Thursday, 5 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 304-308

 

[ಧೃತರಾಷ್ಟ್ರನಲ್ಲಿ ಕಲಿಯ ಆವೇಶ ಆಗಿರುವುದು ಯಾವಾಗ ಎನ್ನುವುದನ್ನು ವಿವರಿಸುತ್ತಾರೆ: ]

ಆವಿವೇಶ ಕಲಿಸ್ತಂ ಹಿ ಯದಾ ಪುತ್ರತ್ವಸಿದ್ಧಯೇ ।

ಅಂಶೇನ ತತ ಆರಭ್ಯ ನೈವಾಸ್ಮಾದಪಜಗ್ಮಿವಾನ್                    ॥೨೧.೩೦೪॥

 

ಯಾವತ್ ಪುರಂ ಪರಿತ್ಯಜ್ಯ ವನಮೇವ ವಿವೇಶ ಹ ।

ತದನ್ತರಾ ತತಸ್ತಸ್ಯ ಪಾಪಯುಕ್ತಂ ಮನೋsಭವತ್                  ॥೨೧.೩೦೫॥

 

(ಗಂಡು ಮತ್ತು ಹೆಣ್ಣು ಒಂದು ಮಗುವನ್ನು ಪಡೆಯಲು ಶಾಸ್ತ್ರದಲ್ಲಿ ಒಂದು ಪ್ರಕ್ರಿಯೆಯನ್ನು ಹೇಳುತ್ತಾರೆ. ಊಟ ಮಾಡುವ ಆಹಾರದಲ್ಲಿ ಜೀವ ಬಂದು ಸೇರಿಕೊಳ್ಳುತ್ತಾನೆ. ಹೀಗೆ ಸೇರಿದ ಜೀವ ಆಹಾರದೊಂದಿಗೆ ಗಂಡಿನ ದೇಹವನ್ನು ಪ್ರವೇಶಿಸಿ, ರೇತಸ್ಸಿನ ರೂಪವಾಗಿ ಬದಲಾಗುತ್ತಾನೆ. ಆ ರೇತಸ್ಸು ಹೆಣ್ಣಿನ ಗರ್ಭಾಶಯವನ್ನು ಸೇರಿ ಒಂದು ಮಗುವಾಗಿ ರೂಪುಗೊಳ್ಳುತ್ತದೆ.)

ಪುತ್ರತ್ವ ಸಿದ್ಧಿಗಾಗಿ ಯಾವಾಗ ಕಲಿ ಮಾಡಿದ್ದನೋ ಧೃತರಾಷ್ಟ್ರನ ದೇಹಪ್ರವೇಶ,

ಅವತ್ತಿನಿಂದ ಧೃತರಾಷ್ಟ್ರನಲ್ಲೇ ಒಂದಂಶದಿಂದಿದ್ದು ಮಾಡಿಬಿಟ್ಟಿದ್ದ ಅಲ್ಲೇ ವಾಸ.

ಮುಂದೊಮ್ಮೆ ಧೃತರಾಷ್ಟ್ರ ಹಸ್ತಿನಾವತಿ ಬಿಟ್ಟು ಕಾಡಿಗೆ ಹೊರಡುವಾಗ,

ಆವರೆಗೂ ಅವನೊಂದಿಗಿದ್ದ ಕಲಿ ಮಾಡಿದ್ದನವನ ಪಾಪಿಷ್ಠ ಬಹುಭಾಗ.

 

ನ್ಯವಾರಯತ್ ತಂ ವಿದುರೋ ಮಹತ್ ತೇ ಪಾಪಂ ಕುಲಸ್ಯಾಪಿ ವಿನಾಶಕೋsಯಮ್ ।

ಸಮುದ್ಯಮೋ ನಾತ್ರ ವಿಚಾರ್ಯ್ಯಮಸ್ತಿ ಕೃಥಾ ನ ತಸ್ಮಾದಯಶಶ್ಚ ತೇ ಸ್ಯಾತ್             ॥೨೧.೩೦೬॥

ಶ್ರೇಷ್ಠ ಸದ್ಬುದ್ಧಿಯ ವಿದುರ ಧೃತರಾಷ್ಟ್ರಗೆ ಹೇಳುತ್ತಾನೆ,

ನಿನಗಿದರಿಂದ ಪಾಪ, ಕುಲನಾಶ;ಬೇಕಿಲ್ಲ ಹೆಚ್ಚು ಯೋಚನೆ.

ಮಾಡಬೇಡ ಈ ಕೆಲಸ -ಪಡೆವೆ ಶಾಶ್ವತವಾದ ಅಪಕೀರ್ತಿಯನ್ನೆ.

 

ಇತಿ ಬ್ರುವಾಣಂ ಕಲಹೋSತ್ರ ನ ಸ್ಯಾನ್ನಿವಾರಯಾಮೋ ವಯಮೇವ ಯಸ್ಮಾತ್ ।

ದ್ರಷ್ಟುಂ ಸುತಾನ್ ಕ್ರೀಡತ ಏಕಸಂಸ್ಥಾನಿಚ್ಛಾಮಿ ಪಾರ್ತ್ಥಾಂಶ್ಚ ಸುಯೋಧನಾದೀನ್ ॥೨೧.೩೦೭॥

 

ಅತಃ ಕ್ಷಿಪ್ರಮುಪಾನೇಯಾಃ ಪಾರ್ತ್ಥಾ ಇತಿ ಬಲೋದಿತಃ ।

ಯಯೌ ಸ ವಿದುರಃ ಪಾರ್ತ್ಥಾನ್ ದ್ವಾರಕಾಂ ಕೇಶವೇ ಗತೇ                  ॥೨೧.೩೦೮॥

ಎಚ್ಚರಿಸುವ ವಿದುರನ ಮಾತುಗಳಿಗೆ ಧೃತರಾಷ್ಟ್ರ ಹೀಗೆ ಹೇಳುವ,

ದುರ್ಯೋಧನ ಪಾಂಡವರು ಒಟ್ಟಿಗಾಡಲಿ ಬೀರಿ  ಕ್ರೀಡಾಭಾವ.

ಪಾಂಡವರನ್ನು ಬೇಗನೇ ಕರೆಸುವಂತೆ ಅಂಧರಾಜ ಹೇಳುತ್ತಾನೆ,

ಬಲವಂತಕ್ಕೊಳಗಾದ ವಿದುರ ಪಾಂಡವರೆಡೆಗೆ ಹೊರಡುತ್ತಾನೆ.

ಆಗ ಶ್ರೀಕೃಷ್ಣ ಇಂದ್ರಪ್ರಸ್ಥದಲ್ಲಿರದೇ ದ್ವಾರಕೆಯಲ್ಲಿ ಇರುತ್ತಾನೆ.


[Contributed by Shri Govind Magal]

No comments:

Post a Comment

ಗೋ-ಕುಲ Go-Kula