[‘ನಾನು ನಿಮ್ಮ ಸಮೀಪ ಇಲ್ಲದಿದ್ದುದರಿಂದ ಹೀಗಾಯಿತು’
ಎಂದು ಹೇಳಿರುವುದರ ಅರ್ಥ ಭಗವಂತನಿಗೆ ದೇಶ-ಕಾಲದ
ವ್ಯಾಪ್ತಿಯಿಲ್ಲವೆಂದಲ್ಲ. ಅದನ್ನು ವಿವರಿಸುತ್ತಾರೆ:]
ಸನ್ನಿಧಾನೇSಥ ದೂರೇ ವಾ ಕಾಲವ್ಯವಹಿತೇsಪಿ ವಾ ।
ಸ್ವಭಾವಾದ್ ವಾ
ವ್ಯವಹಿತೇ ವಸ್ತುವ್ಯವಹಿತೇSಪಿ
ವಾ ॥ ೨೨.೩೧॥
ನಾಶಕ್ತಿರ್ವಿದ್ಯತೇ
ವಿಷ್ಣೋರ್ನ್ನಿತ್ಯಾವ್ಯವಹಿತತ್ವತಃ ।
ತಥಾSಪಿ ನರಲೋಕಸ್ಯ ಕರೋತ್ಯನು ಕೃತಿಂ ಪ್ರಭುಃ ॥ ೨೨.೩೨॥
ಹತ್ತಿರ ದೂರ ಕಾಲ ಸ್ವಭಾವ ವಸ್ತುಗಳಿಂದ ಇದ್ದರೂ ತಡೆ,
ನಾರಾಯಣಗೆ ಅದ್ಯಾವುದೂ ಆಗುವುದಿಲ್ಲ ಅಶಕ್ತಿಯ ಗೋಡೆ.
ಅವನು ಸರ್ವಕಾಲದಲ್ಲೂ ಸರ್ವಶಕ್ತ,
ಯಾವುದೇ ಮಿತಿ ಇರದ ಸರ್ವತ್ರ ವ್ಯಾಪ್ತ.
ಸರ್ವಶಕ್ತ ಸರ್ವವ್ಯಾಪ್ತನಿಗ್ಯಾವ ಅಡಚಣೆ,
ಕೃಷ್ಣ ಮಾಡಿದ್ದು ಮನುಷ್ಯಲೋಕದ ಅನುಕರಣೆ.
ದುಷ್ಟಾನಾಂ
ದೋಷವೃದ್ಧ್ಯರ್ತ್ಥಂ ಭೀಮಾದೀನಾಂ ಗುಣೋನ್ನತೇಃ ।
ಯುಧಿಷ್ಠಿರೇSತಿವೃದ್ಧಂ ತು ರಾಜಸೂಯಾದಿಸಮ್ಭವಮ್ ॥ ೨೨.೩೩॥
ಧರ್ಮ್ಮಂ ಚ
ಸಙ್ಕ್ರಾಮಯಿತುಂ ಕೃಷ್ಣಾಯಾಮನುಜೇಷು ಚ ।
ಯೋಗ್ಯತಾಕ್ರಮತೋ
ವಿಷ್ಣುರಿಚ್ಛಯೇತ್ಥಮಚೀಕ್ಲ್ ಪತ್
॥ ೨೨.೩೪॥
ಆಗಬೇಕಾಗಿತ್ತು ದುಷ್ಟರ ದೋಷದ ಅಭಿವೃದ್ಧಿ,
ಆಗಬೇಕಿತ್ತು ಭೀಮಸೇನಾದಿಗಳ ಗುಣವೃದ್ಧಿ.
ಧರ್ಮರಾಜನಲ್ಲಿತ್ತು ಯೋಗ್ಯತೆಗೆ ಮೀರಿದ ರಾಜಸೂಯ ಯಾಗಾದಿಗಳ ಫಲ,
ಭೀಮ, ದ್ರೌಪದಿ
ಮುಂತಾದವರಿಗೆಲ್ಲ ಆ ಪುಣ್ಯವ ಹಂಚುವ ಭಗವಂತನ ಕೃಪಾಜಾಲ.
ಏಧಮಾನದ್ವಿಳಿತ್ಯೇವ
ವಿಷ್ಣೋರ್ನ್ನಾಮ ಹಿ ವೈದಿಕಮ್ ।
ಸ್ವಯೋಗ್ಯತಾಯ
ಅಧಿಕಧರ್ಮ್ಮಜ್ಞಾನಾದಿಜಂ ಫಲಮ್ ॥
೨೨.೩೫॥
ಭೀಷ್ಮದ್ರೋಣಾಮ್ಬಿಕೇಯಾದೇಃ
ಪಾರ್ತ್ಥೇಷ್ವೇವ ನಿಧಾಪಿತುಮ್ ।
ಪುನಶ್ಚ
ಪಾಪವೃದ್ಧ್ಯರ್ತ್ಥಮಜೋ ದುರ್ಯ್ಯೋಧನಾದಿಷು
॥ ೨೨.೩೬॥
ವ್ಯಾಸೋSಮ್ಬಿಕಾಸುತಂ ಪ್ರಾಹ ಪಾರ್ತ್ಥಾ ಮೇSಭ್ಯಧಿಕಂ ಪ್ರಿಯಾಃ ।
ತೇಷಾಂ ಪ್ರವಾಸನಂ ಚೈವ
ಪ್ರಿಯಂ ನ ಮಮ ಸರ್ವಥಾ ॥ ೨೨.೩೭॥
ಇತಿ ದುರ್ಯ್ಯೋಧನಾದೀನಾಂ
ಪಾಪವೃದ್ಧ್ಯರ್ತ್ಥಮೇವ ಸಃ ।
ಪ್ರಿಯಾ ಇತ್ಯೇವ ಕಥನಾತ್
ಪಾಣ್ಡವಾನಾಂ ಶುಭೋನ್ನತೇಃ ॥ ೨೨.೩೮॥
ಯೋಗ್ಯತೆ ಮೀರಿ ಯಾರೂ ಬೆಳೆಯಬಾರದು ಎಂಬುದವನ ನಿಯಮ,
ಅದಕ್ಕೆಂದೇ ಅವನಿಗೆ 'ಏಧಮಾನದ್ವಿಟ್' ಎಂಬ ಅನ್ವರ್ಥ ವೈದಿಕ ನಾಮ.
