ಗತೇಷು ಸರ್ವರಾಜಸು ಸ್ವಕಾಂ ಪುರಂ ಸ್ವಕೇಷು ಚ ।
ಸಭೀಷ್ಮಕೇಷು ಸರ್ವಶಃ ಸಹಾsಮ್ಬಿಕೇಯಕೇಷು ಚ ॥೨೧.೨೭೦॥
ವಿಚಿತ್ರರತ್ನನಿರ್ಮ್ಮಿತೇ ರವಿಪ್ರಭೇ ಸಭಾತಳೇ ।
ಸಕೇಶವೋ ವರಾಸನೇ ವಿವೇಶ ಧರ್ಮ್ಮನನ್ದನಃ ॥೨೧.೨೭೧॥
ಎಲ್ಲಾ ರಾಜರೂ ತಮ್ಮ ತಮ್ಮ
ಪಟ್ಟಣಕ್ಕೆ ತೆರಳುತ್ತಿರುವಾಗ,
ಭೀಷ್ಮ ಧೃತರಾಷ್ಟ್ರರೂ ತಮ್ಮ
ಊರಿನತ್ತ ಹೊರಟಾಗ,
ಸೂರ್ಯಕಾಂತಿಯ ರತ್ನಖಚಿತವಾದ
ಸಭಾಂಗಣದಲ್ಲಿ,
ಕೃಷ್ಣನೊಂದಿಗೆ ಧರ್ಮರಾಜ
ಕುಳಿತ ಉತ್ಕೃಷ್ಟ ಆಸನದಲ್ಲಿ.
ತಥೈವ ರುಗ್ಮಿಣೀಮುಖಾಃ ಪರಿಗ್ರಹಾ ರಮೇಶಿತುಃ ।
ತಥೈವ ಭೀಮಫಲ್ಗುನಾವುಪಾವಿಶನ್ ಹರೇರುಪ ॥೨೧.೨೭೨॥
ಹಾಗೆಯೇ, ರುಗ್ಮಿಣಿ ಮೊದಲಾದ ಕೃಷ್ಣನ
ಪತ್ನಿಯರು,
ಭೀಮಾರ್ಜುನ ಮುಂತಾದವರು
ಕೃಷ್ಣನ ಬಳಿ ಕುಳಿತರು.
[ಇಲ್ಲಿ ವಿವರಿಸಿರುವ
ಘಟನೆಗಳನ್ನು ವ್ಯತ್ಯಾಸ ಶೈಲಿಯಲ್ಲಿ ಭಾರತ ವಿವರಿಸಿರುವುದನ್ನು ಕಾಣುತ್ತೇವೆ. ಪರಮಾತ್ಮ ಕುಳಿತಿರುವಾಗಲೇ ಅವನ ಮುಂದೆ ದುರ್ಯೋಧನನಿಗೆ
ಅವಮಾನವಾಯಿತು ಎನ್ನುತ್ತದೆ ಭಾಗವತ. ಆದರೆ ಶ್ರೀಕೃಷ್ಣ ಮೊದಲೇ ಹೋಗಿದ್ದ ಎಂದು ಮಹಾಭಾರತ
ಹೇಳಿದಂತೆ ಕಾಣುತ್ತದೆ. ಅವೆರಡರ ಕಥಾಶೈಲಿಯನ್ನು
ಕೂಡಿಸಿ ಯಾವ ರೀತಿ ಅರ್ಥಮಾಡಬೇಕು ಎನ್ನುವುದನ್ನು ಆಚಾರ್ಯರು ಇಲ್ಲಿ ವಿವರಿಸಿದ್ದಾರೆ].
ಸಹೈವ ವಾಯುಸೂನುನಾ ತಥೈವ ಪಾರ್ಷತಾತ್ಮಜಾ ।
ಉಪೈವ ರುಗ್ಮಿಣೀಂ ಶುಭಾ ತಥೈವ ಸತ್ಯಭಾಮಿನೀಮ್ ॥೨೧.೨೭೩॥
ದ್ರೌಪದಿಯೂ ಭೀಮನ
ಜೊತೆಯಾಗಿದ್ದಳು,
ರುಗ್ಮಿಣಿ ಸತ್ಯಭಾಮೆಯರೊಂದಿಗೆ
ಕುಳಿತಳು.
ಯಮೌ ಚ ಪಾರ್ಷತಾದಯೋ ಧನಞ್ಜಯಾನ್ತಿಕೇSವಿಶನ್ ।
ತಥೈವ ರಾಮಸಾತ್ಯಕೀ ಸಮೀಪ ಏವ ಭೂಭೃತಃ ॥೨೧.೨೭೪॥
ನಕುಲ-ಸಹದೇವ ಧೃಷ್ಟದ್ಯುಮ್ನಾದಿಗಳು ಕುಳಿತರು ಅರ್ಜುನನ ಬಳಿ,
ಹಾಗೆಯೇ ಬಲರಾಮ ಸಾತ್ಯಕಿಯರು
ಕುಳಿತರು ಕೃಷ್ಣನ ಸಮೀಪದಲ್ಲಿ.
ಸಮಾಸತಾಂ ತು ಸಾ ಸಭಾ ವ್ಯರೋಚತಾಧಿಕಂ ತದಾ ।
ಯಥಾ ಸಭಾ ಸ್ವಯಮ್ಭುವಃ ಸಮಾಸ್ಥಿತಾ ಚ ವಿಷ್ಣುನಾ ॥೨೧.೨೭೫॥
ವಿಷ್ಣುವಿನಿಂದ ಅಲಂಕೃತವಾದ
ಬ್ರಹ್ಮಸಭೆಯಂತೆ,
ಈ ಸಭೆ ಕೂಡಾ ಪ್ರಭೆಯಿಂದ
ಕಂಗೊಳಿಸಿತಂತೆ.
ವಿಚಿತ್ರಹೇಮಮಾಲಿನಃ ಶುಭಾಮ್ಬರಾಶ್ಚ ತೇSಧಿಕಮ್ ।
ಸ್ಪುರತ್ಕಿರೀಟಕುಣ್ಡಲಾ ವಿರೇಜುರತ್ರ ತೇ ನೃಪಾಃ ॥೨೧.೨೭೬॥
ವಿಶೇಷ ಸುವರ್ಣ ಮಾಲೆಗಳ
ಧರಿಸಿದವರು,
ಶುಭ್ರವಸ್ತ್ರ ಹೊಳೆವ ಕಿರೀಟ
ಕುಂಡಲವುಳ್ಳವರು,
ಅನೇಕ ಪ್ರಸಿದ್ಧರಾದ
ರಾಜರೆಲ್ಲಾ ಶೋಭಿಸಿದರು.
ವಿಶೇಷತೋ ಜನಾರ್ದ್ದನಃ ಸಭಾರ್ಯ್ಯಕೋ ಜಗತ್ಪ್ರಭುಃ ।
ಯಥಾ ದಿವೌಕಸಾಂ ಸದಸ್ಯನನ್ತಸದ್ಗುಣಾರ್ಣ್ಣವಃ ॥೨೧.೨೭೭॥
ಜಗದೊಡೆಯನಾದ ಭಗವಂತ
ಪತ್ನಿಯರೊಡನೆ ಕುಳಿತಿದ್ದ,
ದೇವಸಭೆಯ ಮೂಲದಲ್ಲಿರುವಂತೆ
ಅವತಾರದಲ್ಲೂ ಇದ್ದ.
][Contributed by Shri Govind Magal]
No comments:
Post a Comment
ಗೋ-ಕುಲ Go-Kula