Thursday 5 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 212-220

 

ತದೈವಾನ್ಯೇ ದಿಶೋ ಜಿತ್ವಾ ಸಮೀಯುಸ್ತಸ್ಯ ಯೇsನುಜಾಃ ।

ಸಹದೇವೋ ದಕ್ಷಿಣಾಶಾಂ ಜಿತ್ವಾ ರತ್ನಾನ್ಯುಪಾಹರತ್ ॥೨೧.೨೧೨॥

ಆಗ ಇಂದ್ರಪ್ರಸ್ಥಕ್ಕೆ ಭೀಮನ ಮೂರು ತಮ್ಮಂದಿರ ದಿಗ್ವಿಜಯಾಗಮನ,

ಸಹದೇವ ತಾನು ಹೋದ ದಕ್ಷಿಣ ದಿಕ್ಕನ್ನು ಗೆದ್ದು ತಂದಿದ್ದ ರತ್ನಗಳನ್ನ.

 

[ದಕ್ಷಿಣದಲ್ಲಿ ವಿದರ್ಭದೇಶವಿದೆ. ಅಲ್ಲಿನ ಅಧಿಪತಿ ರುಗ್ಮಿ ಸಹದೇವನಿಗಿಂತ ಬಲಿಷ್ಠನಾಗಿದ್ದ. ಹಾಗಿದ್ದರೆ ಹೇಗೆ ಸಹದೇವ ರುಗ್ಮಿಯನ್ನು ಗೆದ್ದ ಎಂದರೆ:]

ತತ್ರ ರುಗ್ಮೀ ನ ಯುಯುಧೇ ಸಹದೇವೇನ ವೀರ್ಯ್ಯವಾನ್ ।

ಜಿತಃ ಕೃಷ್ಣೇನ ಪೂರ್ವಂ ಯಃ ಶರ್ವಾದಾಪ ಧನುರ್ವರಮ್             ॥೨೧.೨೧೩॥

ದಕ್ಷಿಣದಲ್ಲಿದ್ದ ಬಲಿಷ್ಠ ರುಗ್ಮಿ ಮಾಡಲಿಲ್ಲ ಸಹದೇವನೊಡನೆ ಯುದ್ಧ,

ಕೃಷ್ಣನಿಂದ ರುಗ್ಮಿ ಹಿಂದೆ ಸೋತಾಗ ರುದ್ರನಿಂದ ಶ್ರೇಷ್ಠ ಬಿಲ್ಲನ್ನು ಪಡೆದಿದ್ದ.

 

ತಪಸಾ ತೋಷಿತಾತ್ ಕೃಷ್ಣಾದನ್ಯಾನೇವಾಮುನಾsಖಿಲಾನ್ ।

ವಿಜೇಷ್ಯಸಿ ಯದಾ ಕೃಷ್ಣವಿರೋಧಸ್ತೇ ತದಾ ಧನುಃ                    ॥೨೧.೨೧೪॥

 

ಮಾಮೇಷ್ಯತೀತಿ ತೇನೋಕ್ತೋ ನ ವ್ಯರುದ್ಧ್ಯತ ಕೇಶವೇ ।

ಸ್ವಸುಃ ಸ್ನೇಹಾಚ್ಚ ಕೃಷ್ಣಸ್ಯ ಯಜ್ಞಕಾರಯಿತೃತ್ವತಃ                      ॥೨೧.೨೧೫॥

 

ಭೀಮಾರ್ಜ್ಜುನಬಲಾಚ್ಚೈವ ಮಾದ್ರೇಯಾಯ ದದೌ ಕರಮ್ ।

ಜಿಗ್ಯೇ ಬಲೇನಾನ್ಯನೃಪಾನ್ ಸಹದೇವಃ ಪ್ರತಾಪವಾನ್             ॥೨೧.೨೧೬॥

ರುಗ್ಮಿ ರುದ್ರನ ಕುರಿತು ತಪಸ್ಸನ್ನು ಮಾಡಿದ್ದ,

ತೃಪ್ತ ರುದ್ರನಿಂದ ಅವನು ಬಿಲ್ಲನ್ನು ಪಡೆದಿದ್ದ.

ಆಗ ರುದ್ರ ರುಗ್ಮಿಗೊಂದು ವರವನ್ನು ಕೊಟ್ಟಿದ್ದ,

ಕೃಷ್ಣನ ಬಿಟ್ಟು ಈ ಬಿಲ್ಲಿಂದೆಲ್ಲರ ಗೆಲ್ಲುವೆ ಎಂದಿದ್ದ.

ಒಂದೊಮ್ಮೆ ನೀನು ಕೃಷ್ಣನನ್ನೇ ವಿರೋಧಿಸಿದಾಗ,

ಈ ಬಿಲ್ಲು ಮರಳಿ ನನ್ನ ಬಳಿಗೇ ಬರುವುದಾಗ.

ಹಾಗಾಗಿ ಅವನು ಕೃಷ್ಣನಲ್ಲಿ ಮಾಡುತ್ತಿರಲಿಲ್ಲ ವಿರೋಧ,

ಅಲ್ಲದೇ ತಂಗಿ ರುಗ್ಮಿಣಿಯ ಮೇಲೆ ಪ್ರೀತಿಯಿತ್ತದು ಅಗಾಧ.

ನಡೆಯುತ್ತಿದ್ದದ್ದು ಅದು ಶ್ರೀಕೃಷ್ಣನ ಯಜಮಾನಿಕೆಯಲ್ಲಿ ಯಜ್ಞ,

ಸಹದೇವನ ವಿರೋಧಿಸಿದರೆ ಅದು ಕೃಷ್ಣ ವಿರೋಧಕ್ಕೆ ಸಮಾನ.

