Thursday 12 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 06-11

 

ಬಭಾರ ತೇನೈವ ಯುಧಿಷ್ಠಿರಸ್ತಾನ್ ಪ್ರತ್ಯೇಕಶಸ್ತ್ರಿಂಶತದಾಸಿದಾಸಕಾನ್ ।

ಸುವರ್ಣ್ಣಪಾತ್ರೇಷು ಹಿ ಭುಞ್ಜತೇ ಯೇ ಗೃಹೇ ತದೀಯೇ ಬಹುಕೋಟಿದಾಸಿಕೇ   ॥ ೨೨.೦೬॥

ಯುಧಿಷ್ಠಿರನ ಇಂದ್ರಪ್ರಸ್ಥದರಮನೆಯಲ್ಲಿ ಕೋಟಿ ಕೋಟಿ ದಾಸ ದಾಸಿಯರು ಋಷಿ ಮುನಿಗಳ ಸೇವೆಗಿದ್ದರು,

ಪ್ರತಿಮುನಿಗೂ ಮೂವತ್ತು ದಾಸರು ಮೂವತ್ತು ದಾಸಿಯರಿದ್ದು ಸುವರ್ಣಪಾತ್ರೆಯಲಿ ಉಣಬಡಿಸುತ್ತಿದ್ದರು.

ಅಂತಹಾ ಯತಿ ಮುಂತಾದವರು ಧರ್ಮರಾಜ ಸಂಪಾದಿಸಿದ ಆ ವಿಶೇಷ ಅಕ್ಷಯ ಪಾತ್ರೆಯಿಂದ ಪೋಷಿಸಲ್ಪಟ್ಟರು.

 

ಸತ್ಸಙ್ಗಮಾಕಾಙ್ಕ್ಷಿಣ ಏವ ತೇSವಸನ್  ಪಾರ್ತ್ಥೈಃ ಸಹಾನ್ಯೇ ಚ ಮುನೀನ್ದ್ರವೃನ್ದಾಃ ।

ಶ್ರುಣ್ವನ್ತ ಏಭ್ಯಃ ಪರಮಾರ್ತ್ಥಸಾರಾಃ ಕಥಾ ವದನ್ತಶ್ಚ ಪುರಾತನಾಸ್ತಥಾ ॥ ೨೨.೦೭॥

ಆ ಎಲ್ಲಾ ಯತಿಗಳಿಗಿತ್ತು ಸಜ್ಜನ ಸಂಗದ ಉದ್ದೇಶ,

ಅದಕೆಂದೇ ಅವರೆಲ್ಲರದು ಪಾಂಡವರ ಸಹವಾಸ.

ಎಲ್ಲರಿಗೆ ಇತ್ತು ಹರಿಮಹಿಮೆಯ ಕಥಾಪೀಯೂಷ.


ಏವಂ ಗಜಾನಾಂ ಬಹುಕೋಟಿವೃನ್ದಾಂಸ್ತಥಾ ರಥಾನಾಂ ಚ ಹಯಾಂಶ್ಚ ವೃನ್ದಶಃ ।

ವಿಸೃಜ್ಯ ರತ್ನಾನಿ ನರಾಂಶ್ಚ ವೃನ್ದಶೋ ವನೇ ವಿಜಹ್ರುರ್ದ್ದಿವಿ ದೇವವತ್ ಸುಖಮ್             ॥ ೨೨.೦೮॥

ಪಾಂಡವರಿಗೆ ಇಂದ್ರಪ್ರಸ್ಥದಲ್ಲಿ ಕೋಟಿ ಕೋಟಿ ಆನೆ ರಥ ಕುದುರೆಗಳು,

ರತ್ನರಾಶಿ ಸೇವಕರು ಅಧಿಕಾರಿಗಳು ಮೊದಲಾದ ಅನೇಕ ವೈಭವಗಳು.

ಅದ್ಯಾವುದೂ ಇರದಿದ್ದರೂ ಕಾಡಲ್ಲಿಯೇ ಅವರಿಗೆ ಸ್ವರ್ಗಸುಖದ ಧಾರ,

ದೇವತಾಲೋಕ ಸದೃಶವಾದ ಸಕಲ ವೈಭೋಗಗಳ ಸಮನಾದ ವಿಹಾರ.

