ಶ್ರುತ್ವಾ ವಚಃ ಸ
ಪವನಸ್ಯ ಶರಂ ತ್ವಮೋಘಂ ಸಞ್ಜಹ್ರ ಆಶು ಸ ಚ ಸಾಲ್ವಪತಿಃ ಸ್ವಸೌಭಮ್ ।
ಆರುಹ್ಯ ಬಾಲಕಲಹೇನ
ಕಿಮತ್ರ ಕಾರ್ಯ್ಯಂ ಕೃಷ್ಣೇನ ಸಙ್ಗರ ಇತಿ ಪ್ರಯಯೌ ಸ್ವದೇಶಮ್ ॥೨೨.೪೭॥
ವಾಯುವಚನವ ಕೇಳಿಸಿಕೊಂಡ ಪ್ರದ್ಯುಮ್ನ ತಾನು ಬಾಣ ಹಿಂದೆಳೆದು
ಬತ್ತಳಿಕೆ ಸೇರಿಸಿದ,
ಸಾಲ್ವನು : ಹುಡುಗನೊಡನೇನು ಯುದ್ಧ ಅದು ಕೃಷ್ಣನೊಡನೇ ಸಿದ್ಧವೆಂದು
ತನ್ನ ದೇಶಕ್ಕೆ ತೆರಳಿದ.
ಪ್ರದ್ಯುಮ್ನಸಾಮ್ಬಗದಸಾರಣಚಾರುದೇಷ್ಣಾಃ ಸೇನಾಂ ನಿಹತ್ಯ
ಸಹ ಮನ್ತ್ರಿಗಣೈಸ್ತದೀಯಾಮ್ ।
ಆಹ್ಲಾದಿನಃ ಸ್ವಪುರಮಾಯಯುರಪ್ಯಹಂ ಚ ತತ್ರಾಗಮಂ ಸಪದಿ
ತೈಃ ಶ್ರುತವಾನಶೇಷಮ್ ॥೨೨.೪೮॥
ಪ್ರದ್ಯುಮ್ನ ಸಾಂಬ ಗದ ಸಾರಣ ಚಾರುದೇಷ್ಣ ಮುಂತಾದವರೆಲ್ಲ,
ಸಾಲ್ವ ಸೇನೆಯನ್ನು ನಾಶಗೊಳಿಸಿ ಸಂತಸದಿಂದ ವಾಪಸಾಗುತ್ತಿದ್ದರೆಲ್ಲ.
ಅದೇ ಸಮಯಕ್ಕೆ ನಾನು ಅಲ್ಲಿಗೆ ತಲುಪಿದೆ,
ನಡೆದ ಘಟನೆಗಳನ್ನೆಲ್ಲಾ ಅವರಿಂದ ಕೇಳಿದೆ.
ಯಸ್ಮಿಞ್ಛರೇ ಕರಗತೇ ವಿಜಯೋ ದ್ಧ್ರುವಃ ಸ್ಯಾನ್ಮತ್ತೇಜಸಾ
ತದನುಸಙ್ಗ್ರಹಣಾತ್ ಸುತಾನ್ಮೇ ।
ಯಾತಂ ನಿಶಮ್ಯ ರಿಪುಮಾತ್ಮಪುರೀಂ ಚ ಭಗ್ನಾಂ ದೃಷ್ಟ್ವೈವ
ತೇನ ತದನುಬ್ರಜನಂ ಕೃತಂ ಮೇ ॥೨೨.೪೯॥
ಯಾವ ಆ ಬಾಣದಿಂದ ಖಚಿತವಾಗಿತ್ತು ಪ್ರದ್ಯುಮ್ನನ ಗೆಲುವು,
ನನ್ನ ತೇಜಸ್ಸಿನ ಬಾಣ ಹಿಂಪಡೆದ ನನ್ನ ಮಗ ಮುಂದೂಡಿದ್ದವನ ಸಾವು.
ಹಾಳಾದ ದ್ವಾರಕೆಯ ಸರಿಮಾಡಲು ಹೇಳಿದೆ,
ನಾನು ಸಾಲ್ವನನ್ನು ಬೆನ್ನಟ್ಟಿಕೊಂಡು ಹೋದೆ.
ತಂ ಸಾಗರೋಪರಿಗಸೌಭಗತಂ
ನಿಶಾಮ್ಯ ಮುಕ್ತೇ ಚ ತೇನ ಮಯಿ ಶಸ್ತ್ರಮಹಾಸ್ತ್ರವರ್ಷೇ ।
ತಂ ಸನ್ನಿವಾರ್ಯ್ಯ ತು
ಮಯಾ ಶರಪೂಗವಿದ್ಧೋ ಮಾಯಾ ಯುಯೋಜ ಮಯಿ ಪಾಪತಮಃ ಸ ಸಾಲ್ವಃ ॥೨೨.೫೦॥
ಸಾಲ್ವ ಸೌಭ ವಿಮಾನದಲ್ಲಿ ಸಮುದ್ರದ ಮೇಲೆ ಹೋಗುತ್ತಿದ್ದ,
ಸುರಿಸುತ್ತಿದ್ದ ಬಾಣಗಳ ತಡೆದು ಹೊಡೆದೆನವನ ಬಾಣಗಳಿಂದ.
