Friday 6 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 363-367

 

ವಸ್ತ್ರೋಚ್ಚಯೇ ಶೈಲನಿಭೇ ಪ್ರಜಾತೇ ದುರ್ಯ್ಯೋಧನಃ ಪ್ರಾಹ ಸಞ್ಜಾತಕೋಪಃ ।

ಪ್ರವೇಶಯೇಮಾಂ ಗೃಹಮೇವ ಶೀಘ್ರಂ ಕಿಂ ನಶ್ಚಿರೇಣೇತಿ ಸುಮನ್ದಬುದ್ಧಿಃ             ॥೨೧.೩೬೩॥

ಗುಡ್ಡದಂತಾಗಿ ಬಿತ್ತು ವಸ್ತ್ರಗಳ ಸಮೂಹ,

ಕೋಪಗೊಂಡ ಮಂದಬುದ್ಧಿಯ ಕೌರವ.

ದುಶ್ಯಾಸನಾ ಇನ್ನೂ ಏಕೆ ಮಾಡುವೆ ವಿಳಂಬ,

ಇವಳ ಮನೆಯೊಳಗೊಯ್ಯು ಎಂದ ಹುಂಬ.

 

ತಚ್ಛ್ರುತ್ವಾ ವಚನಂ ಕೃಷ್ಣಾ ಪ್ರತಿಜ್ಞಾಮಕರೋತ್ ತದಾ ।

ಭೀಮೋ ದುರ್ಯ್ಯೋಧನಂ ಹನ್ತಾ ಕರ್ಣ್ಣಂ ಹನ್ತಾ ಧನಞ್ಜಯಃ             ॥೨೧.೩೬೪॥

 

ಶಕುನಿಂ ತ್ವಕ್ಷಕಿತವಂ ಸಹದೇವೋ ವಧಿಷ್ಯತಿ ।

ಇತ್ಯುಕ್ತೇ ತತ್ ತಥೇತ್ಯಾಹ ಭೀಮಸೇನಃ ಸಭಾತಳೇ                ॥೨೧.೩೬೫॥

ಆ ಮಾತ ಕೇಳಿದ ದ್ರೌಪದಿ ಮಾಡುತ್ತಾಳೆ ಪ್ರತಿಜ್ಞೆ,

ಭೀಮಸೇನ ದುರ್ಯೋಧನನನ್ನು ಕೊಲ್ಲುತ್ತಾನೆ.

ಅರ್ಜುನನು ಕರ್ಣನನ್ನು ಕೊಂದು ಹಾಕುತ್ತಾನೆ,

ಜೂಜುಗಾರ ಶಕುನಿಯ ಸಹದೇವ ಕೊಲ್ಲುತ್ತಾನೆ,

ಅದ್ಹಾಗೇ ಆಗುತ್ತದೆ ಎಂದು ಭೀಮ ಹೇಳುತ್ತಾನೆ.

 

ಪ್ರತಿಜ್ಞಾಮಾದದೇ ಪಾರ್ತ್ಥಸ್ತಾಂ ಮಾದ್ರೀನನ್ದನಸ್ತಥಾ ।

ನಕುಲಃ ಪ್ರತಿಜಜ್ಞೇSಥ ಶಾಕುನೇಯವಧಂ ಪ್ರತಿ           ॥೨೧.೩೬೬॥

ಅರ್ಜುನ ಮಾಡುತ್ತಾನೆ ಅವಳ ಪ್ರತಿಜ್ಞೆಯ ಸ್ವೀಕಾರ,

ಸಹದೇವನೂ ಪ್ರತಿಜ್ಞೆಯ ಮಾಡುತ್ತಾನೆ ಅದೇ ತೆರ,

ನಕುಲನನ್ನುತ್ತಾನೆ ನನ್ನಿಂದಾಗುತ್ತದೆ ಶಕುನಿಪುತ್ರ ಸಂಹಾರ.

 

ತತಃ ಸುಯೋಧನಾನುಜಶ್ಚಕರ್ಷ ಪಾರ್ಷತಾತ್ಮಜಾಮ್ ।

ಗೃಹಾಯ ತನ್ನಿಶಾಮ್ಯ ತು ಕ್ರುಧಾSSಹ ಮಾರುತಾತ್ಮಜಃ             ॥೨೧.೩೬೭॥

ದ್ರೌಪದಿಯ ಮನೆಗೊಯ್ಯಲು ದುಶ್ಯಾಸನ ಎಳೆಯುತ್ತಾನೆ,

ನೋಡುತ್ತಿದ್ದಂಥ ಭೀಮಸೇನ ಕೋಪದಿಂದ ಹೇಳುತ್ತಾನೆ.


 [Contributed by Shri Govind Magal]

No comments:

Post a Comment

ಗೋ-ಕುಲ Go-Kula