[ಶಲ್ಯ-ಜರಾಸಂಧನ ಮಗಳಂದಿರನ್ನು ನಕುಲ-ಸಹದೇವರು ಮದುವೆಯಾದಮೇಲೆ ಅವರು ದ್ರೌಪದಿಯನ್ನು ಅತ್ತಿಗೆಯಂತೆ ನೋಡುತ್ತಿದ್ದರು ಎಂದು ಹಿಂದೆ ಹೇಳಿರುವುದನ್ನು ನೋಡಿದ್ದೇವೆ. ಇದೀಗ ಈ ಸಂಧರ್ಭದಲ್ಲಿ ಧರ್ಮರಾಜನ ಮನಪರಿವರ್ತನೆಯ ಕುರಿತು ಹೇಳುತ್ತಾರೆ:]
ತತಃ ಪರಂ ಧರ್ಮ್ಮರಾಜೋ
ನಿರ್ವಿಣ್ಣಃ ಸ್ವಕೃತೇನ ಹ ।
ಭ್ರಾತೃಭಾರ್ಯ್ಯಾಪದೇ
ಕೃಷ್ಣಾಂ ಸ್ಥಾಪಯಾಮಾಸ ಸರ್ವದಾ ॥೨೨.೬೦॥
ಆನಂತರ ಯುಧಿಷ್ಠಿರ ತಾನು ಮಾಡಿದ ತಪ್ಪಿನಿಂದ ನೊಂದ,
ದ್ರೌಪದಿಯನ್ನು ತನ್ನ ಸೋದರ ಪತ್ನಿ ಸ್ಥಾನದಲ್ಲಿ ಸ್ಥಾಪಿಸಿದ.
ಊಷುರ್ವನೇ ಚ ತೇ
ಪಾರ್ತ್ಥಾ ಮುನಿಶೇಷಾನ್ನಭೋಜಿನಃ ।
ಭುಕ್ತವತ್ಸ್ವೇವಾನುಜೇಷು
ಭುಙ್ಕ್ತೇ ರಾಜಾ ಯುಧಿಷ್ಠಿರಃ
॥೨೨.೬೧॥
ಅಲಙ್ಘ್ಯತ್ವಾತ್
ತದಾಜ್ಞಾಯಾ ಅನುಜಾಃ ಪೂರ್ವಭೋಜಿನಃ ।
ತಸ್ಯಾನನ್ತರಮೇವೈಕಾ
ಭುಙ್ಕ್ತೇ ಸಾ ಪಾರ್ಷತಾತ್ಮಜಾ
॥೨೨.೬೨॥
ವನವಾಸದಲ್ಲಿ ಮುನಿಗಳದೆಲ್ಲಾ ಆದಮೇಲೆ ಊಟ,
ಪಾಂಡವರು ಶೇಷಾನ್ನವನ್ನು ಸ್ವೀಕರಿಸುವ ಪರಿಪಾಠ.
ತಮ್ಮಂದಿರದೆಲ್ಲಾ ಆದ ನಂತರ ಭೋಜನ,
ಯುಧಿಷ್ಠಿರನದಾಗುತ್ತಿತ್ತು ವೈಶ್ವಾನರ ಯಜ್ಞ.
ತಮ್ಮಂದಿರು ಮೊದಲು ಸ್ವೀಕರಿಸುತ್ತಿದ್ದರು ಮೀರದೇ ಅಣ್ಣನ ಆಜ್ಞ,
ಧರ್ಮರಾಜನದೂ ಊಟವಾದಮೇಲೆ ಕೊನೆಯಲ್ಲಿ ದ್ರೌಪದಿಗೆ ಅನ್ನ.
ಏವಂ ಸದಾ
ವಿಷ್ಣುಪರಾಯಣಾನಾಂ ತತ್ಪ್ರಾಪಣಾನ್ನೈಕಭುಜಾಂ ಪ್ರಯಾತಃ ।
ಸಂವತ್ಸರಸ್ತತ್ರ ಜಗಾದ
ಕೃಷ್ಣಾ ಭೀಮಾಜ್ಞಯಾ ಧರ್ಮ್ಮರಾಜಂ ಸುವೇತ್ರೀ ॥೨೨.೬೩॥
ಈರೀತಿಯಾಗಿ ವಿಷ್ಣು ಭಕ್ತರಾದ ಪಾಂಡವರು,
ದೇವರ ನೈವೇದ್ಯವನ್ನು ಮಾತ್ರ ಸ್ವೀಕರಿಸುತ್ತಿದ್ದರು.
ಇದರಂತೆ ಒಂದು ಸಂವತ್ಸರ ಕಳೆದಾಗ,
ದ್ರೌಪದಿಗೆ ಆಗಿ ಭೀಮನ ಒಪ್ಪಿಗೆಯ ಯೋಗ,
ಧರ್ಮರಾಜನ ಉದ್ದೇಶಿಸಿ ಮಾತನಾಡುವಳಾಗ.
