Thursday 5 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 227-232

 

ಪಾರ್ತ್ಥೋ ಜಿತ್ವಾSಷ್ಟವರ್ಷಾಣಿ ಷಡ್ ದ್ವೀಪಾನಪರಾನಪಿ 

ಅಜಯಚ್ಚತುರ್ದ್ದಿಶಮಪಿ ಸರ್ವಶಃ ಶಸ್ತ್ರತೇಜಸಾ           ॥೨೧.೨೨೭॥

ಅರ್ಜುನ ಎಂಟು ವರ್ಷಗಳನ್ನು ಗೆದ್ದ,

(ಇಳಾವೃತ, ರಮ್ಯಕ, ಹಿರಣ್ಮಯ, ಕುರುವರ್ಷ, ಹರಿವರ್ಷ, ಕಿಂಪುರುಷ, ಕೇತುಮೂಲ ಮತ್ತು ಭದ್ರಾಶ್ವಾ )

ಆರು ದ್ವೀಪಗಳನ್ನೂ ಅರ್ಜುನ ಗೆದ್ದ.

(ಪ್ಲಕ್ಷ, ಶಾಲ್ಮಲಿ, ಕುಶಾ, ಕ್ರೌಂಚ, ಶಾಕ:, ಮತ್ತು ಪುಷ್ಕರ )

ನಾಲ್ಕೂ ದಿಕ್ಕುಗಳಲ್ಲಿ ಅರ್ಜುನ ಮಾಡಿದ ಸಂಚಾರ,

ಆಯುಧ ಗರಿಮೆಯಿಂದ ಗೆದ್ದೆಲ್ಲರ ಧರಿಸಿದ ಜಯಹಾರ.

 

ಪಾತಾಳಸಪ್ತಕಂ ಗತ್ವಾ ಜಿತ್ವಾ ದೈತೇಯದಾನವಾನ್ ।

ಬಲೇಶ್ಚ ವಿಷ್ಣುವಚನಾತ್ ಕರಂ ಜಗ್ರಾಹ ಸಾಮತಃ                    ॥೨೧.೨೨೮॥

ಹಾಗೆಯೇ ಅತಳ, ವಿತಳ, ಸುತಳ, ತಳಾತಳ, ಮಹಾತಳ, ರಸಾತಳ ಮತ್ತು ಪಾತಾಳ ಗೆದ್ದ,

ಕೃಷ್ಣನ ಆಜ್ಞೆಯಂತೆ ನಮ್ರನಾಗಿ ಬಲಿಚಕ್ರವರ್ತಿಯಿಂದಲೂ ಕಪ್ಪವನ್ನು ಸ್ವೀಕರಿಸಿದ.

(ಬಲಿಯ ಬಾಗಿಲಲ್ಲಿರುತ್ತಾನೆ ಭಗವಂತ,

ನಾವಿಲ್ಲಿ ನೆನಪಿಸಿಕೊಳ್ಳಬೇಕಾದ ಸತ್ಯ )

 

ಜಿತ್ವಾ ಚ ವಾಸುಕಿಂ ಭೂರಿ ರತ್ನಮಾದಾಯ ಸತ್ವರಃ ।

ಆಜಗಾಮ ಪುರಂ ಸ್ವೀಯಂ ವೀರೋ ವತ್ಸರಮಾತ್ರತಃ             ॥೨೧.೨೨೯॥

ವಾಸುಕಿ ಎಂಬ ಸರ್ಪವನ್ನು ಅರ್ಜುನ ಗೆದ್ದ,

ಅಮಿತ ಸಂಪತ್ತಿನೊಂದಿಗೆ ಅತಿವೇಗದಿಂದ,

ಒಂದು ವರ್ಷಮಾತ್ರದ ಅವಧಿಯಲ್ಲಿ,

ಅರ್ಜುನ ಇಂದ್ರಪ್ರಸ್ಥಕ್ಕೆ ಬಂದಿದ್ದ ಮರಳಿ.

