Friday 6 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 333-342

 

ಇತ್ಯುಕ್ತಾ ಅಪಿ ಭೀಷ್ಮಾದ್ಯಾಃ ಕಲ್ಯಾವೇಶೇನ ಮೋಹಿತಾಃ ।

ಪೃಚ್ಛ ಧರ್ಮ್ಮಜಮಿತ್ಯುಕ್ತ್ವಾ ತೂಷ್ಣೀಮೇವ ಬಭೂವಿರೇ   ॥೨೧.೩೩೩॥

ದ್ರೌಪದಿ ಹೀಗೆ ಹೇಳಿದರೂ ಭೀಷ್ಮಾದಿಗಳು ಕಲ್ಯಾವೇಶಕ್ಕೆ ಒಳಗಾಗಿರುತ್ತಾರೆ,

ಮೋಹಕ್ಕೊಳಗಾದವರಾಗಿ ಧರ್ಮರಾಜನ್ನೇ ಕೇಳು ಎಂದು ಸುಮ್ಮನಾಗುತ್ತಾರೆ.

 

ದುರ್ಯ್ಯೋಧನಪ್ರತೀಪಂ ಹಿ ನ ಕಶ್ಚಿದಶಕತ್ ತದಾ ।

ಉವಾಚ ವಿದುರಸ್ತತ್ರ ನ ಧರ್ಮ್ಮೋSಯಮಿತಿ ಸ್ಫುಟಮ್             ॥೨೧.೩೩೪॥

ಆಗ ದುರ್ಯೋಧನನಿಗೆದುರಾಗಿ ಮಾತಾಡಲು ಯಾರಿಗಿರಲಿಲ್ಲ ಶಕ್ತಿ,

ಇದು ಧರ್ಮವಲ್ಲ ಎಂದು ಹೇಳಿದವನೊಬ್ಬನೇ ವಿದುರನೆಂಬ ವ್ಯಕ್ತಿ.

 

ನ ತಸ್ಯ ವಾಚಂ ಜಗ್ರಾಹ ಧೃತರಾಷ್ಟ್ರಃ ಸಹಾತ್ಮಜಃ ।

ಊರ್ಧ್ವಬಾಹುಃ ಸ ಚುಕ್ರೋಶ ದೇವಾನಾಂ ಖ್ಯಾಪಯಂಸ್ತದಾ             ॥೨೧.೩೩೫॥

 

ಸ್ವಾಶಕ್ತಿಂ ದ್ರೌಪದೀಂ ಚಾSಹ ಜಿತಾ ನೈವಾಸಿ ಧರ್ಮ್ಮತಃ ।

ಅಧರ್ಮ್ಮೋ ಹಿ ಮಹಾನೇತಾಂ ಸಭಾಮಾಕ್ರಮ್ಯ ತಿಷ್ಠತಿ             ॥೨೧.೩೩೬॥

ಮಕ್ಕಳೊಡಗೂಡಿದ ಧೃತರಾಷ್ಟ್ರಗೆ ವಿದುರನ ಮಾತು ಆಗಲಿಲ್ಲ ಸ್ವೀಕಾರ,

ತನ್ನ ಕೈಗಳ ಮೇಲೆತ್ತಿ ದೇವತೆಗಳಿಗೆ ಹೇಳುತ್ತಾ ಅಸಮ್ಮತಿ ತೋರಿದ ವಿದುರ.

ದ್ರೌಪದಿಗೆ ವಿದುರ ಹೇಳುತ್ತಾನೆ -ಧಾರ್ಮಿಕವಾಗಿ ನೀನು ಸೋತಿಲ್ಲ,

ಅಧರ್ಮವೇ ಆವರಿಸಿಕೊಂಡಿದೆ ಇಲ್ಲಿ ಸೇರಿರುವ ಸಭೆಯನ್ನೆಲ್ಲಾ.

 

ಏವಂ ತು ವಿದುರೇಣೋಕ್ತೇ ವಿಕರ್ಣ್ಣಃ ಪಾಪಕೋSಪಿ ಸನ್ ।

ಆಹ ಡಮ್ಭಾರ್ತ್ಥಮೇವಾತ್ರ ಧರ್ಮ್ಮವಿತ್ತ್ವಂ ಪ್ರಕಾಶಯನ್ ।

ಅಧರ್ಮ್ಮ ಏವಾಯಮಿತಿ ಕರ್ಣ್ಣೋSಥೈನಮಭತ್ಸಯತ್             ॥೨೧.೩೩೭॥

ಹೀಗೆ ವಿದುರ ಹೇಳಿದಾಗ ಪಾಪಿಷ್ಠ ದುರ್ಯೋಧನನ ತಮ್ಮ ವಿಕರ್ಣ,

ತೋರಿಕೆಗೆ ಇದು ಅಧರ್ಮವೆಂದಾಗ ಅವನನ್ನು ಗದರಿಸುತ್ತಾನೆ ಕರ್ಣ.

