Friday 6 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 389-395

 

ತತೋ ವಿಮುಕ್ತಾಃ ಪ್ರಯಯುಶ್ಚ ಪಾರ್ತ್ಥಾ ಗುರೂನ್ ಪ್ರಣಮ್ಯ ಸ್ವಪುರಂ ಸಕೃಷ್ಣಾಃ ।

ದುರ್ಯ್ಯೋಧನಾನನ್ತರಜೋ ಜಗಾದ ತಾತಂ ನಿಜಂ ಪಾಪಕೃತಾಂ ಪ್ರಧಾನಃ ॥೨೧.೩೮೯॥

ಬಿಡುಗಡೆಯಾದ ಪಾಂಡವರು ದ್ರೌಪದಿಯೊಂದಿಗೆ,

ತಮ್ಮೂರಿಗೆ ಹೊರಟರು ನಮಸ್ಕರಿಸಿ ಹಿರಿಯರಿಗೆ.

ಇತ್ತ ದುರ್ಯೋಧನನ ತಮ್ಮನಾದ ಪಾಪಾಗ್ರಣ್ಯ,

ತನ್ನಪ್ಪನನ್ನು ಕುರಿತು ಮಾತನಾಡಿದ ದುಶ್ಯಾಸನ.

 

ಸಮಸ್ತಪಾಣ್ಡವಶ್ರಿಯಂ ಸಮಾಗತಾಮಹೋ ಪುನಃ ।

ವ್ಯಮೋಚಯೋ ವೃಕೋದರಾದ್ ವಧಶ್ಚ ನೋ ದ್ಧ್ರುವೋ ಭವೇತ್             ॥೨೧.೩೯೦॥

ಅನಾಯಾಸವಾಗಿ ಸಿಕ್ಕಿತ್ತು ಪಾಂಡವರ ಸಂಪತ್ತು,

ನೀನು ಸುಲಭದಿ ಬಿಟ್ಟುಕೊಟ್ಟೆ ಕೈಗೆ ಬಂದ ತುತ್ತು.

ತಪ್ಪದು ನಮಗೆ ಭೀಮನಿಂದ ಮರಣದ ಕುತ್ತು.

 

ಅತಃ ಪುನಶ್ಚ ಪಾಣ್ಡವಾನ್ ಸಮಾಹ್ವಯಸ್ವ ನಃ ಕೃತೇ ।

ಪುನಶ್ಚ ದೇವನಂ ಭವೇಜ್ಜಿತೋ ವನಂ ಪ್ರಯಾತು ಚ                 ॥೨೧.೩೯೧॥

ನಮ್ಮ ಉಳಿವಿಗಾಗಿ ಮತ್ತೊಮ್ಮೆ ಪಾಂಡವರ ಕರೆಸು,

ಜೂಜಾಡಿ ಸೋತವರು ಕಾಡಿಗೆ ತೆರಳುವುದು ಸೊಗಸು.

 

ತೇನೋಕ್ತಃ ಸ ತದಾ ರಾಜಾ ಪಾಣ್ಡವಾನ್ ಪುನರಾಹ್ಯಯತ್ ।

ಪುನಃ ಪಿತ್ರಾ ಸಮಾಹೂತೋ ದೇವನಾಯ ಯುಧಿಷ್ಠಿರಃ ।

ಭ್ರಾತೃಭಿರ್ವಾರ್ಯ್ಯಮಾಣೋsಪಿ ಕೃಷ್ಣಯಾ ಚಾSಗಮತ್ ಸಭಾಮ್             ॥೨೧.೩೯೨॥

 

ಹೀಗೆ ದುಶ್ಯಾಸನ ತಂದೆ ಧೃತರಾಷ್ಟ್ರಗೆ ಹೇಳಿದ,

ಅಂಧರಾಜ ಮತ್ತೆ ಪಾಂಡವರ ಜೂಜಿಗೆ ಕರೆಸಿದ.

ಮತ್ತೊಮ್ಮೆ ಧರ್ಮರಾಜ ದೊಡ್ಡಪ್ಪನ ಕರೆ ಸ್ವೀಕರಿಸಿದ,

ತಮ್ಮಂದಿರು ದ್ರೌಪದಿ ತಡೆದರೂ ಜೂಜಿಗೆ ತೆರಳಿದ.

 

ದ್ವಾದಶಾಬ್ದಂ ವನೇ ವಾಸಮಜ್ಞಾತತ್ವೇನ ವತ್ಸರಮ್ ।

ವಾಸಂ ಪ್ರಸಿದ್ಧನೃಪತೇಃ ಪುರೇ ನೈವಾತಿದೂರತಃ ॥೨೧.೩೯೩॥

 

ಕೃಷ್ಣಾಯಾಃ ಪಾಣ್ಡವಾನಾಂ ವಾ ದರ್ಶನೇSಜ್ಞಾತವಾಸಿನಾಮ್ ।

ಏಕಸ್ಯಾಪಿ ಸಮಸ್ತಾನಾಂ ದ್ವಾದಶಾಬ್ದಂ ಪುನರ್ವನಮ್             ॥೨೧.೩೯೪॥

 

ವತ್ಸರಾಜ್ಞಾತವಾಸಂ ಚ ತ್ಯಾಗೇSಪ್ಯುಕ್ತವಿಧೇಸ್ತಥಾ ।

ದುರ್ಯ್ಯೋಧನಃ ಪಣಂ ಚಕ್ರೇ ಬುದ್ಧ್ಯಾ ದುಃಶಾಸನೋಕ್ತಯಾ             ॥೨೧.೩೯೫॥

ಸೋತವನಿ(ರಿ)ಗೆ ಹನ್ನೆರಡು ವರ್ಷ ವನವಾಸ,

ಒಂದು ವರ್ಷ ಪ್ರಸಿದ್ಧ ರಾಜನಲ್ಲಿ ಅಜ್ಞಾತವಾಸ.

ಹಸ್ತಿನವತಿಗೆ ಹತ್ತಿರದಲ್ಲಿದ್ದು ಆಗ ಯಾರಾದರೂ ಕಾಣಿಸಿಕೊಂಡರೆ,

ಮತ್ತೆ ೧೨ ವರ್ಷ ವನವಾಸ ಇನ್ನೊಂದು ವರ್ಷ ಅಜ್ಞಾತವಾಸದ ಬರೆ.

ವನವಾಸದ ಮಧ್ಯದಲ್ಲಿ ಕಾಡುಬಿಟ್ಟು ಪಟ್ಟಣಕ್ಕೆ ಬಂದರೆ,

ಮತ್ತೊಮ್ಮೆ ವನವಾಸ ಅಜ್ಞಾತವಾಸಗಳ ಅದೇ ದೀರ್ಘ ಸೆರೆ.

ಹೀಗಿತ್ತು ದುರ್ಯೋಧನ ಇಟ್ಟಂಥ ಕೆಟ್ಟ ಪಣ,

ಅದರ ಹಿಂದಿತ್ತು ದುಶ್ಯಾಸನನ ದುಷ್ಟ ಚಿಂತನ.


 [Contributed by Shri Govind Magal]

No comments:

Post a Comment

ಗೋ-ಕುಲ Go-Kula