ಪಾಪಿ ಸಾಲ್ವ ವಿವಿಧ ಮಾಯಾಜಾಲ ಪ್ರಯೋಗ ಮಾಡಿದ.
ತಾಃ ಕ್ರೀಡಯಾ ಕ್ಷಣಮಹಂ
ಸಮರೇ ನಿಶಾಮ್ಯ ಜ್ಞಾನಾಸ್ತ್ರತಃ ಪ್ರತಿವಿಧೂಯ ಬಹೂಂಶ್ಚ ದೈತ್ಯಾನ್ ।
ಹತ್ವಾSSಶು ತಂ ಚ ಗಿರಿವರ್ಷಿಣಮಾಶು ಸೌಭಂ ವಾರ್ದ್ಧೌ
ನ್ಯಪಾತಯಮರೀನ್ದ್ರವಿಭಿನ್ನಬನ್ಧಮ್ ॥
೨೨.೫೧ll
ಎಲ್ಲಾ ಮಾಯೆಗಳನ್ನು ನಿರಾಯಾಸದಿ ಕ್ಷಣದಲ್ಲಿ ಆಟದಂತೆ,
ಜ್ಞಾನಾಸ್ತ್ರದಿಂದ ಸೋಲಿಸಿ ಸಂಹರಿಸಿದೆ ದೈತ್ಯರ ಆ ಸಂತೆ.
ಬೆಟ್ಟಗಳ ಮಳೆಯನ್ನೇ ಸುರಿಸುತ್ತಿದ್ದ ಸಾಲ್ವನ ಸಮುದ್ರಕೆ ಕೆಡವಿದೆ,
ನಾ ಬಿಟ್ಟ ಚಕ್ರದಿಂದವನ ವಿಮಾನ ತುಂಡಾಗಿ ಬೀಳುವಂತೆ ಮಾಡಿದೆ.
ತಂ ಸ್ಯನ್ದನಸ್ಥಿತಮಥೋ
ವಿಭುಜಂ ವಿಧಾಯ ಬಾಣೇನ ತದ್ರಥವರಂ ಗದಯಾ ವಿಭಿದ್ಯ ।
ಚಕ್ರೇಣ ತಸ್ಯ ಚ ಶಿರೋ
ವಿನಿಕೃತ್ಯ ಧಾತೃಶರ್ವಾದಿಭಿಃ ಪ್ರತಿನುತಃ ಸ್ವಪುರೀಮಗಾಂ ಚ ॥೨೨.೫೨॥
ವಿಮಾನ ನಾಶವಾಗಲು ಆ ಸಾಲ್ವ ರಥವೇರಿ ಯುದ್ಧಕೆ ಬಂದ,
ತೋಳು ಕಳಕೊಂಡು ರಥಹೀನನಾಗಿ ತಲೆ ಕತ್ತರಿಸಲ್ಪಟ್ಟು ಬಿದ್ದ.
ಬ್ರಹ್ಮ ರುದ್ರಾದಿಗಳಿಂದ ಸ್ತುತಿಸಲ್ಪಟ್ಟೆ,
ನನ್ನ ಪಟ್ಟಣ ದ್ವಾರಕೆಯತ್ತ ಹೊರಟೆ.
ತಸ್ಮಾದಿದಂ ವ್ಯಸನಮಾಸ
ಹಿ ವಿಪ್ರಕರ್ಷಾನ್ಮೇ ಕಾರ್ಯ್ಯತಸ್ತ್ವಿತಿ ನಿಗದ್ಯ ಪುನಶ್ಚ ಪಾರ್ತ್ಥಾನ್ ।
ಕೃಷ್ಣಾಂ ಚ
ಸಾನ್ತ್ವಯಿತುಮತ್ರ ದಿನಾನ್ಯುವಾಸ ಸತ್ಯಾ ಚ ಸೋಮಕಸುತಾಮನುಸಾನ್ತ್ವಯನ್ತೀ ॥೨೨.೫೩॥
ಹೀಗೆ ಕೃಷ್ಣ ವಿವರಿಸಿದ ತಾನು ನಡೆಸಿದ ಸಾಲ್ವಕಾರ್ಯ,
ಪಾಂಡವರಿಗಾದ ಕಷ್ಟ ತಾನು ಹೋಗಿದ್ದರಿಂದ ದೂರ.
ದ್ರೌಪದಿಯ ಸಮಾಧಾನ ಮಾಡುತ್ತಾ ಕೆಲಕಾಲ ಅಲ್ಲೇ ನಿಂತ,
ಸತ್ಯಭಾಮೆಯೂ ಜೊತೆಗಿದ್ದಳು ದ್ರೌಪದಿಯ ಸಂತೈಸುತ್ತ.
[Contributed by Shri Govind Magal]
No comments:
Post a Comment
ಗೋ-ಕುಲ Go-Kula