ನಿಮಿತ್ತಾನ್ಯತಿಘೋರಾಣಿ ಕುಪಿತೇ ಮಾರುತಾತ್ಮಜೇ ।
ದೃಷ್ಟ್ವಾSSಮ್ಬಿಕೇಯೋ ವಿದುರಂ ಪಪ್ರಚ್ಛೈಷಾಂ ಫಲಂ ದ್ರುತಮ್ ॥೨೧.೩೭೪॥
ಭೀಮಸೇನ ಕೋಪಗೊಂಡಾಗ ಆದ ಘೋರ
ಶಕುನಗಳು,
ಧೃತರಾಷ್ಟ್ರ ವಿದುರನ ಕೇಳಿದ
ಎನೀ ಶಕುನಗಳ ಫಲಗಳು.
ಆಹ ತಂ ವಿದುರೋ ಜ್ಯೇಷ್ಠಂ ಕ್ಷಣೇSಸ್ಮಿಂಸ್ತವ ಪುತ್ರಕಾಃ ।
ಸಾನುಬನ್ಧಾ ನಶಿಷ್ಯನ್ತಿ ವೃಕೋದರಬಲಾಹತಾಃ ॥೨೧.೩೭೫॥
ಆಗ ವಿದುರ ಅಣ್ಣ
ಧೃತರಾಷ್ಟ್ರಗೆ ಈ ರೀತಿಯಾಗಿ ಹೇಳುತ್ತಾನೆ,
ನಿನ್ನ ಮಕ್ಕಳು ಪರಿವಾರದವರು
ಕಾಣುತ್ತಾರೆ ಭೀಮನ ಕೈಯಲ್ಲಿ ಕೊನೆ.
ಕ್ರೀಡಸೇSರ್ಭಕವತ್ ತ್ವಂ ಹಿ ಕಿಂ ಜಿತಂ ಕಿಂ ಜಿತಂ ತ್ವಿತಿ ।
ಅಧರ್ಮ್ಮೇಣ ಜಿತಾನತ್ರ ಜಿತಾನ್ ಪಶ್ಯಸಿ ಪಾಣ್ಡವಾನ್ ॥೨೧.೩೭೬॥
ನಿನ್ನದೀಗ ಎನು ಗೆದ್ದರು ಎನು
ಗೆದ್ದರು ಎಂದು ಕೇಳಿ ಸಂಭ್ರಮಿಸುವ ಹುಡುಗನ ವರ್ತನೆ,
ಅಧರ್ಮದಿ ಸೋತ ಪಾಂಡವರು
ವಾಸ್ತವವಾಗಿ ಸೋತು ಹೋಗಿದ್ದಾರೆ ಎಂಬ ಚಿಂತನೆ.
ಸ್ತ್ರೀಷು ದ್ಯೂತೇಷು ವಾ ದತ್ತಂ ಮದಾನ್ಧೇನ ನರೇಣ ವಾ ।
ನ ದತ್ತಮಾಹುರ್ವಿದ್ವಾಂಸಸ್ತಸ್ಯ ಬನ್ಧುಭಿರೇವ ಚ ॥೨೧.೩೭೭॥
ಆಹಾರ್ಯ್ಯಂ ಪುನರಾಹುಶ್ಚ ತಥಾSಪಿ ನತು ಪಾಣ್ಡವೈಃ ।
ತತ್ ಕೃತಂ ತವ ಪುತ್ರಾಣಾಂ ಖ್ಯಾಪಯದ್ಭಿರಶಿಷ್ಟತಾಮ್ ॥೨೧.೩೭೮॥
ಹೆಂಗಸರಿಗೆ ಕೊಟ್ಟದ್ದು, ಜೂಜಾಟದಲ್ಲಿ
ಕೊಟ್ಟದ್ದು,
ಕುಡಿದಾಗ ಕೊಟ್ಟದ್ದು, ಮಾನ್ಯವಾಗುವುದಿಲ್ಲವದು.