ತಂಗಿಯ ನೋಯಿಸಬಾರದೆಂಬುದೂ ಅವನೊಂದು ಭಾವ,

ಇವೆಲ್ಲಾ ಕಾರಣಗಳಿಂದಾಗಿಯೇ ರುಗ್ಮಿ ಮಾಡಲಿಲ್ಲ ಯುದ್ಧವ.

ಭೀಮಾರ್ಜುನರ ಬಲಕ್ಕೆ ಹೆದರಿ ರುಗ್ಮಿ ಸಹದೇವಗೆ ಕೊಟ್ಟ ಕರ,

ದಕ್ಷಿಣದ ಮಿಕ್ಕೆಲ್ಲ ರಾಜರ ತನ್ನ ಬಲದಿಂದ ಗೆದ್ದಿದ್ದ ಮಾದ್ರಿಕುವರ.

 

ತಥಾ ಸ್ಮೃತಂ ಸಮಾಗತಂ ಘಟೋತ್ಕಚಂ ವಿಭೀಷಣೇ ।

ಸಮಾದಿಶದ್ ಯಯೌ ಚ ಸೋsಪಿ ಸೋsದದಾನ್ಮಹಾಕರಮ್             ॥೨೧.೨೧೭॥

ಸ್ಮರಿಸಲು ಘಟೋತ್ಕಚ ಬಂದು ನಿಂತಿದ್ದ,

ಸಹದೇವ ಅವನನ್ನು ವಿಭೀಷಣನಲ್ಲಿಗೆ ಕಳಿಸಿದ್ದ.

ವಿಭೀಷಣ ಎಲ್ಲರಿಗಿಂತ ಹೆಚ್ಚು ಕಪ್ಪವ ಅರ್ಪಿಸಿದ್ದ.

 

[ಈರೀತಿ ವಿಭೀಷಣ ಕಪ್ಪವನ್ನು ಕೊಡಲು ಕಾರಣವೇನೆಂದು ಹೇಳುತ್ತಾರೆ:]

ಪುರಾ ಹಿ ರಾಘವೋದಿತಂ ತದಸ್ಯ ಸೋsಖಿಲಂ ತದಾ ।

ವಿಚಾರ್ಯ್ಯ ಕೇಶವಂ ಚ ತಂ ಬಲಂ ಚ ಭೀಮಪಾರ್ತ್ಥಯೋಃ ।

ದಿವೌಕಸಶ್ಚ ಪಾಣ್ಡವಾನವೇತ್ಯ ಸೋsದದಾತ್ ಕರಮ್              ॥೨೧.೨೧೮॥

ರಾಮಾವತಾರದಲ್ಲಿ ರಾಮಚಂದ್ರ ವಿಭೀಷಣಗೆ ಹೇಳಿದ್ದ ಮುಂದಾಗುವ ಘಟನೆ,

ತನ್ನ ಕೃಷ್ಣಾವತಾರದಲ್ಲಾಗುವ ಪಾಂಡವ ಯಾಗಕ್ಕೆ ಕಪ್ಪ ಸಲ್ಲಿಸಬೇಕೆಂಬ ಸೂಚನೆ.

ಹಾಗಾಗಿ ಕೃಷ್ಣನ ಬಗ್ಗೆ ವಿಚಾರಿಸಿದ,

ಭೀಮಾರ್ಜುನರ ಬಲ ತಿಳಿದವನಾದ.

ಪಾಂಡವರನ್ನು ದೇವತೆಗಳೆಂದು ತಿಳಿದ,

ದೈವಕಾರ್ಯಕ್ಕೆ ಕಪ್ಪವನ್ನು ಕಳುಹಿಸಿದ.

 

ಮಹೌಘರತ್ನಸಞ್ಚಯಂ ಸ ಆಪ್ಯ ಭೀಮಸೇನಜಃ ।

ಯಯೌ ಚ ಮಾದ್ರಿನನ್ದನಂ ಸ ಚಾsಯಯೌ ಸ್ವಕಂ ಪುರಮ್             ॥೨೧.೨೧೯॥

ಘಟೋತ್ಕಚ ಕೋಟಿ ಕೋಟಿ ಕಪ್ಪ ಹಿಡಿದು ಬಂದ,

ಸ್ವೀಕರಿಸಿದ ಸಹದೇವ ತಾ ಇಂದ್ರಪ್ರಸ್ಥಕ್ಕೆ ತೆರಳಿದ.

 

ನಕುಲಃ ಪಶ್ಚಿಮಾಶಾಯಾಂ ವಿಜಿಗ್ಯೇsಖಿಲಭೂಭೃತಃ ।

ಕರಮಾಪ ಚ ವೀರೋsಸೌ ಸೌಹಾರ್ದ್ದಾದೇವ ಮಾತುಲಾತ್ ।

ಆಯಯೌ ಚ ಮಹಾರತ್ನಸಞ್ಚಯೇನ ಸ್ವಕಂ ಪುರಮ್               ॥೨೧.೨೨೦॥

ಪಶ್ಚಿಮದಲ್ಲಿನ ಎಲ್ಲಾ ರಾಜರ ನಕುಲ ಗೆದ್ದ,

ಅಲ್ಲಿ ಮಣಿಸಲಾಗದ ಮಾದ್ರಿ ಅಣ್ಣ ಶಲ್ಯನಿದ್ದ.

ಅವನೊಂದಿಗೆ ನಡೆದ ಸೌಹಾರ್ದಯುತವಾದ ಮಾತು,

ಸಂತುಷ್ಟನಾದ ಶಲ್ಯನಿಂದ ಕರವನ್ನೂ ಕೊಡಮಾಡಿತ್ತು.


 [Contributed by Shri Govind Magal]

No comments:

Post a Comment

ಗೋ-ಕುಲ Go-Kula