 

ದೃಷ್ಟ್ವಾ ಭೀಮಃ ಕ್ಲಿಶ್ಯಮಾನಾಂ ತು ಕೃಷ್ಣಾಂ ಧರ್ಮ್ಮಾತ್ಯಯಂ ಧರ್ಮ್ಮರಾಜೇ ಚ ದೃಷ್ಟ್ವಾ ।

ರಾಜಾ ಶಾಸ್ಯೋ ಯುವರಾಜೇನ ಧರ್ಮ್ಮಾಚ್ಚಲನ್ ಯಸ್ಮಾದ್ ವಾಕ್ಯಮಿದಂ ಬಭಾಷೇ ॥೨೧.೩೩೮॥

ದ್ರೌಪದಿಯ ಕಷ್ಟವನ್ನು ಧರ್ಮರಾಜನ ಅಧರ್ಮದ ನಡೆಯನ್ನು ಭೀಮ ನೋಡುತ್ತಾನೆ,

ಯುವರಾಜನಾಗಿ ರಾಜನ ನಿಗ್ರಹಿಸಲು ಮುಂದಿನ ಮಾತುಗಳನ್ನು ಅಣ್ಣಗೆ ಹೇಳುತ್ತಾನೆ.

 

ಇಮಾಂ ನ್ಯಸ್ತವತೋ ದ್ಯೂತೇ ಧಕ್ಷಣೀಯೌ ಹಿ ತೇ ಭುಜೌ ।

ನೈವಮಿತ್ಯರ್ಜ್ಜುನೋSವಾದೀತ್ ತಮಾಹಾಥ ವೃಕೋದರಃ             ॥೨೧.೩೩೯॥

 

ವಕ್ತವ್ಯಂ ನತು ಕರ್ತ್ತವ್ಯಂ ತಸ್ಮಾನ್ನಹಿ ಮಯಾ ಕೃತಮ್ ।

ಉತ್ತಮೇ ವಚಸಾ ಶಿಕ್ಷಾ ಮದ್ಧ್ಯಮೇSರ್ತ್ಥಾಪಹಾರಣಮ್            ॥೨೧.೩೪೦॥

 

ಅಧಮೇ ದೇಹದಣ್ಡಶ್ಚ ತಸ್ಮಾದ್ ವಾಚ್ಯೋ ಯುಧಿಷ್ಠಿರಃ ।

ಅಥ ಕರ್ಣ್ಣೋSಬ್ರವೀತ್ ಕೃಷ್ಣಾಮಪತಿರ್ಹ್ಯಸಿ ಶೋಭನೇ             ॥೨೧.೩೪೧॥

 

ಧಾರ್ತ್ತರಾಷ್ಟ್ರಗೃಹಂ ಯಾಹೀತ್ಯಥ ದುರ್ಯ್ಯೋಧನೋSವದತ್ ।

ಪರಸ್ಪರವಿರೋಧಾರ್ತ್ಥಂ ಪಾಣ್ಡವಾನಾಮಿದಂ ವಚಃ      ॥೨೧.೩೪೨॥

ಹೀಗೆ ದ್ರೌಪದಿಯ ಜೂಜಿಗಿಟ್ಟ ನಿನ್ನ ಕೈಗಳು,

ಸುಡಿಸಿಕೊಳ್ಳಲು ಯೋಗ್ಯವಾದವುಗಳು.

ಅರ್ಜುನನಾಗ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾನೆ,

ಭೀಮ: ಹೇಳಬೇಕು ಮಾಡಬಾರದು ಎನ್ನುತ್ತಾನೆ.

ದೊಡ್ಡವರು ತಪ್ಪು ಮಾಡಿದಾಗ ಮಾತಿನ ಏಟು,

ಸಮಾನರು ತಪ್ಪು ಮಾಡಿದಾಗ ಸಂಪತ್ತಿಗೆ ಪೆಟ್ಟು,

ಅಧಮರ ತಪ್ಪಿಗೆ ಶಿಕ್ಷಿಸಬೇಕು ದಂಡನೆಯ ಕೊಟ್ಟು,

ಇದು ಭೀಮ ಹೇಳುವ ಧರ್ಮರಕ್ಷಣೆಯ ಗುಟ್ಟು.

 

ಕರ್ಣ ದ್ರೌಪದಿಯ ಕುರಿತು ಹೀಗೆ ಹೇಳುತ್ತಾನೆ,

ನೀನೀಗ ಎಲ್ಲ ಕಳಕೊಂಡಾಗಿರುವೆ ಪತಿವಿಹೀನೆ.

ನೀನು ದುರ್ಯೋಧನನ ಮನೆಗೆ ಹೋಗೆಂಬ ಉಪದೇಶ,

ಪಾಂಡವರು ಪರಸ್ಪರ ಹೊಡೆದಾಡಿಕೊಳ್ಳಲಿ ಎಂಬುದ್ದೇಶ.


 [Contributed by Shri Govind Magal]

No comments:

Post a Comment

ಗೋ-ಕುಲ Go-Kula