ಪ್ರಯಾತಾನನು ತಾನ್ ಕುನ್ತೀ ಪ್ರಯಯೌ ಪುತ್ರಗೃದ್ಧಿನೀ ।
ರೋರುದ್ಯಮಾನಾಂ ವಿದುರಃ ಸ್ಥಾಪಯಾಮಾಸ ತಾಂ ಗೃಹೇ ।
ಪ್ರಣಮ್ಯ ತಾಂ ಯಯುಃ ಪಾರ್ತ್ಥಾಃ ಸಕೃಷ್ಣಾಃ ಶೀಘ್ರಗಾಮಿನಃ ॥೨೧.೪೦೬॥
ಕಾಡಿಗೆ ಹೊರಟು ನಿಂತಿರುವಂಥಾ
ಪಾಂಡವರನ್ನು,
ಕುಂತಿ ಅನುಸರಿಸುವಳು ಬಯಸಿ
ಅವರ ಹಿತವನ್ನು.
ಅಳುತ್ತಿದ್ದ ಕುಂತಿಯನ್ನು
ಸಮಾಧಾನಿಸಿ ತನ್ನಲ್ಲೇ ಉಳಿಸಿಕೊಳ್ಳುತ್ತಾನೆ ವಿದುರ,
ಪಾಂಡವರು ದ್ರೌಪದಿಯೊಂದಿಗೆ
ಕಾಡಿಗೆ ಹೊರಡುತ್ತಾರೆ ಕುಂತಿಗೆ ಮಾಡಿ ನಮಸ್ಕಾರ.
ಯುಧಿಷ್ಠಿರೋSವಾಗ್ವದನೋ ಯಯೌ ನ ಕ್ರೋಧಚಕ್ಷುಷಾ ।
ದಹೇಯಂ ಕೌರವಾನ್ ಸರ್ವಾನಿತಿ ಕಾರುಣಿಕೋ ನೃಪಃ ॥೨೧.೪೦೭॥
ಕೃಪಾವಂತ ಧರ್ಮರಾಜ ತಲೆ
ತಗ್ಗಿಸಿಕೊಂಡು ನಡೆದ,
ತನ್ನ ಕೋಪಕ್ಕವರು
ಬಲಿಯಾಗದಿರಲೆಂದು ಹಾಗೆ ಮಾಡಿದ.
ಉದ್ಧೃತ್ಯ ಬಾಹೂ ಪ್ರಯಯೌ ಬಾಹುಷಾಳೀ ವೃಕೋದರಃ ।
ಆಭ್ಯಾಮೇವಾಖಿಲಾಞ್ಛತ್ರೂಞ್ಛಕ್ತೋ ಹನ್ತುಮಹಂ ತ್ವಿತಿ ॥೨೧.೪೦೮॥
ದಪ್ಪ ತೋಳ್ಗಳ ಭೀಮಸೇನ ತನ್ನ
ಕೈಗಳ ಮೇಲೆತ್ತಿ ನಡೆದ,
ಆ ತೋಳುಗಳಿಂದಲೇ ಶತ್ರುಗಳ
ವಧೆಯೆಂದು ಸೂಚಿಸಿದ.
ಅಬದ್ಧಕೇಶಾ ಪ್ರಯಯೌ ದ್ರೌಪದೀ ಸಾ ಸಭಾತಳಾತ್ ।
ಮುಕ್ತಕೇಶಾ ಭವಿಷ್ಯನ್ತಿ ಧಾರ್ತ್ತರಾಷ್ಟ್ರಸ್ತ್ರಿಯಸ್ತ್ವಿತಿ ॥೨೧.೪೦೯॥
ದ್ರೌಪದಿದೇವಿ ಸಭೆಯಿಂದ ಜಡೆ
ಬಿಚ್ಚಿಕೊಂಡು ತೆರಳುತ್ತಾಳೆ,
ದುರ್ಯೋಧನನ
ಸ್ತ್ರೀಯರಿಗೊದಗುವ ವೈಧವ್ಯ ಸೂಚಿಸುತ್ತಾಳೆ.
ವರ್ಷನ್ ಪಾಂಸೂನ್ ಯಯೌ ಪಾರ್ತ್ಥ ಇತ್ಥಂ ಶತ್ರುಷು ಸಾಯಕಾನ್ ।
ವರ್ಷಯಾನೀತ್ಯಭಿಪ್ರಾಯಃ ಪರಮಾಸ್ತ್ರವಿದಾಂ ವರಃ ॥೨೧.೪೧೦॥
ಶ್ರೇಷ್ಠ ಅಸ್ತ್ರಜ್ಞನಾದ
ಅರ್ಜುನ ಮಣ್ಣು ಮೇಲೆ ತೂರಿದ ,
ಶತ್ರುಗಳಿಗೆ ಹೀಗೇ
ಬಾಣಮಳೆಗರೆವೆ ಎಂದು ತೋರಿದ.
ಯಮಾವವಾಙ್ಮುಖೌ ಯಾತೌ ನಾSವಯೋಃ ಶತ್ರವೋ ಮುಖಮ್ ।
ಪಶ್ಯನ್ತ್ವಸ್ಯಾಮವಸ್ಥಾಯಾಮಿತ್ಯೇವ ಧೃತಚೇತಸೌ ॥೨೧.೪೧೧॥
ತಮ್ಮ ಮುಖದ ಆ ಅವಸ್ಥೆ
ಶತ್ರುಗಳು ನೋಡದೆ ಇರಲೆಂದು,
ನಕುಲ ಸಹದೇವರು ತಮ್ಮ ತಲೆ
ತಗ್ಗಿಸಿ ನಡೆದರು ಅಂದು.
