Thursday 5 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 205-211

ಸ ವಿಪ್ರಯಾದವೇಶ್ವರಂ ದ್ವಿಧಾಸ್ಥಿತಂ ಜನಾರ್ದ್ದನಮ್ ।

ಪುರೋ ನಿಧಾಯ ತದ್ ವಸು ಪ್ರಭೂತಮಾನಮತ್ ತದಾ             ॥೨೧.೨೦೫॥

ಭೀಮಸೇನ, ವ್ಯಾಸ -ಕೃಷ್ಣ ಎಂಬ ಎರಡು ರೂಪದಲ್ಲಿದ್ದ ನಾರಾಯಣನನ್ನ,

ದಿಗ್ವಿಜಯದಿ ಗಳಿಸಿದ ಸಕಲ ಸಂಪತ್ತನ್ನಿಟ್ಟು ಅವರಿಬ್ಬರಿಗೆ ಸಲ್ಲಿಸಿದ ನಮನ.

 

ಸೋsಭಿವಾದ್ಯಾಗ್ರಜಂ ಚೈವ ಯಥಾವೃತ್ತಂ ನ್ಯವೇದಯತ್ ।

ಆತ್ಮನಃ ಕೃಷ್ಣಯೋಃ ಸರ್ವಂ ಧರ್ಮ್ಮರಾಜಾಗ್ರತೋ ಮುದಾ             ॥೨೧.೨೦೬॥

ಭೀಮಸೇನ ತನ್ನ ಅಣ್ಣ ಧರ್ಮರಾಜನಿಗೆ ಮಾಡಿದ ನಮಸ್ಕಾರ,

ಅಣ್ಣನೆದುರು, ವ್ಯಾಸ ಕೃಷ್ಣರಿಗೆ ಹೇಳಿದ ದಿಗ್ವಿಜಯ   ವರದಿಸಾರ.

 

ಯಥಾ ಜಿತಾಃ ಕೀಚಕಾದ್ಯಾ ಏಕಲವ್ಯಸಹಾಯವಾನ್ ।

ಯಥಾ ಜಿತಃ ಪೌಣ್ಡ್ರಕಶ್ಚ ಕರ್ಣ್ಣಾದ್ಯಾಶ್ಚ ತಥಾsಪರೇ       ॥೨೧.೨೦೭॥

 

ಯಥಾ ಸಿಂಹಾದಿತನವಃ ಶೇಷವೀನ್ದ್ರೇನ್ದ್ರಪೂರ್ವಕಾಃ ।

ಯಥಾ ಗಜತನುಃ ಶರ್ವಸ್ತಚ್ಚ ಸರ್ವಮವರ್ಣ್ಣಯತ್        ॥೨೧.೨೦೮॥

ಯಾವರೀತಿಯಾಯಿತೋ ಕೀಚಕ ಮೊದಲಾದವರ ಸೋಲು,

ಏಕಲವ್ಯನೊಡನಿದ್ದ ಪೌಂಡ್ರಕಗೆ ಒದಗಿಸಿಕೊಟ್ಟಂಥ ಗೋಳು,

ಕರ್ಣಾದಿಗಳಿಗೆ ದಿಗ್ವಿಜಯದಲ್ಲಿ ಉಂಟಾದ ಆ ತೆರದ ಪರಾಜಯ,

ಶೇಷ ಗರುಡ ಇಂದ್ರರು ಸೋತದ್ದು ಹೊತ್ತು ಬಂದಿದ್ದರೂ ಪ್ರಾಣಿಕಾಯ,

ಹೇಗಾದ ಆನೆಯ ರೂಪದಲ್ಲಿದ್ದ ರುದ್ರ ಪರಾಜಿತ,

ಅದೆಲ್ಲವನ್ನು ವಿವರಿಸಿ ಹೇಳಿದ ವಾಯುಪುತ್ರನಾತ.

 

ಸಮ್ಭಾವಿತಶ್ಚ ಕೃಷ್ಣಾಭ್ಯಾಂ ರಾಜ್ಞಾ ಚ ಸುಮಹಾಬಲಃ ।

ಆಜ್ಞಯಾ ವ್ಯಾಸದೇವಸ್ಯ ಯಜ್ಞಾಙ್ಗಾನಿ ಸಮಾರ್ಜ್ಜಯತ್             ॥೨೧.೨೦೯॥

ವೇದವ್ಯಾಸ, ಶ್ರೀಕೃಷ್ಣ, ಧರ್ಮರಾಜನಿಂದ ಭೀಮ ಸತ್ಕೃತನಾದ,

ಬಲಭೀಮ ವ್ಯಾಸರಾಜ್ಞೆಯಂತೆ ಯಜ್ಞದ್ರವ್ಯಗಳ ಕಲೆ ಹಾಕಿದ.

 

ಊಚೇ ತಂ ಭಗವಾನ್ ವ್ಯಾಸೋ ಜಿತಂ ಸರ್ವಂ ತ್ವಯಾsರಿಹನ್ ।

ಜಯೇ ಸರ್ವಸ್ಯ ಯಜ್ಞೋsಯಂ ಪೂರ್ಣ್ಣೋ ಭವತಿ ನಾನ್ಯಥಾ             ॥೨೧.೨೧೦॥

 

ವಿರಿಞ್ಚಃ ಸರ್ವಜಿತ್ ಪೂರ್ವಂ ದ್ವಿತೀಯಸ್ತ್ವಮಿಹಾಭವಃ ।

ಇತ್ಯುಕ್ತ್ವೈನಂ ಸಮಾಶ್ಲಿಷ್ಯ ಯಜ್ಞಾಙ್ಗಾನಿ ಸಮಾದಿಶತ್             ॥೨೧.೨೧೧॥

ಷಡ್ಗುಣ ಐಶ್ವರ್ಯಸಂಪನ್ನ ವ್ಯಾಸರು ಭೀಮಗೆ ಹೇಳಿದ ಮಾತು,

ವೈರಿಗಳ ನಿಗ್ರಹಿಸುವವನೇ ನಿನ್ನಿಂದೆಲ್ಲವೂ ವಶವಾಗಿದೆ ಇವತ್ತು.

ಎಲ್ಲರನ್ನೂ ಗೆದ್ದರೆ ಮಾತ್ರ ರಾಜಸೂಯಯಾಗ,

ಬೇರ್ಯಾವುದರಿಂದಲೂ ತುಂಬಲ್ಲ ಪೂರ್ಣಭಾಗ.

ಮೊದಲು ಬ್ರಹ್ಮ ಎಲ್ಲರ ಗೆದ್ದು ಮಾಡಿದ್ದ ರಾಜಸೂಯಯಾಗ,

ಈಗ ನಿನದಾಗಿದೆ ಅದಕ್ಕೆ ಎರಡನೆಯವನಾಗುವ ಯೋಗ.

ಹೀಗೆ ಹೇಳಿದ ವ್ಯಾಸರು ಭೀಮಗಿತ್ತರು ಆಲಿಂಗನ,

ಯಜ್ಞಸಾಧನಗಳ ಸೇರಿಸುವಂತೆ ಇತ್ತರವಗೆ ಆಜ್ಞ.

 [Contributed by Shri Govind Magal]

No comments:

Post a Comment

ಗೋ-ಕುಲ Go-Kula