Thursday 12 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 41-46

 

ತಸ್ಮಾದ್ ಯಥಾಯೋಗ್ಯತಯಾ ಹರಿಣಾ ಧರ್ಮ್ಮವರ್ದ್ಧನಮ್ ।

ಕೃತಂ ತತ್ರಾಸನ್ನಿಧಾನಕಾರಣಂ ಕೇಶವೋSಬ್ರವೀತ್               ॥ ೨೨.೪೧॥

ಜೂಜು ನಡೆದ ಸಂದರ್ಭದಲ್ಲಿ ಪಾಂಡವರ ಯೋಗ್ಯತಾನುಸಾರ,

ಕೃಷ್ಣನಿಂದ ನಡೆಯಿತು ಅವರವರ ಪುಣ್ಯದ ಅಭಿವೃದ್ಧಿಯ ಕಾರ್ಯ.

ಶ್ರೀಕೃಷ್ಣ ತಿಳಿಸುತ್ತಾನೆ ತಾನಿಲ್ಲದಿರುವುದಕ್ಕೆ ಕಾರಣ,

ದ್ಯೂತ ಘಟನೆಯಲ್ಲಿ ಪಾಂಡವರಿಗೆ ಸಂದ ಪುಣ್ಯ.

 

ಸಾಲ್ವಂ ಶ್ರುತ್ವಾ ಸಮಾಯಾತಂ ರೌಗ್ಮಿಣೇಯಾದಯೋ ಮಯಾ ।

ಪ್ರಸ್ಥಾಪಿತಾ ಹಿ ಭವತಾಂ ಸಕಾಶಾತ್ ತೇ ಯಯುಃ ಪುರೀಮ್ ।

ತದಾ ಸಾಲ್ವೋSಪಿ ಸೌಭೇನ ದ್ವಾಕಾಮರ್ದ್ದಯದ್ ಭೃಶಮ್ ॥ ೨೨.೪೨॥

ಸಾಲ್ವನನ್ನು ಕೊಲ್ಲಬೇಕಾದ ಅನಿವಾರ್ಯತೆ ಬಗ್ಗೆ ವಿವರಣೆ,

ನಾವಲ್ಲಿರದ ಹೊತ್ತಲ್ಲಿ ಸಾಲ್ವ ದ್ವಾರಕೆಗೆ ಬಂದ ಸುದ್ದಿ ಬಂದಿತ್ತು ತಾನೇ?

ನಿಮ್ಮೆದುರಲ್ಲೇ ಪ್ರದ್ಯುಮ್ನಾದಿಗಳ ದ್ವಾರಕೆಗೆ ಮಾಡಿದ್ದೆ ರವಾನೆ,

ಸಾಲ್ವನಾಗ ಸೌಭ ವಿಮಾನದಿಂದ ಹಾಳುಗೆಡವಿದ್ದ ದ್ವಾರಕೆಯನ್ನ.

 

ಪ್ರದ್ಯುಮ್ನ ಆಶು ನಿರಗಾದಥ ಸರ್ವಸೈನ್ಯೈರನ್ಯೈಶ್ಚ ಯಾದವಗಣೈಃ ಸಹಿತೋSನುಜೈಶ್ಚ ।

ಸಾಲ್ವೋSವಗಮ್ಯ ತನಯಂ ಮಮ ತದ್ವಿಮಾನಾತ್ ಪಾಪೋSವರುಹ್ಯ ರಥಮಾರುಹದತ್ರ ಯೋದ್ಧುಮ್ ॥೨೨.೪೩॥

ಪ್ರದ್ಯುಮ್ನ -ಯಾದವರು, ಎಲ್ಲಾ ಸೈನ್ಯ, ತಮ್ಮಂದಿರೊಡನೆ ಹೊರಬಂದ,

ವಿಮಾನವಿಳಿದ ಪಾಪಿಷ್ಠ ಸಾಲ್ವ ಯುದ್ಧಕೆ ರಥವೇರಿಕೊಂಡು ಬಂದ.