ಪ್ರೇತಸಂಸ್ಕಾರಸೂಕ್ತಾನಿ ಪಠನ್ ಧೌಮ್ಯೋSಗ್ರತೋ ಯಯೌ ।
ಹತೇಷು ಧಾರ್ತ್ತರಾಷ್ಟ್ರೇಷು ಮಯಾ ಕಾರ್ಯ್ಯಾಃ ಕ್ರಿಯಾ ಇತಿ ॥೨೧.೪೧೨॥
ಪುರೋಹಿತರಾದ ಧೌಮ್ಯರು
ಸಾಗುತ್ತಾರೆ ಪಠಿಸುತ್ತಾ ಪ್ರೇತಸಂಸ್ಕಾರ ಸೂಕ್ತ,
ಸೂಚಿಸಲು ಕೌರವರ ಸಂಸ್ಕಾರ
ಕಾರ್ಯಗಳಿಗೆ ತಾನೇ ವಹಿಸುವ ಪೌರೋಹಿತ್ಯ.
ತಾನಥಾನುಯಯುಃ ಸೂತಾ ರಥೈಃ ಪರಿಚತುರ್ದ್ದಶೈಃ ।
ಸೂದಾಃ ಪೌರೋಗವಾಶ್ಚೈವ ಭೃತ್ಯಾ ಯೇ ತ್ವಾಪ್ತಕಾರಿಣಃ ॥೨೧.೪೧೩॥
ಕೆಲ ಸೂತರು ಪಾಂಡವರ ಸೇವಕರು
ಹದಿನಾಕು ರಥಗಳಲ್ಲವರ ಅನುಸರಿಸುತ್ತಾರೆ,
ಅವರಲ್ಲಿ ಅಡಿಗೆಯವರು
ಮಡಿವಾಳರು ಅತ್ಯಂತ ಆತ್ಮೀಯ ಸೇವಕರು ಇರುತ್ತಾರೆ.
ತತಸ್ತೇ ಜಾಹ್ನವೀತೀರೇ ವನೇ ವಟಮುಪಾಶ್ರಿತಾಃ ।
ನ್ಯಷೀದನ್ನಾಗತಾನ್ ದೃಷ್ಟ್ವಾ ಸಮಸ್ತಾನ್ ಪುರವಾಸಿನಃ ॥೨೧.೪೧೪॥
ಆನಂತರ ಅವರು ಗಂಗಾನದಿ
ತೀರಕ್ಕೆ ಬರುತ್ತಾರೆ,
ದೊಡ್ಡದೊಂದು ಆಲದ ಮರದ ಅಡಿ
ಕೂರುತ್ತಾರೆ.
ಪಟ್ಟಣವಾಸಿಗಳೆಲ್ಲಾ ಅಲ್ಲಿಗೆ
ಬಂದು ಸೇರುತ್ತಾರೆ.
ತತಸ್ತು ತೇ ಸರ್ವಜಗನ್ನಿವಾಸಂ ನಾರಾಯಣಂ ನಿತ್ಯಸಮಸ್ತಸದ್ಗುಣಮ್ ।
ಸ್ವಯಮ್ಭುಶರ್ವಾದಿಭಿರರ್ಚ್ಚಿತಂ ಸದಾ ಭಕ್ತ್ಯಾSಸ್ಮರನ್ ಭಕ್ತಭವಾಪಹಂ
ಪ್ರಭುಮ್ ॥೨೧.೪೧೫॥
ನಂತರ ಅವರು ಜಗದಾಧಾರ, ಸದ್ಗುಣಗಳ ಅನನ್ಯ
ಭಂಡಾರ,
ಬ್ರಹ್ಮ ರುದ್ರಾದಿಗಳ ಆರಾಧ್ಯ, ನಿವಾರಕ
:ಭಕ್ತರೆಲ್ಲರ ಸಂಸಾರ,
ಮಾಡಿದರು ಅಂಥ ಸರ್ವೋತ್ತಮ
ನಾರಾಯಣನ ಸ್ಮರಣೆ, ನಮಸ್ಕಾರ.
[ಆದಿತಃ ಶ್ಲೋಕಾಃ : ೨೭೬೬+೪೧೫=೩೧೮೧]
॥ ಇತಿ
ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಪಾಣ್ಡವವನಪ್ರವೇಶೋ
ನಾಮ ಏಕವಿಂಶೋsಧ್ಯಾಯಃ ॥
ಹೀಗೆ
ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ರಚಿಸಿದ ,
ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯದ
ಯಥಾಮತಿ ಅನುವಾದ,
ಪಾಂಡವವನಪ್ರವೇಶ
ಹೆಸರಿನ ಇಪ್ಪತ್ತೊಂದನೇ ಅಧ್ಯಾಯ,
ಶ್ರೀಕೃಷ್ಣನ
ಪಾದಾರವಿಂದಗಳಲ್ಲಿ ಅರ್ಪಿಸಿದ ಧನ್ಯ ಭಾವ.
[Contributed by Shri Govind Magal]
No comments:
Post a Comment
ಗೋ-ಕುಲ Go-Kula