ॥

 

ಅಲಂಬುಸ ಅದೃಶ್ಯನಾಗಿ ಭೀಮಸೇನನ ಬೆಂಗಾವಲು ಪಡೆಯನ್ನು ಹಿಂಸೆ ಮಾಡಿದ, ಕೋಪಗೊಂಡ ಭೀಮ ಭಗವದಾಜ್ಞೆಯಿಂದ ತನ್ನಲ್ಲಿ ಅಸ್ತ್ರ ವಿದ್ಯೆಯೂ ಇದೆ ಎಂದು ತೋರಿದ. ಕಾಮ್ಯಕರ್ಮವಿಲ್ಲದ ಭೀಮಸೇನನು ತ್ವಷ್ಟ್ರ ದೇವತಾಕವಾದ ಅಸ್ತ್ರವನ್ನು ತೆಗೆದುಕೊಂಡ. ಆ ಅಸ್ತ್ರದಿಂದ ಎದ್ದ ಬಾಣಗಗಳಿಂದ ಕಾಣದ ಅಲಂಬುಸನ ಸೀಳಿ ಭೂಪ್ರವೇಶ ಮಾಡಿಸಿದ.

 

ತದ್ಧನ್ಯಮಾನಂ ಪ್ರವಿಹಾಯ ಭೀಮಮಪಾದ್ರವದ್ ದೂರತರಂ ಸುಭೀತಮ್ ।

ತತಸ್ತು ಭೀಮೋ ದ್ವಿಷತಾಂ ವರೂಥಿನೀಂ ವಿದ್ರಾವಯಾಮಾಸ ಶರೈಃ ಸುಮುಕ್ತೈಃ ॥ ೨೬.೮೫ ॥

 

ಆ ರಾಕ್ಷಸ ಭೀಮನ ಪೆಟ್ಟು ತಿಂದು, ಭೀಮನ ಬಿಟ್ಟು,ಭಯದಿಂದ ಬಹಳ ದೂರ ಓಡಿಹೋದ.

ತದನಂತರ ಭೀಮಸೇನನು ಶತ್ರುಗಳ ಸೇನೆಯನ್ನು ಉತ್ಕೃಷ್ಟವಾದ ಬಾಣಗಳಿಂದ ಓಡಿಸಿದ.

 

ತದೈವ ಕೃಷ್ಣಾತನಯಾಃ ಸಮೇತಾ ಜಘ್ನುಃ ಶಲಂ ಸಂಯತಿ ಸೌಮದತ್ತಿಮ್ ।

ಅಲಮ್ಭುಸಂ ಪ್ರಾಪ ತದಾ ಘಟೋತ್ಕಚಃ ಪರಸ್ಪರಂ ತೌ ರಥಿನಾವಯುದ್ಧ್ಯತಾಮ್ ॥ ೨೬.೮೬ ॥

 

ಆಗಲೇ ದ್ರೌಪದಿಯ ಮಕ್ಕಳು ಒಟ್ಟಾಗಿ ಸೋಮದತ್ತಪುತ್ರ ಶಲನನ್ನು ಯುದ್ಧದಲ್ಲಿ ಕೊಂದುಹಾಕಿದರು.

ಆಗ ಘಟೋತ್ಕಚನು ಅಲಂಬುಸಗೆ ಎದುರಾಗಿ ಅವರಿಬ್ಬರೂ ಪರಸ್ಪರ ಯುದ್ಧಮಾಡಲು ಪ್ರಾರಂಭಿಸಿದರು.

 

ಘಟೋತ್ಕಚಸ್ತಂ ವಿರಥಂ ವಿಧಾಯ ಖಸ್ಥಂ ಖ ಏವಾಭಿಯುಯೋಧ ಸಂಸ್ಥಿತಃ ।

ತತಸ್ತು ತಂ ಭೀಮಸುತೋ ನಿಗೃಹ್ಯ ನಿಪಾತ್ಯ ಭೂಮೌ ಪ್ರದದೌ ಪ್ರಹಾರಮ್ ॥ ೨೬.೮೭ ॥

 

ಪದಾ ಶಿರಸ್ಯೇವ ಸ ಪಿಷ್ಟಮಸ್ತಕೋ ಮಮಾರ ಮದ್ಧ್ಯೇ ಪೃಥಿವೀಪತೀನಾಮ್ ।

ತಸ್ಮಿನ್ ಹತೇ ಭೈಮಸೇನಿಃ ಕುರೂಣಾಂ ವ್ಯದ್ರಾವಯದ್ ರಥವೃನ್ದಂ ಸಮನ್ತಾತ್ ॥ ೨೬.೮೮ ॥

 

ಘಟೋತ್ಕಚ ಅಲಂಬುಸನ ರಥಹೀನನನ್ನಾಗಿ ಮಾಡಿದ,

ಆಕಾಶದಲ್ಲಿದ್ದ ಅವನೊಡನೆ ಆಕಾಶದಲ್ಲಿಯೇ ಕಾದಿದ.

ಕೆಲವು ಹೊತ್ತು ಯುದ್ಧವಾದಮೇಲೆ ಘಟೋತ್ಕಚನು ಅಲಂಬುಸನ ನಿಗ್ರಹಿಸಿದ,

ನೆಲಕ್ಕೆ ಕೆಡವಿ, ಕಾಲಿನಿಂದ ಪ್ರಹಾರಮಾಡಲು ತಲೆ ಚೂರು-ಚೂರಾಗಿ ರಕ್ಕಸ ಸತ್ತುಹೋದ.

ಅವನು ಸಾಯುವಾಗ ಭೀಮಪುತ್ರ ಘಟೋತ್ಕಚ ಅವನ ಬೆಂಗಾವಲು ಪಡೆ ಓಡಿಸಿದ.

No comments:

Post a Comment

ಗೋ-ಕುಲ Go-Kula