ವೈಚಿತ್ರವೀರ್ಯ್ಯತನಯೇನ ತು ಪಾಣ್ಡುಪುತ್ರಾಃ ಸಮ್ಭಾವಿತಾಸ್ತಮುಪ ಚ ನ್ಯವಿಶನ್ ನಿಶಾಂ ತಾಮ್
।
ಪ್ರಾತಶ್ಚ ಭೀಷ್ಮಮುಖರಾಃ ಸಕಲಾಶ್ಚ ಭೂಪಾ
ಆಸೇದುರಾಶು ಚ ಸಭಾಂ ಸಹ ಪಾಣ್ಡುಪುತ್ರೈಃ ॥೨೧.೩೨೧॥
ಪಾಂಡವರಿಗೆ ಧೃತರಾಷ್ಟ್ರನಿಂದ
ಗೌರವ -ಆದರ,
ಪಾಂಡವರದು ಆ ರಾತ್ರಿ
ದೊಡ್ಡಪ್ಪನಲ್ಲಿ ಬಿಡಾರ.
ಬೆಳಿಗ್ಗೆ ಭೀಷ್ಮ, ರಾಜರೆಲ್ಲ ಸಭೆ
ಸೇರಿದ ವ್ಯಾಪಾರ.
ವೈಚಿತ್ರವೀರ್ಯ್ಯನೃಪತಿರ್ವಿದುರಾನ್ವಿತೋsಸ್ಯ
ಗಾನ್ಧಾರರಾಜಸಹಿತಾಸ್ತನಯಾಃ ಸಕರ್ಣ್ಣಾಃ ।
ಪ್ರಾಪ್ತಾಃ ಸಭಾತಳಮಥಾSಹ್ವಯದತ್ರ
ಧರ್ಮ್ಮರಾಜಂ ಸುತಃ ಸುಬಲಕಸ್ಯ ಸ ದೇವನಾಯ ॥೨೧.೩೨೨॥
ವಿದುರನ ಜೊತೆ ಧೃತರಾಷ್ಟ್ರ, ಶಕುನಿ ಕರ್ಣ ಸಮೇತ
ಧೃತರಾಷ್ಟ್ರಪುತ್ರರೆಲ್ಲಾ ಸೇರಿದರು,
ಸಭಾವಿಧಿ ನಂತರ ಸುಬಲಪುತ್ರ
ಶಕುನಿಯಿಂದ ಧರ್ಮರಾಜಗೆ ದ್ಯೂತ ಆಹ್ವಾನಕ್ಕೆ ಮೊಹರು.
ಸರ್ವಾಂಶ್ಚ ತತ್ರ
ಕಲಿರಾವಿಶದೇವ ಭೀಮಪೂರ್ವಾನ್ ವಿನೈವ ಚತುರಃ ಸಪೃಥಾಂ ಚ ಕೃಷ್ಣಾಮ್ ।
ಕ್ಷತ್ತಾರಮೇವ ಚ ತತೋ ನಹಿ
ಭೀಷ್ಮಮುಖ್ಯೈಸ್ತೇ ವಾರಿತಾಃ ಕುಲವಿನಾಶನಕರ್ಮ್ಮವೃತ್ತಾಃ ॥೨೧.೩೨೩॥
ಭೀಮಾರ್ಜುನ ನಕುಲ ಸಹದೇವ
ಕುಂತಿ ದ್ರೌಪದಿ ಮತ್ತು ವಿದುರ,
ಮೇಲಿನ ಏಳುಜನರ ಬಿಟ್ಟು
ಮಿಕ್ಕೆಲ್ಲರಲ್ಲಿ ಆಗಿತ್ತು ಕಲಿವ್ಯಾಪಾರ.
ಈ ಕಾರಣದಿಂದ ಕುಲನಾಶಕ
ಜೂಜಿಗೆ ಬರಲಿಲ್ಲ ತಡೆ,
ಎಲ್ಲರದೂ ಕಲಿಪ್ರಭಾವದಿಂದ
ಮೂಕಪ್ರೇಕ್ಷಕರಾದ ನಡೆ.
ಭೀಮಾದಿಭಿಃ ಸ ವಿದುರೇಣ ಚ ವಾರ್ಯ್ಯಮಾಣೋ ದ್ಯೂತೇ ನಿಧಾಯ ಪಣಮಪ್ಯಖಿಲಂ ಸ್ವವಿತ್ತಮ್ ।
ಗಾನ್ಧಾರಕೇಣ ವಿದಿತಾಕ್ಷಹೃದಾ ಜಿತೋ ದ್ರಾಕ್ ಪಾಣ್ಡೋಃ ಸುತೋsಥ
ನಕುಲಂ ನ್ಯದಧಾತ್ ಪಣಾಯ ॥೨೧.೩೨೪॥
ತಡೆ ಒಡ್ಡಿದ್ದರೂ
ಭೀಮಸೇನಾದಿಗಳು ಮತ್ತು ವಿದುರ,
ತನ್ನೆಲ್ಲಾ ಆಸ್ತಿ
ಪಣವಾಗಿಟ್ಟು ಸೋತುಹೋದ ಕುಂತೀಪುತ್ರ.
ನಿಪುಣ ಜೂಜುಕೋರ ಶಕುನಿಯ
ಗೆಲ್ಲುವ ಜಾಲ,
ಧರ್ಮರಾಜಗೆ ಬಂತು ನಕುಲನ
ಪಣವಿಡುವ ಕಾಲ.
ತಸ್ಮಿನ್ ಜಿತೇSಥ ಸಹದೇವಮಥಾರ್ಜ್ಜುನಂ ಚ ಭೀಮಂ
ಚ ಸೋಮಕಸುತಾಂ ಸ್ವಮಪಿ ಕ್ರಮೇಣ ।
ರಾಜಾ ನಿಧಾಯ ವಿಜಿತೋSಥ ಸುಯೋಧನಃ ಸ್ವಂ ಸೂತಂ ದಿದೇಶ
ಪೃಷತಾತ್ಮಜಪುತ್ರಿಕಾಯಾಃ ॥೨೧.೩೨೫॥
ಮೊದಲು ನಕುಲನ್ನ ಪಣಕ್ಕಿಟ್ಟು
ಧರ್ಮರಾಜನಾದ ಪರಾಜಿತ,
ಸಹದೇವಾದಿಗಳು ದ್ರೌಪದಿ ನಂತರ
ತನ್ನನ್ನೂ ತಾನು ಸೋತ.
ಹೀಗೆ ಧರ್ಮರಾಜ ಎಲ್ಲವನ್ನೂ
ಸೋತಮೇಲೆ ದುರ್ಯೋಧನ,
ಪೃಷದರಾಜಪುತ್ರ
ದ್ರುಪದಪುತ್ರಿಗಾಗಿ ಕಳುಹಿಸಿದ ಸಾರಥಿಯನ್ನ.
(ಮೊದಲು ನಕುಲ, ಸಹದೇವ, ಅರ್ಜುನ, ಭೀಮ, ದ್ರೌಪದಿ ನಂತರ
ತಾನು,
ಕ್ರಮವಾಗಿ ಎಲ್ಲರನ್ನೂ ಸೋತು
ಕಡೆಗೆ ತನ್ನನ್ನೇ ತಾನು ಸೋತ ಧರ್ಮರಾಜನು.)
[Contributed by Shri Govind Magal]
No comments:
Post a Comment
ಗೋ-ಕುಲ Go-Kula