ತಸ್ಮಿನ್ ಗತೇ
ಭ್ರಾತೃವಿಯೋಗಕರ್ಶಿತಃ ಪಪಾತ ಭೂಮೌ ಸಹಸೈವ ರಾಜಾ ।
ಸಙ್ಜ್ಞಾಮವಾಪ್ಯಾSದಿಶದಾಶು ಸಞ್ಜಯಂ ಜೀವಾಮಿ ಚೇದಾಶು ಮಮಾSನಯಾನುಜಮ್ ॥೨೨.೧೨॥
ವಿದುರ ಹೊರಟಮೇಲೆ ಧೃತರಾಷ್ಟ್ರ ತಮ್ಮನ ವಿಯೋಗ ಸಂಕಟದಿಂದ ನೆಲಕ್ಕೆ
ಒರಗಿದ,
ಮೂರ್ಛೆಯಿಂದೆದ್ದು ಸಂಜಯಗೆ ನನ್ನ ಬದುಕು ಬೇಕಾದರೆ ತಮ್ಮ ವಿದುರನ
ಕರೆದು ತಾ ಎಂದ.
ಇತೀರಿತಃ ಸಞ್ಜಯಃ ಪಾಣ್ಡವೇಯಾನ್ ಪ್ರಾಪ್ಯಾSನಯದ್ ವಿದುರಂ ಶೀಘ್ರಮೇವ ।
ಸೋSಪ್ಯಾಗತಃ
ಕ್ಷಿಪ್ರಮಪಾಸ್ತದೋಷೋ ಜ್ಯೇಷ್ಠಂ ವವನ್ದೇSಥ ಸ
ಚೈನಮಾಶ್ಲಿಷತ್ ।
ಅಙ್ಕಂ ಸಮಾರೋಪ್ಯ ಸ ಮೂರ್ಧ್ನಿ ಚೈನಮಾಘ್ರಾಯ ಲೇಭೇ
ಪರಮಾಂ ಮುದಂ ತದಾ ॥ ೨೨.೧೩॥
ಹೀಗೆ ಹೇಳಿಸಿಕೊಂಡ ಸಂಜಯ ಪಾಂಡವರಲ್ಲಿಗೆ ಹೋಗುತ್ತಾನೆ,
ಅತಿ ಶೀಘ್ರದಲ್ಲಿಯೇ ವಿದುರನನ್ನು ಅರಮನೆಗೆ ಕರೆದು ತರುತ್ತಾನೆ.
ವಿದುರನೂ ಅಪಕಾರ ಅವಮಾನ ಮರೆತು ಬಂದು ನಮಿಸಿದ,
ತಮ್ಮನ ತಬ್ಬಿ ತೊಡೆಮೇಲೆ ಕೂರಿಸಿಕೊಂಡು ನೆತ್ತಿ ಮೂಸಿ ಸುಖಿಸಿದ.
ಕ್ಷತ್ತಾರಮಾಯಾನ್ತಮುದೀಕ್ಷ್ಯ
ಸರ್ವೇ ಸಸೌಬಲಾ ಧಾರ್ತ್ತರಾಷ್ಟ್ರಾ ಅಮರ್ಷಾತ್ ।
ಸಮ್ಮನ್ತ್ರ್ಯಹನ್ತುಂ
ಪಾಣ್ಡವಾನಾಮುತೈಕಂ ಛನ್ನೋಪಧೇನೈವ ಸಸೂತಜಾ ಯಯುಃ
॥ ೨೨.೧೪॥
ವಾಪಸಾದ ವಿದುರನ ಕಂಡು ದುರ್ಯೋಧನಾದಿಗಳಿಗೆ ಹೊಟ್ಟೆಕಿಚ್ಚು ಅಸಹನೆ,
ತಾವೆಲ್ಲ ಕೂತು ನಡೆಸುವರು ಪಾಂಡವರಲ್ಲಿ ಒಬ್ಬನ ಕೊಲ್ಲುವ
ಮಂತ್ರಾಲೋಚನೆ.
ಕರ್ಣನೊಟ್ಟಿಗೆ ಕೌರವರು ಕಾಡಿಗೆ ಹೊರಟರು ನೆಚ್ಚಿಕೊಂಡು
ದುರುದ್ದೇಶವನ್ನೇ.
