ಅರ್ಜ್ಜುನಃ ಕಪಿವರೋಚ್ಛ್ರಿತದ್ಧ್ವಜಂ ಸ್ಯನ್ದನಂ ಸಮಧಿರುಹ್ಯ ಗಾಣ್ಡಿವೀ ।
ಯಾತ ಏವ ದಿಶಮುತ್ತರಾಂ ಯದಾ ಪಾರ್ವತೀಯಕನೃಪಾಃ ಸಮಾಯಯುಃ ॥೨೧.೨೨೧॥
ಗಾಂಡೀವಧಾರಿಯಾದ ಅರ್ಜುನ,
ಏರಿದ ರಥದಲ್ಲಿತ್ತು ಹನುಮ
ಲಾಂಛನ.
ಅವನು ದಿಗ್ವಿಜಯಕ್ಕೆ
ಉತ್ತರದಿಕ್ಕಿಗೆ ತೆರಳಿದಾಗ,
ಯುದ್ಧಕೆ ಬಂದರು ಪರ್ವತವಾಸಿ
ಕ್ಷುದ್ರರಾಜರಾಗ.
ತ್ರೈಗರ್ತ್ತಾಃ ಪಾರ್ವತೇಯಾಶ್ಚ ಸಹಿತಾಃ ಪಾಣ್ಡುನನ್ದನಮ್ ।
ಅಭ್ಯೇತ್ಯ ಯೋಧಯಾಮಾಸುರ್ಜ್ಜಾನನ್ತಸ್ತಚ್ಚಿಕೀರ್ಷಿತಮ್ ॥೨೧.೨೨೨॥
ತ್ರಿಗರ್ತದೇಶದವರು, ಪಾರ್ವತೇಯರು,
ಎಲ್ಲಾ ಸೇರಿ ಅರ್ಜುನಗೆ
ಎದುರಾದರು.
ಅವನುದ್ದೇಶ ತಿಳಿದು ಯುದ್ಧ
ಮಾಡಿದರು.
ತಾನ್ ವಿಜಿತ್ಯ ಯುಗಪತ್ ಸ ಪಾಣ್ಡವಃ ಸಞ್ಜಯನ್ ಕ್ರಮಶ ಏವ ತಾಂ ದಿಶಮ್ ।
ಪ್ರಾವ್ರಜಚ್ಚ ಭಗದತ್ತಮೂರ್ಜ್ಜಿತಂ ತೇನ ಚಾಸ್ಯ ಸಮಭೂನ್ಮಹಾರಣಃ ॥೨೧.೨೨೩॥
ಅವರೆಲ್ಲರನ್ನೂ ಒಮ್ಮೆಲೇ
ಗೆದ್ದುಬಿಟ್ಟ ಅರ್ಜುನ,
ಉತ್ತರದಿಕ್ಕು ಗೆದ್ದು ಅರಸಿ
ಹೊರಟ ಭಗದತ್ತನನ್ನ.
ಬಲಿಷ್ಠ ಭಗದತ್ತನೊಡನೆ
ನಡೆಯಿತು ಭಾರೀಕದನ.
ಸೋSಭಿಯುದ್ಧ್ಯ ಸಗಜೋ ದಿನಾಷ್ಟಕಂ ಶ್ರಾನ್ತ ಆಹ ಪುರುಹೂತನನ್ದನಮ್ ।
ಬ್ರೂಹಿ ತೇ ಸಮರಕಾರಣಂ ತ್ವಿತಿ ಪ್ರಾಹ ದೇಹಿ ಕರಮಿತ್ಯಥಾರ್ಜ್ಜುನಃ ॥೨೧.೨೨೪॥
ಸೋsಪ್ಯದಾತ್ ಕರಮಮುಷ್ಯ ವಾಸವೋ ಮದ್ಗುರುಸ್ತವ ಪಿತೇತಿ ಸಾದರಮ್ ।
ನೈವ ಜೇತುಮಿಹ ಶಕ್ಷ್ಯಸಿ ತ್ವಮಿತ್ಯಾವದದ್ಧರಿವರಾಸ್ತ್ರತೇಜಸಾ ॥೨೧.೨೨೫॥
ಅರ್ಜುನ ಬಂದಿರುವ ಕಾರಣ
ತಿಳಿದುಕೊಳ್ಳದ ಭಗದತ್ತ,
ಸುಪ್ರತೀಕ ಆನೆಯನೇರಿ ಕಾದಿದ
ಎಂಟುದಿನ ಸತತ.
ಆಯಾಸಗೊಂಡು ಕೇಳಿದ -ನಿನ್ನ
ಯುದ್ಧಕೆ ಕಾರಣವೇನು,
ಅರ್ಜುನನೆಂದ -ನಮ್ಮ
ಯಜ್ಞಕ್ಕೆ ಕಪ್ಪ ಕೊಡಬೇಕು ನೀನು.
ಭಗದತ್ತ ಅರ್ಜುನನಿಗೆ
ಕಪ್ಪವನ್ನೇನೋ ನೀಡಿದ,
ನಿನ್ನಪ್ಪ ಇಂದ್ರನೆನ್ನ ಗುರು, ಅದಕ್ಕೆ
ಕೊಟ್ಟೆನೆಂದ.
ನೀನು ನನ್ನನ್ನ ಗೆಲ್ಲಲಾರೆ
ಎಂದೂ ಹೇಳಿದ,
ಅದು ತನ್ನಲ್ಲಿದ್ದ
ನಾರಾಯಣಾಸ್ತ್ರ ಬಲದಿಂದ.
[ಭಗದತ್ತ ಇಂದ್ರನ ಶಿಷ್ಯ, ನರಕಾಸುರನ ಮಗ, ಪಾಂಡುವಿನ ಗೆಳೆಯ.
ವರಾಹ ದೇವರ ವಿಶೇಷ ಅನುಗ್ರಹ ಅವನಮೇಲಿತ್ತು.]
ಸ್ನೇಹಪೂರ್ವಂ ಪ್ರದತ್ತೇ ತು ಕರೇ ನೈವಾsಹ ಚೋತ್ತರಮ್ ।
ಅರ್ಜ್ಜುನೋ ವ್ಯರ್ತ್ಥಕಲಹಮನಿಚ್ಛನ್ ಸ್ನೇಹಯನ್ತ್ರಿತಃ ॥೨೧.೨೨೬॥
ಗೆಳೆತನದಿಂದ ಕಪ್ಪವನ್ನು
ಕೊಟ್ಟಿದ್ದ ಭಗದತ್ತ,
ಅರ್ಜುನಗನಿಸಿತು ಕಲಹ
ಮಾಡುವುದು ವ್ಯರ್ಥ.
ಯಾವ ಪ್ರತ್ಯುತ್ತರವ
ಕೊಡಲಿಲ್ಲ ಗೌರವಾರ್ಥ.
[Contributed by Shri Govind Magal]
No comments:
Post a Comment
ಗೋ-ಕುಲ Go-Kula