Sunday 8 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 01-05

 

೨೨. ಅರಣೀಪ್ರಾಪ್ತಿಃ

 

̐

ಆಗನ್ತುಕಾಮಾನ್ ಪುರವಾಸಿನಸ್ತೇ ಸಂಸ್ಥಾಪ್ಯ ಕೃಚ್ಛ್ರೇಣ ಕುರುಪ್ರವೀರಾಃ ।

ರಾತ್ರೌ ಪ್ರವಿಷ್ಟಾ ಗಹನಂ ವನಂ ಚ ಕಿರ್ಮ್ಮೀರಮಾಸೇದುರಥೋ ನರಾಶಮ್     ॥ ೨೨.೦೧ ॥

ನಿಮ್ಮೊಂದಿಗೇ ಇರುತ್ತೇವೆಂದು ಬಂದಿದ್ದರು ಅನೇಕ ನಾಗರೀಕರು,

ಬಹುಕಷ್ಟದಿಂದವರ ತಡೆದ ಪಾಂಡವರು ರಾತ್ರಿ ಅಡವಿ ಹೊಕ್ಕರು.

ಅಲ್ಲಿ ನರಭಕ್ಷಕ ಕಿರ್ಮೀರ ಎಂಬ ರಾಕ್ಷಸನನ್ನು ನೋಡಿದರು.

 

ಬಕಾನುಜೋSಸೌ ನಿಖಿಲೈರಜೇಯೋ ವರಾದ್ ಗಿರೀಶಸ್ಯ ನಿಹನ್ತುಕಾಮಃ ।

ಸದಾರಸೋದರ್ಯ್ಯಮಭಿಪ್ರಸಸ್ರೇ ಭೀಮಂ ಮಹಾವೃಕ್ಷಗಿರೀನ್ ಪ್ರಮುಞ್ಚನ್ ॥ ೨೨.೦೨ ॥

ಕಿರ್ಮೀರ -ಬಕಾಸುರ ರಕ್ಕಸನ ತಮ್ಮನವ,

ರುದ್ರವರಬಲದಿಂದಾಗಿದ್ದ ಅವನು ಅಜೇಯ.

ಅಂಥಾ ಕಿರ್ಮೀರ ಹೆಂಡತಿ ಅಣ್ಣತಮ್ಮಂದಿರಿಂದ ಕೂಡಿದ ಭೀಮನನ್ನು,

ಕೊಲ್ಲಲು ಬಯಸಿ ಎಸೆಯುತ್ತಾ ಬಂದ ಗಿಡ ಮರ ದೊಡ್ಡ ಬಂಡೆಗಳನ್ನು.

 

ಸ ಸಮ್ಪ್ರಹಾರಂ ಸಹ ತೇನ ಕೃತ್ವಾ ಭೀಮೋ ನಿಪಾತ್ಯಾSಶು ಧರಾತಳೇ ತಮ್ ।

ಚಕ್ರೇ ಮಖೇ ಸಙ್ಗರನಾಮಧೇಯೇ ಪ್ರಸ̐ಹ್ಯ ನಾರಾಯಣದೈವತೇ ಪಶುಮ್     ॥ ೨೨.೦೩ ॥

ಭೀಮಸೇನ ಕಿರ್ಮೀರ ರಕ್ಕಸನ ಜೊತೆ ಯುದ್ಧವನ್ನು ಮಾಡುತ್ತಾನೆ,

ನಾರಾಯಣ ದೇವತೆಯಾದ ಆ ಯಜ್ಞದಲ್ಲವನ ಬಲಿ ಮಾಡುತ್ತಾನೆ.

(ಆ ದೈವಾನುಸಂಧಾನದಿಂದ ಭೀಮ ಕಿರ್ಮೀರನ ಸಂಹರಿಸುತ್ತಾನೆ.)

 

ನಿಹತ್ಯ ರಕ್ಷೋ ವನಮದ್ಧ್ಯಸಂಸ್ಥಾಸ್ತದಾ ಯತೀನಾಮಯುತೈಃ ಸಮೇತಾಃ ।

ಅಶೀತಿಸಾಹಸ್ರಮುನಿಪ್ರವೀರೈರ್ದ್ದಶಾಂಶಯುಕ್ತೈಃ ಸಹಿತಾ ವ್ಯಚಿನ್ತಯನ್   ॥ ೨೨.೦೪ ॥

ಕಿರ್ಮೀರನ ಕೊಂದ ಪಾಂಡವರೊಂದಿಗಿದ್ದ ಯತಿಗಳು ಹತ್ತು ಸಾವಿರ,

ಮತ್ತೆ ಅವರೊಂದಿಗಿದ್ದ ಋಷಿ ಮುನಿಗಳು ಎಂಬತ್ತೆಂಟು ಸಾವಿರ,

ಕಾಡಲ್ಲಿದ್ದ ಪಾಂಡವರಿಗೆ ಅವರೆಲ್ಲರ ಆಹಾರ ಪೋಷಣೆಯ ವಿಚಾರ.

 

ವಿಚಿನ್ತ್ಯ ತೇಷಾಂ ಭರಣಾಯ ಧರ್ಮ್ಮಜಃ ಸಮ್ಪೂಜ್ಯ ಸೂರ್ಯ್ಯಸ್ಥಿತಮಚ್ಯುತಂ ಪ್ರಭುಮ್ ।

ದಿನೇSಕ್ಷಯಾನ್ನಂ ಪಿಠರಂ ತದಾSSಪ ರತ್ನಾದಿದಂ ಕಾಮವರಾನ್ನದಂ ಚ         ॥ ೨೨.೦೫ ॥

ಧರ್ಮರಾಜನಿಗೆ ಇತ್ತು ಅವರೆಲ್ಲರ ಪೋಷಣೆಯ ಚಿಂತನೆ,

ಅನನ್ಯವಾಗಿ ಪೂಜಿಸಿದ ಸೂರ್ಯಾಂತರ್ಯಮಿ ಹರಿಯನ್ನೇ.

ದಿನಪೂರ್ತಿ ಖಾಲಿಯಾಗದೇ ಅನ್ನ ರತ್ನ ಕೊಡುವಂಥ,

ಪಾತ್ರಯೊಂದನ್ನು ದೈವಾನುಗ್ರಹದಿಂದ ಪಡೆದನಾತ.

 [Contributed by Shri Govind Magal]

No comments:

Post a Comment

ಗೋ-ಕುಲ Go-Kula