Thursday, 5 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 260-269

 

ದೇವಸಙ್ಘಭವಿನಾಂ ಮಹಾನಭೂದೀಕ್ಷ್ಯ ತೋಷ ಇಹ ಕೇಶವೇSಧಿಕಾಮ್ ।

ಅರ್ಚ್ಚನಾಂ ಯ ಇಹ ಮಾನುಷೋ ಜನೋ ಮದ್ಧ್ಯ ಏವ ಸ ತು ಸಂಸ್ಥಿತೋSಭವತ್ ॥೨೧.೨೬೦॥

ರಾಜಸೂಯದಲ್ಲಿ ಕೃಷ್ಣಗಾದ ಅಗ್ರಪೂಜೆ ಕಂಡ ಸುಜೀವರಿಗೆ ಬಲು ಆನಂದ,

ಮಧ್ಯಮದ ಮನುಷ್ಯ ಮಾತ್ರರಿಗೆ ಆದದ್ದಷ್ಟೇ ಮಧ್ಯಮಾವಸ್ಥೆಯ ಸಂಬಂಧ.

 

ಆಸುರಾ ಇಹ ಸುಯೋಧನಾದಯಸ್ತತ್ರ ತೇ ವಿಮನಸೋ ಬಭೂವಿರೇ ।

ದುರ್ವಚೋಭಿರಧಿಕಂ ಚ ಚೇದಿಪಃ ಕೃಷ್ಣಮಾರ್ಚ್ಛದುರುಸದ್ಗುಣಾರ್ಣ್ಣವಮ್             ॥೨೧.೨೬೧॥

ದುರ್ಯೋಧನಾದಿ ರಕ್ಕಸ ಗುಣದವರಿಗೆ ಆಯಿತು ಮನದಲ್ಲೇ ಸಂಕಟ,

ಶಿಶುಪಾಲ ಆರಂಭಿಸಿದ ಗುಣಸಾಗರ ಕೃಷ್ಣಗೆ ಕೆಟ್ಟ ಬೈಗುಳಗಳ ಆಟ.

 

ಸಮಾಹ್ವಯಚ್ಚ ಕೇಶವಂ ಯುಧೇ ತಮಾಶು ಕೇಶವಃ ।

ನಿವಾರ್ಯ್ಯ ತಸ್ಯ ಸಾಯಕಾಞ್ಜಘಾನ ಚಾರಿಣಾ ಪ್ರಭುಃ                           ॥೨೧.೨೬೨॥

ಶಿಶುಪಾಲ ಕೃಷ್ಣಗೀಯುತ್ತಾನೆ ಯುದ್ಧಕ್ಕಾಗಿ ಆಹ್ವಾನ,

ಅವನ ಬಾಣಗಳನ್ನ ತಡೆದ ಸರ್ವಸಮರ್ಥ ನಾರಾಯಣ.

ಚಕ್ರದಿಂದ ಅವನನ್ನು ಸಂಹರಿಸಿಬಿಡುತ್ತಾನೆ ಶ್ರೀಕೃಷ್ಣ  

 

ನಿಕೃತ್ತ್ಯಮಾನಕನ್ಧರಃ ಸ ಭಕ್ತಿಮಾನಭೂದ್ಧರೌ ।

ತಮಾಶ್ರಿತಶ್ಚ ಯೋSಸುರೋ ಮಹಾತಮಃ ಪ್ರಪೇದಿವಾನ್                    ॥೨೧.೨೬೩॥

ಶಿಶುಪಾಲನ ಕತ್ತು ಕತ್ತರಿಸಿ ಕೆಳಗೆ ಬೀಳುವಾಗ,

ಅವನೊಳಗಿದ್ದ ಜಯಗೆ ಭಕ್ತಿ ಅಂಕುರಿಸಿತಾಗ.

ಅವನಾಶ್ರಯಿಸಿದ ದೈತ್ಯ ಬಿದ್ದ ಅಂಧಂತಮಸ್ಸಿಗಾಗ.

 

ಜಯಃ ಪ್ರವಿಶ್ಯ ಕೇಶವಂ ಪುನಶ್ಚ ಪಾರ್ಷದೋSಭವತ್ ।

ಅಸೌ ಚ ಪಾಣ್ಡವಕ್ರತುಃ ಪ್ರವರ್ತ್ತಿತೋ ಯಥೋದಿತಃ                ॥೨೧.೨೬೪॥

ಜಯನೆಂಬ ಜೀವ ಕೇಶವನನ್ನು ಪ್ರವೇಶಿಸಿದ,

ಮತ್ತೆ ಶ್ರೀಮನ್ನಾರಾಯಣನ ದ್ವಾರಪಾಲಕನಾದ.

ಹೀಗೆ ಪಾಂಡವರ ರಾಜಸೂಯ ಯಾಗ,

ಶಾಸ್ತ್ರೋಕ್ತ ನಡೆದು ಸಂಪನ್ನವಾಯಿತಾಗ.

