Thursday, 5 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 315-320


ವಿದುರಸ್ತು ತತೋ ಗತ್ವಾ ಧರ್ಮ್ಮರಾಜಮಥಾSಹ್ವಯತ್ ।

ಭ್ರಾತೃಭಿರ್ವಾರ್ಯ್ಯಮಾಣೋsಪಿ ಕೃಷ್ಣಯಾ ಚ ಸ ಧರ್ಮ್ಮರಾಟ್ ।

ಸಾರ್ದ್ಧಂ ಮಾತ್ರಾ ಭ್ರಾತೃಭಿಶ್ಚ ಕೃಷ್ಣಯಾ ಚ ಯಯೌ ದ್ರುತಮ್ ॥೨೧.೩೧೫॥

ಹೀಗೆ ದೂತನಾಗಿ ಬಂದ ವಿದುರನಿಂದ ಧರ್ಮರಾಜಗೆ ಆಹ್ವಾನ,

ಸಹೋದರರು ತಾಯಿ ಅದಕ್ಕೆ ವಿರೋಧಿಸಿ ತಡೆದರೂ ಧರ್ಮರಾಜನನ್ನ,

ತಾಯಿ ತಮ್ಮಂದಿರು ದ್ರೌಪದಿಯೊಂದಿಗೆ ಹೊರಟ ಹಸ್ತಿನಪುರಕ್ಕೆ ಪ್ರಯಾಣ.

 

ಜ್ಯೇಷ್ಠಾಜ್ಞಯೈವ ವಿದುರ ಆಹ್ವಯನ್ನಪಿ ಧರ್ಮ್ಮಜಮ್ ।

ನಾSಗನ್ತವ್ಯಮಿತಿ ಪ್ರಾಹ ದೋಷಾನುಕ್ತ್ವಾSಕ್ಷಜಾನ್ ಬಹೂನ್ ॥೨೧.೩೧೬॥

ವಿದುರನಿಂದ ರಾಜದೂತನಾಗಿ ಮೊದಲು ಧರ್ಮರಾಜನ ಕರೆಯುವ ಕರ್ತವ್ಯ ಪಾಲನೆ,

ನಂತರ ಅವನ ಹಿತೈಷಿಯಾಗಿ ದ್ಯೂತದ ಅನರ್ಥ ತಿಳಿಸಿ ಬರಬೇಡ ಎನ್ನುವ ಹಿತಬೋಧನೆ.

 

ಇತೀಹ ದೋಷಸಞ್ಚಯಸ್ತಥಾ ಚ ತೇ ಪಿತುರ್ವಚಃ ।

ಸಮೀಕ್ಷ್ಯ ತದ್ ದ್ವಯಂ ಸ್ವಯಂ ಕುರುಷ್ವ ಕಾರ್ಯ್ಯಮಾತ್ಮನಃ ॥೨೧.೩೧೭॥

ಜೂಜು ದೋಷಗಳ ಮೋಸದ ಆಟ,

ಆದರೂ ಕೇಳಲಿದೆ ನಿನ್ನ ದೊಡ್ಡಪ್ಪನ ಮಾತ.

ಎರಡನ್ನೂ ಸರಿಯಾಗಿ ಪರಾಮರ್ಶಿಸಿ ನೋಡು,

ಯೋಗ್ಯವೆನಿಸುವ ಕರ್ಮವನ್ನು ತಿಳಿದು ಮಾಡು.

 

ಇತೀರಿತೋsಪಿ ಪಾಣ್ಡವೋ ಯಯೌ ಕಲಿಪ್ರವೇಶಿತಃ ।

ವಿಚಿತ್ರವೀರ್ಯ್ಯಜಂ ಚ ತಂ ಸಮಾಸದತ್ ಸಸೈನಿಕಃ ॥೨೧.೩೧೮॥

ಈರೀತಿಯಾಗಿ ಎಲ್ಲವನ್ನೂ ಸ್ಪಷ್ಟವಾಗಿ ಹೇಳಿದ್ದರೂ ಕೂಡಾ,

ಧರ್ಮರಾಜನಿಗಾಗಿದ್ದ ಕಲಿಪ್ರಭಾವವದು ಅತ್ಯಂತ ಗಾಢ.

ಧರ್ಮರಾಜ ಸೈನಿಕರ ಸೇರಿಕೊಂಡು ಸಿದ್ಧನಾದ,

ವಿಚಿತ್ರವೀರ್ಯಪುತ್ರ ದೊಡ್ಡಪ್ಪನ ಬಳಿ ತೆರಳಿದ.

 

ಕಲ್ಯಾವೇಶಾನ್ನೃಪತಿಃ ಪ್ರತಿಜಜ್ಞೇ ಪೂರ್ವಮೇವ ಧರ್ಮ್ಮಾತ್ಮಾ ।

ಆಹೂತೋ ದ್ಯೂತರಣಾನ್ನಿವರ್ತ್ತೇಯಂ ನೈವ ವಾರಿತೋSಪೀತಿ ॥೨೧.೩೧೯॥

ಹಿಂದೆಯೇ ಧರ್ಮಾತ್ಮನಾದ ಧರ್ಮರಾಜಗೆ ಆಗಿತ್ತು ಕಲ್ಯಾವೇಶದ ಪ್ರಭಾವ,

ಜೂಜಿನ ಆಮಂತ್ರಣಕ್ಕೆ ಇಲ್ಲವೆನ್ನಲಾರೆನೆಂದು ಪ್ರತಿಜ್ಞೆಗೈದಿದ್ದ ಮಹಾನುಭಾವ.

 

ತೇನಾSಯಾತ್ ಸ್ವಸುಹೃದ್ಭಿರ್ನ್ನಿವಾರ್ಯ್ಯಮಾಣೋSಪಿ ನಾಗಪುರಮಾಶು ।

ನಹಿ ಧರ್ಮ್ಮೋ ದ್ಯೂತಕೃತೋ ವಿಶೇಷತಃ ಕ್ಷತ್ರಿಯಸ್ಯ ಲೋಕಗುರೋಃ ॥೨೧.೩೨೦॥

ಭೀಮಸೇನಾದಿಗಳಿಂದ ಬಂದಿತ್ತು ವಿರೋಧ -ತಡೆ,

ಕಲ್ಯಾವೇಶದ ಧರ್ಮರಾಜನದು ದೊಡ್ಡಪ್ಪನತ್ತ ನಡೆ.

ಲೋಕಪಾಲಕ ಕ್ಷತ್ರಿಯನಿಗೆ ದ್ಯೂತ ತರುವುದು ಕೇಡೇ.

(ಧರ್ಮರಾಜ ಮಾಡಬಹುದಿತ್ತು ಆಹ್ವಾನದ ತಿರಸ್ಕಾರ,

ವಿಧಿ ನಿರ್ಧರಿಸಿ ಮಾಡಿಸಿಬಿಟ್ಟಿತ್ತು ಕಲಿಯ ವ್ಯಾಪಾರ. )

[Contributed by Shri Govind Magal]

No comments:

Post a Comment

ಗೋ-ಕುಲ Go-Kula