Thursday 5 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 326-332

 

ಸೂತೋ ಗತ್ವಾ ತದನ್ತಂ ಸಮಕಥಯದಿಮಾಂ ದ್ಯೂತಮದ್ಧ್ಯೇ ಜಿತಾSಸಿ

 ಕ್ಷಿಪ್ರಂ ಚಾsಯಾಹಿ ರಾಜ್ಞಾಂ ಸಮಿತಿಮುರುತರಾಮಿತ್ಯಥೋ ಸಾsಪ್ಯವಾದೀತ್ ।

ನಾಹಂ ಯಾಸ್ಯೇ ಗುರೂಣಾಂ ಸಮಿತಿಮಿತಿ ಯಯೌ ಸೋsಪ್ಯಮುಂ ಭೀಮಭೀತಂ

ಜ್ಞಾತ್ವಾ ದುಃಶಾಸನಂ ಸೋsಪ್ಯದಿಶದಥ ನೃಪೋ ಧಾರ್ತ್ತರಾಷ್ಟ್ರೋSನುಜಂ ಸ್ವಮ್ ॥೨೧.೩೨೬॥

ದುರ್ಯೋಧನನ ಸಾರಥಿ ದ್ರೌಪದಿಯ ಬಳಿ ಬರುತ್ತಾನೆ,

ಅವಳನ್ನು ಕುರಿತು ಈ ಕೆಳಗಿನ ಮಾತುಗಳನ್ನು ಹೇಳುತ್ತಾನೆ.

ನೀನು ಈಗ ಸೋತುಹೋಗಿದ್ದೀಯಾ ಜೂಜಿನಲ್ಲಾಗಿ ಪಣ,

ಹೀಗಾಗಿ ರಾಜರ ಸಮೂಹದ ಎದುರಿಗೆ ಬರಬೇಕು ತಕ್ಷಣ.

ದ್ರೌಪದಿ ಹೇಳುತ್ತಾಳೆ -ನಾನು ಈಗ ಹಿರಿಯರ ಸಮೂಹದ ಸಭೆಯೆದುರು ಬರಲಾರೆ,

ದುಶ್ಯಾಸನಗೆ ಆಜ್ಞಾಪಿಸಿದ ದುರ್ಯೋಧನನದು ಸಾರಥಿ ಭೀಮಗಂಜಿದ್ದಾನೆಂಬ ವಿಚಾರಧಾರೆ.

 

ಸ ಪಾಪಪೂರುಷೋತ್ತಮಃ ಪ್ರಗೃಹ್ಯ ಕೇಶಪಕ್ಷಕೇ ।

ಪುರಃ ಸ್ವಮಾತುರಾನಯತ್ ಸಭಾಮಯುಗ್ಮವಾಸಸೀಮ್             ॥೨೧.೩೨೭॥

ಪಾಪಾಗ್ರಣ್ಯ ದುಶ್ಯಾಸನ ದ್ರೌಪದಿಯ ಮುಡಿ ಹಿಡಿದು ಎಳೆದುಕೊಂಡು ಬಂದ,

ತನ್ನ ತಾಯಿ ಎದುರೇ ಏಕವಸ್ತ್ರಧಾರಿ ದ್ರೌಪದಿಯ ಭಂಡತನದಿ ಎಳೆದು ತಂದ.

 

ಸಮಾಹೃತಾ ರಜಸ್ವಲಾ ಜಗಾದ ಭೀಷ್ಮಪೂರ್ವಕಾನ್ ।

ಅಧರ್ಮ್ಮ ಏಷ ವಾರ್ಯ್ಯತೇ ನ ಧರ್ಮ್ಮಿಬಿರ್ಭವದ್ವಿದೈಃ ॥೨೧.೩೨೮॥

ಋತುಮತಿಯಾಗಿದ್ದ ದ್ರೌಪದಿ ಹೇಳುತ್ತಾಳೆ: ಭೀಷ್ಮಾದಿಗಳೇ ನೀವೆಲ್ಲಾ ಧಾರ್ಮಿಕರು,

ನೀವು ಇಂಥಾ ಅಧರ್ಮ ತಡೆಯಲಾಗುತ್ತಿಲ್ಲವೇ ಎಂಬುದು ಎನ್ನಯ ತಕರಾರು.