 

ಸುವರ್ಣ್ಣರತ್ನಗಿರಯಶ್ಚತುರ್ಭಿಸ್ತೈಃ ಸಮಾರ್ಜ್ಜಿತಾಃ ।

ಚತ್ವಾರೋ ಯೋಜನಾನಾಂ ಹಿ ದಶ ತ್ರಿಂಶಚ್ಛತಂ ತಥಾ                       ॥೨೧.೨೩೦॥

 

ಚತುಃಶತಂ ಚ ಕ್ರಮಶ ಉಚ್ಛ್ರಿತಾ ದಿಗ್ಜಯಾರ್ಜ್ಜಿತಾಃ ।

ಪ್ರತೀಚ್ಯಾದ್ಯಪಸವ್ಯೇನ ಕ್ರಮಾದ್ ದಿಗ್ಭ್ಯಃ ಸಮಾರ್ಜ್ಜಿತಾಃ                      ॥೨೧.೨೩೧॥

ಪಾಂಡವರೆಲ್ಲಾ ದಿಗ್ವಿಜಯದಲ್ಲಿ ಗಳಿಸಿ ತಂದ ಸಂಪತ್ತು,

ಒಟ್ಟು ಕಲೆಹಾಕಿದಾಗ ಸುವರ್ಣರತ್ನಗಳ ಬೆಟ್ಟವಾಯಿತು.

ನಕುಲ ಸಂಪಾದಿಸಿದ ಸಂಪತ್ತು ಹತ್ತು ಯೋಜನ ವಿಸ್ತಾರ,

ಸಹದೇವನದು ಮೂವತ್ತು ಯೋಜನಗಳ ವಿಸ್ತಾರ,

ಭೀಮಸೇನನದು ನೂರು ಯೋಜನಗಳ ವಿಸ್ತಾರ,

ಅರ್ಜುನನದು ನಾಲ್ಕು ನೂರು ಯೋಜನೆಗಳ ವಿಸ್ತಾರ.

ಹೀಗೆ ಪಾಂಡವರು ದಿಗ್ವಿಜಯದಿಂದ ಗಳಿಸಿದ ಸಂಪತ್ತು,

ಕ್ರಮವಾಗಿ ನಾಲ್ಕು ಪರ್ವತಗಳ ವಿಸ್ತಾರಗಳನ್ನೇ ಹೊಂದಿತ್ತು.

 

[ಇಷ್ಟೊಂದು ಸಂಪತ್ತಿನ ರಾಶಿ ಇಂದ್ರಪ್ರಸ್ಥದಂತಹ ಕಿರಿದಾದ ಪ್ರದೇಶದಲ್ಲಿ ಹೇಗೆ ಹಿಡಿಸಿತು  ಎಂದರೆ : ]

ವಿಶ್ವಕರ್ಮ್ಮಕೃತತ್ವಾತ್ತು ಪುರಸ್ಯಾಲ್ಪೇSಪಿ ಚ ಸ್ಥಲೇ ।

ಅನ್ತರ್ಗ್ಗತಾಸ್ತೇ ಗಿರಯಸ್ತದದ್ಭುತಮಿವಾಭವತ್              ॥೨೧.೨೩೨॥

ವಿಶ್ವಕರ್ಮನಿರ್ಮಿತವಾದ ಆ ಅಪೂರ್ವ ಪಟ್ಟಣದಲ್ಲಿ,

ಆ ಸುವರ್ಣಗಿರಿಗಳು ಹಿಡಿಸಿದ್ದು ಏನು ಆಶ್ಚರ್ಯ ಅದರಲ್ಲಿ.

ಆದರೂ ಅದೊಂದು ಆಶ್ಚರ್ಯದಲ್ಲಿ ಆಶ್ಚರ್ಯ ಅನಿಸಿತಲ್ಲಿ.


[Contributed by Shri Govind Magal]

No comments:

Post a Comment

ಗೋ-ಕುಲ Go-Kula