ಕೃಷ್ಣೇ ಸೋSಪಿ ದ್ರುತಮಾಯಾತ್ ಸಸತ್ಯಃ ಸಮ್ಬನ್ಧಿನೋ ಯೇ ಚ ಪಾಞ್ಚಾಲಮುಖ್ಯಾಃ ।
ಕ್ರುದ್ಧಂ ಕೃಷ್ಣಂ
ಧಾರ್ತ್ತರಾಷ್ಟ್ರಾಯ ಪಾರ್ತ್ಥಾಃ
ಕ್ಷಮಾಪಯಾಮಾಸುರುಚ್ಚೈರ್ಗ್ಗೃಣನ್ತಃ ॥ ೨೨.೨೪॥
ಗುಣಾಂಸ್ತದೀಯಾನಮಿತಾನ್
ಪ್ರಣಮ್ಯ ತದಾ ರುದನ್ತೀ ದ್ರೌಪದೀ ಚಾSಪ ಪಾದೌ ।
ಸಾ ಪಾದಯೋಃ ಪತಿತಾ
ವಾಸುದೇವಮಸ್ತೌತ್ ಸಮಸ್ತಪ್ರಭುಮಾತ್ಮತನ್ತ್ರಮ್ ॥ ೨೨.೨೫॥
ಕೃಷ್ಣ ಸತ್ಯಭಾಮಯೊಡಗೂಡಿ ಪಾಂಡವರಲ್ಲಿಗೆ ಧಾವಿಸಿ ಬಂದ,
ಪಾಂಡವ ಸಂಬಂಧಿಗಳೂ ಓಡೋಡಿ ಬಂದರು ಪಾಂಚಾಲದಿಂದ.
ಶ್ರೀಕೃಷ್ಣ ತೋರಿದ ದುರ್ಯೋಧನನ ಮೇಲೆ ಬಹಳಷ್ಟು ಕೋಪ,
ಪಾಂಡವರು ದೈವಗುಣ ಸ್ತುತಿಸುತ್ತಾ ಎಂದರು ಕ್ಷಮಿಸವನ ಪಾಪ.
ದ್ರೌಪದಿ ಅಳುತ್ತಾ ಕೃಷ್ಣ ಪಾದಗಳಿಗೆ ಎರಗುತ್ತಾಳೆ,
ಸರ್ವಾಧಿಪತಿ ಸರ್ವಸ್ವತಂತ್ರ ಕೃಷ್ಣನ ಸ್ತುತಿಸುತ್ತಾಳೆ.
ಅಚಿನ್ತ್ಯನಿತ್ಯಾವ್ಯಯಪೂರ್ಣ್ಣಸದ್ಗುಣಾರ್ಣ್ಣವೈಕದೇಹಾಖಿಲದೋಷದೂರ
।
ರಮಾಬ್ಜಜೇಶೇರಸುರೇನ್ದ್ರಪೂರ್ವವೃನ್ದಾರಕಾಣಾಂ
ಸತತಾಭಿವನ್ದ್ಯ ॥ ೨೨.೨೬॥
ಸಮಸ್ತಚೇಷ್ಟಾಪ್ರದ
ಸರ್ವಜೀವಪ್ರಭೋ ವಿಮುಕ್ತಾಶ್ರಯ ಸರ್ವಸಾರ ।
ಇತಿ ಬ್ರುವನ್ತಿ
ಸಕಲಾನುಭೂತಂ ಜಗಾದ ಸರ್ವೇಶಿತುರಚ್ಯುತಸ್ಯ
॥ ೨೨.೨೭॥
ಹೇ ಅಚಿಂತ್ಯ, ಅವ್ಯಯ,ಪರಿಪೂರ್ಣ,
ಸದ್ಗುಣ ಸಾಗರ, ದೇಹವೇ ಗುಣಗಳ ಗಡಣ.
ನೀನಾಗಿರುವೆ ಸದಾ ಸಕಲ ದೋಷವಿದೂರ,
ಲಕ್ಷ್ಮೀ ಬ್ರಹ್ಮ ವಾಯು ಶಿವ ಇಂದ್ರಾದಿಗಳಿಂದ ನಮಸ್ಕಾರ.