 

ಕಥಂ ಛಲಾತ್ಮಕೇ ದ್ಯೂತೇ ಜಿತೇ ಧರ್ಮ್ಮಜಯೋ ಭವೇತ್ ।

ನಹಿ ದ್ಯೂತಂ ಧರ್ಮ್ಯಮಾಹುರ್ವಿಶೇಷೇಣ ತು ಭೂಭುಜಾಮ್ ॥೨೧.೩೨೯॥

ಮೋಸದಿಂದ ಜೂಜಿನಲ್ಲಿ ಆಗಲು ಸೋಲು,

ಅದಕ್ಹೇಗೆ ದೊರಕೀತು ಧರ್ಮಜಯದ ಪಾಲು.

ಮೊದಲು ಜೂಜು ಧರ್ಮವಲ್ಲವೇ ಅಲ್ಲ,

ವಿಶೇಷತಃ ರಾಜರಿಗೆ ಇದು ಸಲ್ಲುವುದಿಲ್ಲ.

 

ಯೇ ಧರ್ಮ್ಮಂ ನ ವದನ್ತೀಹ ನ ತೇ ವೃದ್ಧಾ ಇತೀರಿತಾಃ ।

ಅವೃದ್ಧಮಣ್ಡಿತಾಂ ನೈವ ಸಭೇತ್ಯಾಹುರ್ಮ್ಮನೀಷಿಣಃ     ॥೨೧.೩೩೦॥

ಧರ್ಮವನ್ನು ಎತ್ತಿ ಹಿಡಿಯದವರು ವೃದ್ಧರೇ ಅಲ್ಲ,

ಜ್ಞಾನವೃದ್ಧರಿರದ ಸಭೆಯನ್ನು ಸಭೆ ಅನ್ನುವುದಿಲ್ಲ.

 

ಕಥಂ ದ್ಯೂತೇ ಜಿತಾ ಚಾಹಮಜಿತೇ ಸ್ವಪತೌ ಸ್ಥಿತೇ ।

ಸಮಾನಧರ್ಮ್ಮಿಣೀಮಾಹುರ್ಭಾರ್ಯ್ಯಾಂ  ಯಸ್ಮಾದ್ ವಿಪಶ್ಚಿತಃ ॥೨೧.೩೩೧॥

ಸೋಲದೇ ಇರುವ ನನ್ನ ಗಂಡನಿದ್ದಾಗ,

ನನಗೆ ಹೇಗೆ ಬಂತು ಸೋಲಿನ ಯೋಗ.

ಜ್ಞಾನಿಗಳೆಂಬಂತೆ:ಸತಿ ಪತಿಯದೇ ಒಂದು ಭಾಗ.

 

ಸಹೈವ ಕರ್ಮ್ಮ ಕರ್ತ್ತವ್ಯಂ ಪತೌ ದಾಸೇ ಹಿ ಭಾರ್ಯ್ಯಯಾ ।

ದಾಸೀತ್ವಂ ನ ಪೃಥಙ್ ಮೇ ಸ್ಯಾಜ್ಜಿತೇSಪಿ ಹಿ ಪತೌ ತತಃ ॥೨೧.೩೩೨॥

ಗಂಡ ಒಂದು ವೇಳೆ ಸೋತು ಆಗಿದ್ದರೂ ದಾಸ,

ಹೆಂಡತಿಯದು ಅವನೊಟ್ಟಿಗೇ ಇರುವ ಸಹವಾಸ.

ಅವಳಿಗೆ ಪ್ರತ್ಯೇಕವಾದ ದಾಸ್ಯತ್ವವಿಲ್ಲ,

ದ್ರೌಪದಿ ಬಿಡಿಸಿಡುತ್ತಾಳೆ ಧರ್ಮಜಾಲ.


 [Contributed by Shri Govind Magal]

No comments:

Post a Comment

ಗೋ-ಕುಲ Go-Kula