ಅತಿಮಾರ್ದ್ದರವಯುಕ್ತತ್ವಾದ್
ಧರ್ಮ್ಮರಾಜಶ್ಚತುರ್ದ್ದಶೇ ।
ಅಪಿ ವರ್ಷೇ ಗುರುಭಯಾದ್
ರಾಜ್ಯಂ ನೇಚ್ಛೇದಿತಿ ಪ್ರಭುಃ ।
ಮಾರುತಿಃ ಪ್ರೇಷಯಾಮಾಸ
ಕೃಷ್ಣಾಂ ಪ್ರಸ್ತಾವಹೇತವೇ ॥೨೨.೬೪॥
ಧರ್ಮರಾಜನದು ಏನೂ ಕೇಳದ ಅತಿ ಮೃದು ಸ್ವಭಾವ,
ಹದಿನಾಕು ವರ್ಷಾನಂತರವೂ ಗುರುಹಿರಿಯರ ಭಯ.
ಅವಧಿ ಮೀರಿದರೂ ಅವನು ರಾಜ್ಯಪಟ್ಟ ಬಯಸಲಾರ,
ಭೀಮ ಅದನ್ನು ಪ್ರಸ್ತಾಪಿಸುತ್ತಾನೆ ದ್ರೌಪದೀದೇವಿ ದ್ವಾರ.
ಕ್ಷಮಾ ಸರ್ವತ್ರ
ಧರ್ಮ್ಮೋ ನ ಪಾಪಹೇತುಶ್ಚ ದುರ್ಜ್ಜನೇ ।
ರಾಜ್ಞಾಂ
ಸಾಮರ್ತ್ಥ್ಯಯುಕ್ತಾನಾಮಿತಿ ಸಂಸ್ಥಾಪ್ಯ ಶಾಸ್ತ್ರತಃ ॥೨೨.೬೫॥
ಎಲ್ಲೆಡೆ ಎಲ್ಲರನ್ನೂ ಕ್ಷಮಿಸುವುದು ಅಲ್ಲ ಧರ್ಮ,
ಸಜ್ಜನರ ಸಣ್ಣಪುಟ್ಟ ಪಾಪ ಸಹಿಸುವುದದು ಮರ್ಮ.
ದುರ್ಜನರ ಕ್ಷಮಿಸುವುದು ಪಾಪಕ್ಕೇ ಕಾರಣ,
ಬಲಿಷ್ಠ ರಾಜರಿಗಿದು ವಿಧಿಸಿರುವಂಥ ಶಾಸನ.
ಭೀಮ ಇದನ್ನೆಲ್ಲಾ ವಿವರಿಸಿ ಹೇಳಿ ದ್ರೌಪದಿಗೆ,
ಅವಳನ್ನೇ ಕಳಿಸುತ್ತಾನೆ ಧರ್ಮರಾಜನ ಬಳಿಗೆ.
ಹತ್ವಾ ಚತುರ್ದ್ದಶೇ
ವರ್ಷೇ ಧಾರ್ತ್ತರಾಷ್ಟ್ರಾನರಾಜ್ಯದಾನ್ ।
ಕರ್ತ್ತುಂ ರಾಜ್ಯಂ ಪುರೋ
ಗನ್ತಾ ಭವಾನೀತ್ಯಗ್ರಜೇನ ಹ ॥೨೨.೬೬॥
ಕಾರಯನ್ ಸತ್ಯಶಪಥಂ
ವಿವಾದಸ್ಯ ಕ್ರಮೇಚ್ಛಯಾ ।
ಆದಿಶತ್ ಪ್ರಥಮಂ
ಕೃಷ್ಣಾಂ ಭೀಮಃ ಸಾ ನೃಪಮಬ್ರವೀತ್ ॥೨೨.೬೭॥
ಕಡೆಗೆ ಹದಿನಾಕನೇ ವರ್ಷ ರಾಜ್ಯ ಕೊಡದ ದುರ್ಯೋಧನಾದಿಗಳನ್ನ,
ಯುದ್ಧದಿ ಕೊಂದು ವಶಪಡಿಸಿಕೊಳ್ಳುತ್ತೇನೆ ಸಲ್ಲಬೇಕಾದ ರಾಜ್ಯಭಾರವನ್ನ.
ಈ ರೀತಿಯಾಗಿ ಮೃದುಧರ್ಮರಾಜನಿಂದ ಮಾಡಿಸಲಿಕ್ಕಾಗಿ ಶಪಥ,
ವಿವಾದಪೀಠಿಕೆಯಾಗಿ ದ್ರೌಪದಿಯ ಕಳಿಸುವ ಭೀಮ ಧರ್ಮರಾಜನತ್ತ.
[Contributed by Shri Govind Magal]
No comments:
Post a Comment
ಗೋ-ಕುಲ Go-Kula