 

ಕೃತ್ವಾ ಸುಯುದ್ಧಮಮುನಾ ಮಮ ಪುತ್ರಕೋsಸಾವಸ್ತ್ರಾಣಿ ತಸ್ಯ ವಿನಿವಾರ್ಯ್ಯ ಮಹಾಸ್ತ್ರಜಾಲೈಃ ।

ದತ್ತಂ ಮಯಾ ಶರಮಮೋಘಮಥಾSದದೇ ತಂ ಹನ್ತುಂ ನೃಪಂ ಕೃತಮತಿಸ್ತ್ವಶೃಣೋದ್ ವಚಃ ಖೇ ॥೨೨.೪೪॥

ಸಾಲ್ವನೊಂದಿಗೆ ನಡೆಯಿತು ಪ್ರದ್ಯುಮ್ನನ ಭಾರೀ ಯುದ್ಧ,

ಸಾಲ್ವನೆಲ್ಲಾ ಅಸ್ತ್ರಗಳನ್ನು ತನ್ನ ಶ್ರೇಷ್ಠ ಅಸ್ತ್ರದಿಂದ ತಡೆದ.

ನಾನು ಕೊಟ್ಟಿದ್ದ ವ್ಯರ್ಥವಾಗದ ಬಾಣ ಪ್ರಯೋಗಿಸಲು ಆದ ಅಣಿ,

ಅವನ ಕೊಲ್ಲಲು ಮುಂದಾದಾಗ ಆಯಿತು ಒಂದು ಅಶರೀರವಾಣಿ.

 

 ನಾರಾಯಣೇನ ಹಿ ಪುರಾ ಮನಸಾSಭಿಕ್ಲ್ ಪ್ತಂ ಕೃಷ್ಣಾವತಾರಮುಪಗಮ್ಯ ನಿಹನ್ಮಿ ಸಾಲ್ವಮ್ ।

 ಇತ್ಯೇವ ತೇನ ಹರಿಣಾSಪಿ ಸ ಭಾರ್ಗ್ಗವೇಣ ವಿದ್ರಾವಿತೋ ನ ನಿಹತಃ ಸ್ವಮನೋನುಸಾರಾತ್ ॥ ೨೨.೪೫॥

 

ವದ್ಧ್ಯಸ್ತ್ವಯಾ ನಹಿ ತತೋSಯಮಯಂ ಚ ಬಾಣಶ್ಚಕ್ರಾಯುಧಸ್ಯ ದಯಿತೋ ನಿತರಾಮಮೋಘಃ ।

ಮಾ ಮುಞ್ಚ ತೇನ ತಮಿಮಂ ವಿನಿವರ್ತ್ತಯೇSಹಂ ಸಾಲ್ವಂ ಹೃದಿ ಸ್ಥಿತ ಇತೀರಿತಮೀರಣೇನ ॥೨೨.೪೬॥

ನಾರಾಯಣನಿಂದ ಆಗಿದೆ ಕೃಷ್ಣಾವತಾರದಿ ಸಾಲ್ವನ ಕೊಲ್ಲುವ ಸಂಕಲ್ಪ,

ಹಾಗಾಗೇ ಅವನ ಕೊಲ್ಲದೇ ಬರೀ ಓಡಿಸಿ ಕಳಿಸಿದೆ ಪರಶುರಾಮ ರೂಪ.

ನಿನ್ನಿಂದ ಅವನಿಗೆ ಬರಬಾರದು ಮರಣ,

ವ್ಯರ್ಥವಾಗದದು ಕೃಷ್ಣನ ಪ್ರೀತಿಯ ಬಾಣ.

ನೀನು ಈಗ ಆ ಬಾಣವನ್ನು ಸಾಲ್ವನ ಮೇಲೆ ಪ್ರಯೋಗಿಸುವುದು ಬೇಡ,

ಮುಖ್ಯಪ್ರಾಣ ಹೇಳಿದ - ನಾ ಬದಲಿಸಿ ಕಳಿಸುತ್ತೇನೆ ಅವನ ಮನದ ಜಾಡ.

 [Contributed by Shri Govind Magal]

No comments:

Post a Comment

ಗೋ-ಕುಲ Go-Kula