 

ಸುವರ್ಣ್ಣರತ್ನಭಾರಕಾನ್ ಬಹೂನ್ ನೃಪಾ ಉಪಾನಯನ್ ।

ಉಪಾಯನಂ ಸುಯೋಧನಂ ನೃಪೋSದಿಶದ್ ಗ್ರಹೇSಸ್ಯ ಚ                ॥೨೧.೨೬೫॥

ರಾಜರುಗಳು ಕೊಡುತ್ತಾರೆ ಅಮಿತ ಬಂಗಾರ ರತ್ನ ಗಟ್ಟಿಗಳ ಕಾಣಿಕೆಯನ್ನ,

ಯುಧಿಷ್ಠಿರ ದುರ್ಯೋಧನಗೊಪ್ಪಿಸಿದ್ದ ಅವುಗಳ ಸ್ವೀಕರಿಸುವ ಜವಾಬ್ದಾರಿಯನ್ನ.

 

ಅಭೋಜಯಂಸ್ತಥಾ ದ್ವಿಜಾನ್ ಯಥೇಷ್ಟಭಕ್ಷ್ಯಭೋಜ್ಯಕೈಃ ।

ಸುವರ್ಣ್ಣರತ್ನಭಾರಕಾನ್ ಬಹೂಂಶ್ಚ ದಕ್ಷಿಣಾ ದದುಃ                   ॥೨೧.೨೬೬॥

ಬ್ರಾಹ್ಮಣರಿಗೆ ಅವರಿಗಿಷ್ಟವಾದ ಭಕ್ಷ್ಯಭೋಜ್ಯಗಳ ಭೂರಿ ಭೋಜನ,

ಅವರಿಗೆಲ್ಲಾ ಕೊಟ್ಟರು ಬಂಗಾರ ರತ್ನಗಟ್ಟಿಗಳ ಹೇರಳ ದಕ್ಷಿಣೆ ದಾನ.

 

ಯದಿಷ್ಟಮಾಸ ಯಸ್ಯ ಚ ಪ್ರದತ್ತಮೇವ ಪಾಣ್ಡವೈಃ ।

ಸಮಸ್ತಮತ್ರ ಸರ್ವಶೋsಥ ಸಸ್ನುರುದ್ಭೃತಾ ಮುದಾ               ॥೨೧.೨೬೭॥

ಆ ಯಜ್ಞದಲ್ಲಿ ಯಾರ್ಯಾರಿಗೆ ಯಾವುದರ ಬಯಕೆ ಇತ್ತು,

ಅದೆಲ್ಲವೂ ಪಾಂಡವರಿಂದ ಅರ್ಹರೆಲ್ಲರಿಗೂ ಕೊಡಲ್ಪಟ್ಟಿತ್ತು.

ಆಯಿತು ಪಾಂಡವರ ಯಜ್ಞ ಸಂಪನ್ನ ಸಂಪೂರ್ಣ ,

ಪಾಂಡವರು ಎಲ್ಲರೊಂದಿಗೆ ಮಾಡಿದರು ಅವಭೃಥಸ್ನಾನ.

 

ನದತ್ಸುರೋರುದುನ್ದುಭಿಪ್ರಗೀತದೇವಗಾಯಕಾಃ ।

ಪ್ರನೃತ್ತದಿವ್ಯಯೋಷಿತಃ ಸುರಾಪಗಾಂ ವ್ಯಗಾಹಯನ್               ॥೨೧.೨೬೮॥

ದುಂದುಭಿ ಮೊದಲಾದ ದೇವತಾ ವಾದ್ಯಗಳ ವಾದನ,

ಗಂಧರ್ವರ ಭವ್ಯ ಗಾಯನ ;ಅಪ್ಸರೆಯರ ದಿವ್ಯ ನರ್ತನ,

ಅವರೆಲ್ಲಾ ಮಾಡಿದರು ಗಂಗಾನದಿಯಲ್ಲಿ ಪವಿತ್ರ ಸ್ನಾನ.

 

ಸಮಸ್ತರಾಜಸಂಯುತಾ ವಿಗಾಹ್ಯ ಜಾಹ್ನವೀಜಲೇ ।

ಪುರಂ ಯಯುಃ ಪುನಶ್ಚ  ತೇ ಸುಸದ್ಮ ಚಾಗಮನ್  ಸುರಾಃ        ॥೨೧.೨೬೯॥

ಎಲ್ಲಾ ರಾಜರಿಂದೊಡಗೂಡಿದ ಪಾಂಡವರು,

ಪವಿತ್ರ ಗಂಗಾನದಿ ಸ್ನಾನವನ್ನು ಮಾಡಿದರು.

ಮತ್ತೆ ಅವರದು ಇಂದ್ರಪ್ರಸ್ಥದತ್ತ ಪಯಣ,

ದೇವತೆಗಳದು ತಮ್ಮ ಲೋಕದತ್ತ ಯಾನ.


[Contributed by Shri Govind Magal]

No comments:

Post a Comment

ಗೋ-ಕುಲ Go-Kula