ವಿಜ್ಞಾಯ ತೇಷಾಂ ಗಮನಂ
ಸಮಸ್ತಲೋಕಾನ್ತರಾತ್ಮಾ ಪರಮೇಶ್ವರೇಶ್ವರಃ ।
ವ್ಯಾಸೋSಭಿಗಮ್ಯಾವದದಾಮ್ಬಿಕೇಯಂ ನಿವಾರಯಾSಶ್ವೇವ ಸುತಂ ತವೇತಿ ॥ ೨೨.೧೫॥
ತಿಳಿಯದಿರುವನೇ ದುರ್ಯೋಧನಾದಿಗಳ ತೆರಳುವಿಕೆ ಎಲ್ಲರ ಅಂತರ್ಯಾಮಿ,
ವೇದವ್ಯಾಸರು ಬಂದರಾಗ : ಬ್ರಹ್ಮ ರುದ್ರಾದಿ ದೇವತೆಗಳೆಲ್ಲರಿಗೂ ಮಹಾಸ್ವಾಮಿ.
ಧೃತರಾಷ್ಟ್ರನ ಕುರಿತು ವೇದವ್ಯಾಸರು, ನಿನ್ನ ಮಗನ
ತಡೆಹಿಡಿ ಎಂದ್ಹೇಳಿದರು.
ಅವಾಪ್ಯ
ಪಾರ್ತ್ಥಾನಯಮದ್ಯ ಮೃತ್ಯುಂ ಸಹಾನುಬನ್ಧೋ ಗಮಿತಾ ಹ್ಯಸಂಶಯಮ್ ।
ಇತೀರಿತೇ ತೇನ
ನಿವಾರಯೇತಿ ಪ್ರೋಕ್ತೋ ಹರಿಃ ಪ್ರಾಹ ನ ಸಂವದೇ ತೈಃ ॥ ೨೨.೧೬॥
ಈ ದುರ್ಬುದ್ಧಿಯ ದುರ್ಯೋಧನ ಈಗ ಪಾಂಡವರಲ್ಲಿಗೆ ಹೋದರೆ,
ನಿಸ್ಸಂದೇಹವಾಗಿಯೂ ತಪ್ಪದವರಿಗೆಲ್ಲಾ ಜೀವ ಕಳೆದುಕೊಳ್ಳುವ ಬರೆ.
ಧೃತರಾಷ್ಟ್ರ ಹೇಳಿದ -ನೀವೇ ಅವರ ತಡೆಯಬಹುದಲ್ಲ,
ವ್ಯಾಸರು ಹೇಳುತ್ತಾರೆ -ನಾನವರೊಡನೆ ಮಾತನಾಡುವುದಿಲ್ಲ.
ಮೈತ್ರೇಯ ಆಯಾಸ್ಯತಿ ಸೋSಪಿ ವಾಚಂ ಶಿಕ್ಷಾರ್ತ್ಥಮೇತೇಷ್ವಭಿಧಾಸ್ಯತೀಹ ।
ತಾಂ ಚೇದ್ ಕರೋತ್ಯೇಷ
ಸುತಸ್ತವಾಸ್ಯ ಭದ್ರಂ ತದಾ ಸ್ಯಾಚ್ಛಪ್ಸ್ಯತಿ ತ್ವನ್ಯಥಾ ಸಃ ॥ ೨೨.೧೭॥
ಮೈತ್ರೇಯ ಬಂದು ಅವನೂ ದುರ್ಯೋಧನಾದಿಗಳಿಗೆ ನೀತಿ ಉಪದೇಶಿಸುತ್ತಾನೆ,
ಪಾಲಿಸಿದರೆ ಒಳ್ಳೆಯದವರಿಗೆ : ಇಲ್ಲವಾದರೆ ಅವನು ಕೌರವರಿಗೆ
ಶಪಿಸುತ್ತಾನೆ.
ಉಕ್ತ್ವೇತಿ ರಾಜಾನಮನನ್ತಶಕ್ತಿರ್ವ್ಯಾಸೋ ಯಯೌ
ತತ್ರಗತೇಷು ತೇಷು ।
ಸುಯೋಧನಾದ್ಯೇಷು ಹತೇಷು
ಪಾರ್ತ್ಥೈರ್ಭೂಭಾರಹಾನಿರ್ನ್ನ ಭವೇದಿತಿ ಪ್ರಭುಃ ॥ ೨೨.೧೮॥
ಹೀಗೆ ಧೃತಾರಾಷ್ಟ್ರನಿಗೆ ಹೇಳಿದ ಅಸಮಾನ್ಯ ಬಲದ ವೇದವ್ಯಾಸರು
ಹೊರಡುತ್ತಾರೆ,
ಕೌರವರು ಕಾಡಿಗೆ ಹೋಗಿ ಆಗಲೇ ಸತ್ತರೆ ಭೂಭಾರಹರಣ ಆಗದೆಂದು
ಸೂಚಿಸುತ್ತಾರೆ.
[Contributed by Shri Govind Magal]
No comments:
Post a Comment
ಗೋ-ಕುಲ Go-Kula