 

ಗವಾಂ ಚ ಲಕ್ಷಂ ಪ್ರದದಾತಿ ನಿತ್ಯಶಃ ಸುವರ್ಣ್ಣಭಾರಾಂಶ್ಚ ಶತಂ ಯುಧಿಷ್ಠಿರಃ ।

ಸಭ್ರಾತೃಕೋSಸೌ ವನಮಾಪ್ಯ ಶಕ್ರವನ್ಮುಮೋದ ವಿಪ್ರೈಃ ಸಹಿತೋ ಯಥಾಸುಖಮ್ ॥೨೨.೦೯ ॥

ಲಕ್ಷ ಹಸುಗಳು ಬಂಗಾರದ ಗಟ್ಟಿಗಳ ನಿತ್ಯ ದಾನ ಮಾಡುವುದು ಧರ್ಮರಾಜನ ಪರಿಪಾಠ,

ಕಾಡಲ್ಲಿಯೂ ಅವನದು ವಿಪ್ರರೊಂದಿಗೆ ಸ್ವರ್ಗಸದೃಶವಾದ ಇಂದ್ರಲೋಕ ಸುಖದ ನೋಟ.

 

ಪಾರ್ತ್ಥೇಷು ಯಾತೇಷು ಕಿಮತ್ರ ಕಾರ್ಯ್ಯಮಿತಿ ಸ್ಮ ಪೃಷ್ಟೋ ವಿದುರೋSಗ್ರಜೇನ ।

ಆಹೂಯ ರಾಜ್ಯಂ ಪ್ರತಿಪಾದಯೇತಿ ಪ್ರಾಹೈನಮಾಹಾಥ ರುಷಾSSಮ್ಬಿಕೇಯಃ ॥೨೨.೧೦॥

ಪಾಂಡವರು ಕಾಡಿಗೆ ಹೋದ ಬಳಿಕ ಮುಂದೇನು ಎಂದು ಧೃತರಾಷ್ಟ್ರ ವಿದುರನ ಕೇಳುತ್ತಾನೆ,

ಪಾಂಡವರ ಕರೆಸಿ ರಾಜ್ಯ ಹಿಂದಿರುಗಿಸು ಎಂದ ವಿದುರಗೆ ಧೃತರಾಷ್ಟ್ರ ಸಿಟ್ಟಿನಿಂದ ಹೇಳುತ್ತಾನೆ.

 

ಜ್ಞಾತಂ ಪ್ರತೀಪೋSಸಿ ಮಮಾSತ್ಮಜಾನಾಂ ನ ಮೇ ತ್ವಯಾ ಕಾರ್ಯ್ಯಮಿಹಾಸ್ತಿ ಕಿಞ್ಚಿತ್ ।

ಯಥೇಷ್ಟತಸ್ತಿಷ್ಠ ವಾ ಗಚ್ಛ ವೇತಿ ಪ್ರೋಕ್ತೋ ಯಯೌ ವಿದುರಃ ಪಾಣ್ಡುಪುತ್ರಾನ್ ॥೨೨.೧೧ ॥

ಸ್ಪಷ್ಟವಾಗಿ ನನ್ನ ಮಕ್ಕಳ ವಿರುದ್ಧ ಕೆಲಸ ಮಾಡುತ್ತಿರುವೆ ನೀನು,

ನಿನ್ನಿಂದೇನೂ ಆಗಬೇಕಿಲ್ಲ, ನಿನ್ನನ್ನು ಸಹಿಸಲಾಗದವನು ನಾನು.

ಇಷ್ಟವಾದರೆ ಇರು, ಇಲ್ಲವಾದರೆ ತೊಲಗು ನೀನು ಎನ್ನುತ್ತಾನೆ,

ಧೃತರಾಷ್ಟ್ರನ ನುಡಿ ಕೇಳಿದ ವಿದುರ ಪಾಂಡವರೆಡೆ ತೆರಳುತ್ತಾನೆ.


 [Contributed by Shri Govind Magal]

No comments:

Post a Comment

ಗೋ-ಕುಲ Go-Kula