ಸರ್ವಚೇಷ್ಟಾಪ್ರದ, ಸರ್ವಜೀವರ ಒಡೆಯ,
ಸರ್ವಕ್ಕೂ ಸಾರ,ಸರ್ವೋತ್ತಮ,ಸರ್ವ ಮುಕ್ತಾಶ್ರಯ.
ಹೀಗೆಲ್ಲಾ ಕೃಷ್ಣನ ಸ್ತುತಿಸುತ್ತಾ ದ್ರೌಪದಿ,
ಕೊಡುವಳು ತಮ್ಮ ದುಃಖಗಳ ವರದಿ.
ಯಸ್ಯಾಧಿಕಾನುಗ್ರಹಪಾತ್ರಭೂತಾ
ಸ್ವಯಂ ಹಿ ಶೇಷೇಶವಿಪಾದಿಕೇಭ್ಯಃ ।
ಶ್ರುತ್ವಾ ಸಮಸ್ತಂ ಭಗವಾನ್
ಪ್ರತಿಜ್ಞಾಂ ಚಕಾರ ತೇಷಾಮಖಿಲಾಶ್ಚ ಯೋಷಾಃ ॥
೨೨.೨೮॥
ದ್ರೌಪದಿ ಎಂದೆಂದಿಗೂ ಭಗವಂತನಿಗೆ ಬಹಳ ಅಚ್ಚುಮೆಚ್ಚು,
ಗರುಡ ಶೇಷ ರುದ್ರರಿಗಿಂತಲೂ ಅವಳ ಮೇಲೆ ಅನುಗ್ರಹ ಹೆಚ್ಚು.
ಎಲ್ಲಾ ಕೇಳಿಸಿಕೊಂಡ ಭಗವಂತನಿಂದ ಬಂತು ಪ್ರತಿಜ್ಞೆಯ ಕಿಚ್ಚು.
ಪತೀನ್ ಸಮಾಲಿಙ್ಗ್ಯ
ವಿಮುಕ್ತಕೇಶ್ಯಾನ್ ಭೀಮಾಹತಾನ್ ದರ್ಶಯೇ ನಾನ್ಯಥೇತಿ ।
ತಾಂ ಸಾನ್ತ್ವಯಿತ್ವಾ
ಮಧುರೈಃ ಸುವಾಕ್ಯೈರ್ನ್ನಾರಾಯಣೋ ವಾಚಮಿಮಾಂ ಜಗಾದ
॥ ೨೨.೨೯॥
ಕೌರವರ ಹೆಂಡಂದಿರನ್ನೆಲ್ಲಾ ವಿಧವೆಯರನ್ನಾಗಿಸುತ್ತದೆ ಭೀಮನ ಕಾದಾಟ,
ತೋರುವೆ ನಿನಗೆ ಅವರೆಲ್ಲಾ ಗಂಡಂದಿರನ್ನಪ್ಪಿ ಅಳುತ್ತ ಮುಕ್ತಕೇಶರಾದ
ನೋಟ.
ಕೃಷ್ಣ ಹೇಳುತ್ತಾನೆ ದ್ರೌಪದಿಗೆ ಸಮಾಧಾನ,
ಮಧುರ ಮಾತುಗಳಿಂದವಳಿಗೆ ಸಾಂತ್ವನ.
ಯದೀಹಾಹಂ ಸ್ಥಿತೋ ನೈವಂ
ಭವಿತಾSಹಂ ತ್ವಯೋಧಯಮ್ ।
ಸಾಲ್ವರಾಜಂ ದುರಾತ್ಮಾನಂ
ಹತಶ್ಚಾಸೌ ಸುಪಾಪಕೃತ್ ॥ ೨೨.೩೦॥
ಒಂದೊಮ್ಮೆ ನಾನು ನಿಮ್ಮೊಡನೆಯೇ ಇದ್ದಿದ್ದರೆ,
ಬೀಳಗೊಡುತ್ತಿರಲಿಲ್ಲ ನಿಮಗೆ ಕಷ್ಟನಷ್ಟಗಳ ಬರೆ.
ದ್ವಾರಕೆಗೆ ದುರಾತ್ಮ ಸಾಲ್ವರಾಜ ಬಂದಿದ್ದ,
ನಡೆದ ಯುದ್ಧದಿ ಪಾಪಿಷ್ಠ ಸಾಲ್ವ ಹತನಾದ.
[Contributed by Shri Govind Magal]
No comments:
Post a Comment
ಗೋ-ಕುಲ Go-Kula