ಯಾರ್ಯಾರಲ್ಲಿತ್ತು ಯೋಗ್ಯತೆಗೆ ಮೀರಿದ ಧರ್ಮ ಪುಣ್ಯ ಶಾಸ್ತ್ರಜ್ಞಾನಗಳ
ಫಲ,
ಜೂಜಲ್ಲಿ ತಾನಿರದೇ,ಅದೆಲ್ಲಾ
ಪಾಂಡವರಲ್ಲಿಡುವ ಸಂಕಲ್ಪ ಮಾಡಿದ್ದನವ ಗೊಲ್ಲ.
ಧರ್ಮರಾಜನಷ್ಟೇ ಅಲ್ಲ ಭೀಷ್ಮ ದ್ರೋಣ ಧೃತರಾಷ್ಟ್ರರಲ್ಲಿತ್ತು
ಯೋಗ್ಯತೆಗೆ ಮೀರಿದ ಪುಣ್ಯ,
ದ್ಯೂತದಲ್ಲಿ ತಾನಿರದೇ ;ಅವರವರ ಯೋಗ್ಯತೆಗೆ
ತಕ್ಕ ಪುಣ್ಯವೃದ್ಧಿ / ಕ್ಷಯ ಮಾಡುವಂಥ ಕಾರುಣ್ಯ.
ವ್ಯಾಸರು ಧೃತರಾಷ್ಟ್ರಗೆ ಹೇಳಿದ್ದು -ಪಾಂಡವರು ಎನಗೆ ಪ್ರಿಯ,
ನನಗಿಷ್ಟವಾಗದ ಅವರ ವನವಾಸವು ಕೂಡಾ ಅತ್ಯಂತ ಹೇಯ.
ವ್ಯಾಸರ ಈ ಮಾತಿನಿಂದ ಪಾಂಡವರ ಪುಣ್ಯವೃದ್ಧಿ,
ಕೌರವಾದಿಗಳ ಹೆಚ್ಚಿನಸೂಯೆಯಿಂದ ಪಾಪವೃದ್ಧಿ.
ಗುರುತ್ವಾದ್ ಭೀಮಸೇನಸ್ಯ
ಕ್ಷಮಾ ದ್ಯೂತೇSರ್ಜ್ಜುನಾದಿನಾಮ್ ।
ನಾತಿಧರ್ಮ್ಮಸ್ವರೂಪೋSತ್ರ ಧರ್ಮ್ಮೋ ಭೀಮೇ ನಿರೌಪಧಃ ॥ ೨೨.೩೯॥
ಜೂಜಾಟದಲ್ಲಿ ಅರ್ಜುನಾದಿಗಳ ಸಹನೆಯಿಂದ ಅವರಿಗೆ ಬರಲಿಲ್ಲ ಪೂರ್ತಿ
ಪುಣ್ಯ,
ಭಾಗವತ ಧರ್ಮ ಪಾಲನೆಯಿಂದ ಅಧಿಕ ಪುಣ್ಯ ಗಳಿಸಿದ ಭೀಮನೆಲ್ಲರ
ಗುರುವರೇಣ್ಯ.
ದ್ರೌಪದ್ಯಾ ಅಪ್ಯತಿಕ್ಲೇಶಾತ್
ಕ್ಷಮಾ ಧರ್ಮ್ಮೋ ಮಹಾನಭೂತ್ ।
ಸಾ ಹಿ ಭೀಮಮನೋ ವೇದ ನ
ಕಾರ್ಯ್ಯಃ ಶಾಪ ಇತ್ಯಲಮ್ ॥ ೨೨.೪೦॥
ದ್ರೌಪದಿಗಾದ ಅವಮಾನ ಕಷ್ಟಕ್ಕೆ ಅವಳ ಸಹನೆ ತಾಳ್ಮೆ ಬಲು ದೊಡ್ಡದು,
ತನ್ನ ಶಕ್ತಿ ದೈವನೀತಿ ಪತಿಭಕ್ತಿ ಅರಿತು ನಡೆದವಳಿಗೆ ಬಂದ ಪುಣ್ಯ ಬಲು
ಹಿರಿದು.
[Contributed by Shri Govind Magal]
No comments:
Post a Comment
ಗೋ-ಕುಲ Go-Kula