Thursday, 12 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 19-23

 

ಸರ್ವಾಶ್ಚ ಚೇಷ್ಟಾ ಭಗವನ್ನಿಯುಕ್ತಾಃ ಸದಾ ಸಮಸ್ತಸ್ಯ ಚಿತೋSಚಿತಶ್ಚ।

ತಥಾSಪಿ ವಿಷ್ಣುರ್ವಿನಿವಾರಯೇತ್ ಕ್ವಚಿದ್ ವಾಚಾ ವಿಧತ್ತೇ ಚ ಜನಾನ್ ವಿಡಮ್ಬಯನ್ ॥ ೨೨.೧೯॥

ಜಗದ ಎಲ್ಲಾ ಚೇತನ ಅಚೇತನಗಳ ಕ್ರಿಯೆಗಿದೆ ಭಗವಂತನ ನಿಯಮನ,

ಲೋಕನೀತಿಗಾಗಿ ಆಗಾಗ ಮಾತುಗಳಲ್ಲಿ ತೋರುವ ಶ್ರೀಮನ್ನಾರಾಯಣ.

 

ಮೈತ್ರೇಯ ಆಗಾದಥ ಭೂಪತಿಶ್ಚ ಪುತ್ರಾನ್ ಸಮಾಹೂಯ ಸಕರ್ಣ್ಣಸೌಬಲಾನ್ ।

ಸಮ್ಪೂಜಯಾಮಾಸ ಮುನಿಂ ಸ ಚಾSಹ ದಾತುಂ ರಾಜ್ಯಂ ಪಾಣ್ಡವಾನ್ ಸಮ್ಪ್ರಶಂಸನ್ ॥ ೨೨.೨೦॥

ಆನಂತರ ಆಗುತ್ತದೆ ರಾಜಾಸ್ಥಾನಕ್ಕೆ ಮೈತ್ರೇಯ ಮುನಿಗಳ ಆಗಮನ,

ಧೃತರಾಷ್ಟ್ರ;ಕರ್ಣ ಶಕುನಿ ತನ್ನ ಸುತರೊಡನೆ ಸಲ್ಲಿಸಿದ ಸತ್ಕಾರ ನಮನ.

ಮೈತ್ರೇಯರು ಪಾಂಡವರ ಗುಣ ಹೊಗಳುತ್ತಾರೆ,

ಅವರಿಗೆ ರಾಜ್ಯ ಹಿಂದಿರುಗಿಸಲು ಹೇಳುತ್ತಾರೆ.

 

ವಿಶೇಷತೋ ಭೀಮಬಲಂ ಶಶಂಸ ಕಿರ್ಮ್ಮೀರನಾಶಾದಿ ವದನ್ ಮುನೀನ್ದ್ರಃ ।

ಶ್ರುತ್ವಾSಸಹಂಸ್ತದ್ ಧೃತರಾಷ್ಟ್ರಪುತ್ರ ಆಸ್ಫಾಲಯಾಮಾಸ ನಿಜೋರುಮುಗ್ರಃ ॥ ೨೨.೨೧॥

ಮೈತ್ರೇಯರು ಕಿರ್ಮೀರನ ನಾಶದ ಬಗ್ಗೆ ಹೇಳುವರಾಗ,

ಭೀಮಸೇನನ ಬಲದ ಹೊಗಳಿಕೆಯನ್ನು ಕೇಳುವಾಗ,

ಸಹಿಸದ ದುರ್ಯೋಧನ ತೊಡೆಯ ತಟ್ಟಿಕೊಂಡನಾಗ.

 

ಶಶಾಪ ಚೈನಂ ಮುನಿರುಗ್ರತೇಜಾಸ್ತವೋರುಭೇದಾಯ ಭವೇತ್ ಸುಯುದ್ಧಮ್ ।

ಇತ್ಯೂಚಿವಾನ್ ಧೃತರಾಷ್ಟ್ರಾನತೋsಪಿ ಯಯೌ ನ ಚೇದ್ ರಾಜ್ಯದಸ್ತ್ವಂ ತಥೇತಿ ॥ ೨೨.೨೨॥

ಆಗ ಉಗ್ರತಾಪಸಿಯಾದ ಮೈತ್ರೇಯರಿಂದ,

ಬಂತು ದುರ್ಯೋಧನನಿಗೆ ಎಚ್ಚರಿಕೆ ಶಾಪದಿಂದ.

ನಿನ್ನ ತೊಡೆ ಮುರಿಯಲೆಂದೇ ಆಗಲಿದೆ ಯುದ್ಧ.

ಧೃತರಾಷ್ಟ್ರ ತನ್ನ ಮಗನ ಪರ ಬೇಡಿ ಮಾಡುತ್ತಾನೆ ನಮಸ್ಕಾರ,

ಮೈತ್ರೇಯರೆನ್ನುತ್ತಾರೆ:ರಾಜ್ಯ ಹಿಂದಿರುಗಿಸಿದರಷ್ಟೇ ಪರಿಹಾರ.

 

ಶ್ರುತ್ವಾ ತು ಕಿರ್ಮ್ಮೀರವಧಂ ಸ್ವಪಿತ್ರಾ ಪೃಷ್ಟಕ್ಷತ್ತ್ರೋಕ್ತಂ ಸೋSತ್ರಸದ್ ಧಾರ್ತ್ತರಾಷ್ಟ್ರಃ ।

ವನೇ ವಸನ್ತೋSಥ ಪೃಥಾಸುತಾಸ್ತೇ ವಾರ್ತ್ತಾಂ ಸ್ವಕೀಯಾಂ ಪ್ರಾಪಯಾಮಾಸುರಾಶು  ॥೨೨.೨೩॥

ಧೃತರಾಷ್ಟ್ರನಿಂದ ಕೇಳಲ್ಪಟ್ಟು ವಿದುರನಿಂದ  ಹೇಳಲ್ಪಟ್ಟ ಕಿರ್ಮೀರ ಸಂಹಾರ,

ಕೌರವ ನಡುಗಿದ ಥರಥರ;ಪಾಂಡವರಿಂದ ಕೃಷ್ಣಗೆ ತಮ್ಮ ಸುದ್ದಿ ಸಮಾಚಾರ.


 [Contributed by Shri Govind Magal]

No comments:

Post a Comment

ಗೋ-ಕುಲ Go-Kula