ಇದ್ಯಾವುದೂ ದಾನವಲ್ಲ
ಸೋಲುವುದು ಎಂದೂ ಕರೆಯಲ್ಪಡಲ್ಲ,
ಹಾಗೊಮ್ಮೆ ಕೊಟ್ಟಿದ್ದರೂ
ಮರಳಿ ಪಡೆಯಬಹುದಾದದು ಎಲ್ಲ.
ಪಾಂಡವರು ಆ ರೀತಿ ಮಾಡದಿರುವ
ಕಾರಣ,
ಆಗಲೆಂದು ನಿನ್ನ ಮಕ್ಕಳ
ದುಷ್ಟತನದನಾವರಣ.
ಇತ್ಯುಕ್ತ ಆಹಾSಮ್ಬಿಕೇಯೋ ನಿಮಿತ್ತಾನಾಂ ಫಲಂ ಕಥಮ್ ।
ನ ಭವೇದಿತಿ ಸ ಪ್ರಾಹ ದ್ರುತಂ ಕೃಷ್ಣಾ ವಿಮುಚ್ಯತಾಮ್ ॥೨೧.೩೭೯॥
ಧೃತರಾಷ್ಟ್ರ ಕೇಳುವ : ಹೇಗೆ
ಈ ದುರ್ನಿಮಿತ್ತಗಳ ತಡೆ,
ವಿದುರನೆಂದ : ಮೊದಲು ಮಾಡು
ದ್ರೌಪದಿಯ ಬಿಡುಗಡೆ.
ತೋಷಯಸ್ವ ವರೈಶ್ಚೈನಾಮನ್ಯಥಾ ತೇ ಸುತಾನ್ ಮೃತಾನ್ ।
ವಿದ್ಧಿ ಭೀಮೇನ ನಿಷ್ಪಿಷ್ಟಾನ್ ಮಾSತ್ರ ತೇ ಸಂಶಯೋ ಭವೇತ್ ॥೨೧.೩೮೦॥
ಸಂತೋಷಗೊಳಿಸು ಪಾಂಡವರ
ಕೊಡುತ್ತಲವರಿಗೆ ವರ,
ಇಲ್ಲದಿರೆ ಖಚಿತ ಭೀಮನಿಂದ
ನಿನ್ನ ಮಕ್ಕಳೆಲ್ಲರ ಸಂಹಾರ.
ಸಂಶಯ ಬೇಡ ಇದರಲ್ಲಿ ; ಇದು ಸತ್ಯವಾದಂಥ
ವಿಚಾರ.
ಕೃಷ್ಣಾ ಚ ಪಾಣ್ಡವಾಶ್ಚೈವ ತಪೋವೃದ್ಧಿಮಭೀಪ್ಸವಃ ।
ತಪಸಾ ನೈವ ಧಕ್ಷ್ಯನ್ತಿ ತೇನ ಜೀವನ್ತಿ ತೇ ಸುತಾಃ ॥೨೧.೩೮೧॥
ದ್ರೌಪದಿ ಪಾಂಡವರದು ತಪೋಬಲ
ಉಳಿಸಿ ಕೊಳ್ಳುವ ವಿಚಾರ,
ನಿನ್ನ ಮಕ್ಕಳ ಉಳಿಸಿರುವುದು
ಅವರ ಸಹನೆ ಮತ್ತು ಔದಾರ್ಯ.
ತಥಾSಪಿ ಯದಿ ಕೃಷ್ಣಾಂ ತ್ವಂ ನ ಮೋಚಯಸಿ ತೇ ಸುತಾನ್ ।
ಹನಿಷ್ಯತಿ ನ ಸನ್ದೇಹೋ ಬಲೇನೈವ ವೃಕೋದರಃ ॥೨೧.೩೮೨॥
ಒಂದೊಮ್ಮೆ ನೀನು
ತೆರೆಯದಿದ್ದರೆ ದ್ರೌಪದಿಗೆ ಬಿಡುಗಡೆಯ ದ್ವಾರ,
ಸಂದೇಹ ಬೇಡ
ಭೀಮನಿಂದಾಗುತ್ತದೆ ನಿನ್ನ ಮಕ್ಕಳೆಲ್ಲರ ಸಂಹಾರ.
[Contributed by Shri Govind Magal]
No comments:
Post a Comment
ಗೋ-ಕುಲ Go-Kula