Thursday 5 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 233-240

 

ತತೋ ಯಜ್ಞಃ ಪ್ರವವೃತೇ ಕೃಷ್ಣದ್ವೈಪಾಯನೇರಿತಃ ।

ಋತ್ವಿಜೋ ಮುನಯೋSತ್ರಾSಸನ್ ಸರ್ವವಿದ್ಯಾಸು ನಿಷ್ಠಿತಾಃ             ॥೨೧.೨೩೩॥

ಆನಂತರ ಪ್ರಾರಂಭವಾಯಿತು ವ್ಯಾಸರಿಂದ ಪ್ರೇರಿತವಾದ ಯಾಗ,

ಸರ್ವವಿದ್ಯಾನಿಷ್ಣಾತ ಮುನಿಗಳು ವಹಿಸಿದರು ಪುರೋಹಿತರ ಜಾಗ.

 

ದ್ವೈಪಾಯನೋಕ್ತವಿಧಿನಾ ದೀಕ್ಷಯಾಞ್ಚಕ್ರಿರೇ ನೃಪಮ್ ।

ಜ್ಯೇಷ್ಠತ್ವಾದ್ ಯಾಜಮಾನಂ ತು ಪ್ರಣಿಧಾಯ ಯುಧಿಷ್ಠಿರೇ              ॥೨೧.೨೩೪॥

 

ಭೀಮಾರ್ಜ್ಜುನಾದಯಃ ಸರ್ವೇ ಸಹ ತೇನ ಸಮಾಸಿರೇ ।

ಬ್ರಹ್ಮಾಣಿಪದಯೋಗ್ಯತ್ವಾತ್ ಕೃಷ್ಣೈಕಾ ಯಜ್ಞಪತ್ನ್ಯಭೂತ್              ॥೨೧.೨೩೫॥

 

ವ್ಯಾಸರಾಜ್ಞೆಯಂತೆ ಪುರೋಹಿತರು ಯಜ್ಞದೀಕ್ಷಿತನನ್ನಾಗಿ ಮಾಡಿದರು ಧರ್ಮರಾಜನನ್ನ,

ಭೀಮಾರ್ಜುನ ಮೊದಲಾದವರೂ ದೀಕ್ಷಿತರಾದರು ಅಣ್ಣಗೆ ಕೊಟ್ಟು ಯಜಮಾನಿಕೆಯನ್ನ.

ಪದವಿಯೋಗ್ಯಳಾದ ದ್ರೌಪದಿ (ಬ್ರಹ್ಮಾಣಿ) ವಹಿಸಿದಳು ಯಜ್ಞಪತ್ನಿಯ ಸ್ಥಾನವನ್ನ.

 

ಪದಾಯೋಗ್ಯತಯಾ ನಾನ್ಯಾಃ ಪತ್ನ್ಯಸ್ತೇಷಾಂ ಸಹಾSಸಿರೇ ।

ಆಜ್ಞಯೈವ ಜಗದ್ಧಾತುರ್ವ್ಯಾಸಸ್ಯಾನನ್ತತೇಜಸಃ                        ॥೨೧.೨೩೬॥

ಪಾಂಡವರ ಉಳಿದ ಪತ್ನಿಯರು,

ಬ್ರಹ್ಮಾಣಿ ಪದವಿಗೆ ಅರ್ಹರಲ್ಲದವರು,

ಅವರಿಗೆಲ್ಲಾ ವ್ಯಾಸರ ಅನುಮತಿಯಿರಲಿಲ್ಲ,

ಹಾಗಾಗಿ ಅವರ್ಯಾರೂ ದೀಕ್ಷೆಗೆ ಕೂರಲಿಲ್ಲ.

 

ಸ್ಥಲಮಪ್ಯತ್ರ ಸರ್ವಂ ಹಿ ರತ್ನಹೇಮಮಯಂ ತ್ವಭೂತ್ ।

ಕಿಮು ಪಾತ್ರಾದಿಕಂ ಸರ್ವಂ ಶಿಭಿರಾಣಿ ಚ ಸರ್ವಶಃ                    ॥೨೧.೨೩೭॥

ಅಭೂತಪೂರ್ವವಾಗಿತ್ತು ಆ ಯಜ್ಞವೈಭವ,

ನೆಲವು ಕೂಡಾ ಆಗಿತ್ತು ಸ್ವರ್ಣರತ್ನಮಯ.

ಪಾತ್ರೆ ಶಿಬಿರವೆಲ್ಲವೂ ರತ್ನಬಂಗಾರಮಯ.

 

ಆಹೂತಂ ದಿಗ್ಜಯೇ ಪಾರ್ತ್ಥೈಸ್ತದಾ ಲೋಕದ್ವಿಸಪ್ತಕಮ್ ।

ಸರ್ವಮತ್ರಾsಗಮದ್ ಬ್ರಹ್ಮಶರ್ವಶಕ್ರಾದಿಪೂರ್ವಕಮ್             ॥೨೧.೨೩೮॥

ದಿಗ್ವಿಜಯ ಕಾಲಕ್ಕೆ ಪಾಂಡವರು ಕೊಟ್ಟಿದ್ದರು ಬ್ರಹ್ಮ ರುದ್ರ ಇಂದ್ರಾದಿಗಳಿಗೆ ಆಮಂತ್ರಣ,

ಬ್ರಹ್ಮ ರುದ್ರ ಇಂದ್ರಾದಿಗಳಲ್ಲದೇ ಹದಿನಾಲ್ಕು ಲೋಕದ ಆಮಂತ್ರಿತರದಾಗಿತ್ತಲ್ಲಿ ಆಗಮನ.

 

ಭೀಷ್ಮೋ ದ್ರೋಣಶ್ಚ ವಿದುರೋ ಧೃತರಾಷ್ಟ್ರಃ ಸಹಾತ್ಮಜಃ ।

ಸಸ್ತ್ರೀಕಾ ಆಯಯುಸ್ತತ್ರ ಬಾಹ್ಲೀಕಶ್ಚ ಸಹಾತ್ಮಜಃ                      ॥೨೧.೨೩೯॥

ಭೀಷ್ಮ, ದ್ರೋಣ, ವಿದುರ ಮೊದಲಾದ ಅನೇಕ ಗಣ್ಯರು,

ಮಕ್ಕಳೊಡನೆ ಬಂದ ಧೃತರಾಷ್ಟ್ರನ ಸ್ತ್ರೀ ಪರಿವಾರದವರು,

ಬಾಹ್ಲೀಕ ರಾಜ ಮತ್ತವನ ಮಕ್ಕಳೂ ಬಂದು ಸೇರಿದ್ದರು.

 

ತಥೈವ ಯಾದವಾಃ ಸರ್ವೇ ಬಲಭದ್ರಪುರೋಗಮಾಃ ।

ರುಗ್ಮಿಣೀಸತ್ಯಭಾಮಾದ್ಯಾ ಮಹಿಷ್ಯಃ ಕೇಶವಸ್ಯ ಚ                    ॥೨೧.೨೪೦॥

ಬಲರಾಮ ಮೊದಲಾದ ಯಾದವರೆಲ್ಲಾ ಬಂದರು,

ರುಗ್ಮಿಣಿ, ಭಾಮೆ ಕೃಷ್ಣಮಹಿಷಿಯರೂ ಸೇರಿದರು.


[Contributed by Shri Govind Magal]

No comments:

Post a Comment

ಗೋ-ಕುಲ Go-Kula