ತತ್ರ ಸರ್ವಜಗದೇಕಸಙ್ಗಮೇ ತತ್ವನಿರ್ಣ್ಣಯಕಥಾ ಬಭೂವಿರೇ ।
ಪ್ರಾಶ್ನಿಕೋSತ್ರ ಪರಿಪೂರ್ಣ್ಣಚಿದ್ಧನೋ ವ್ಯಾಸ ಏವ ಭಗವಾನ್ ಬಭೂವ ಹ ॥೨೧.೨೪೧॥
ಲೋಕವೇ ಸೇರಿದ್ದ ಆ
ಯಜ್ಞಸ್ಥಳದಲ್ಲಿ ತತ್ವದ ಚರ್ಚೆ ನಡೆದಿತ್ತು,
ಅರಿವೇ ಮೈವೆತ್ತಿ ಬಂದಿದ್ದ
ವ್ಯಾಸರ ಮಾತೇ ನಿರ್ಣಾಯಕವಾಗಿತ್ತು.
ತತ್ವನಿರ್ಣ್ಣಯಕಥಾಸು ನಿರ್ಣ್ಣಯೋ ವಾಸುದೇವಗುಣವಿಸ್ತರೋSಭವತ್
।
ನಾಸ್ತಿ ತತ್ಸದೃಶ ಉತ್ತಮಃ ಕುತಃ ಪಾರ ಏಷ ನ ತತೋSನ್ಯ
ಇತ್ಯಪಿ ॥೨೧.೨೪೨॥
ಆ ತತ್ವ ಚರ್ಚೆಯಲ್ಲಿ ಆಯಿತು
ವಾಸುದೇವನೇ ಸರ್ವಗುಣಪೂರ್ಣನೆಂಬ ನಿರ್ಣಯ,
ಅವಗೆ ಸಮರೇ ಇಲ್ಲವೆಂದಮೇಲೆ
ಮಿಗಿಲಾದವ ಎಲ್ಲಿಂದ ಬಂದಾನೆಂಬ ಅಭಿಪ್ರಾಯ.
ಎಲ್ಲದಕ್ಕೂ ದಡದಂತೆ ಭಗವಂತನೇ
ಆಶ್ರಯ,
ಅವನೇ ವಿಲಕ್ಷಣ
ಸರ್ವೋತ್ತಮನೆಂಬ ನಿರ್ಣಯ.
ಬಾದರಾಯಣಭೃಗೂತ್ಥರಾಮಯೋಃ ಶೃಣ್ವತೋಃ ಪರಮನಿರ್ಣ್ಣಯೇ ಕೃತೇ ।
ಮೋದಮಾನಜನತಾಸಮಾಗಮೇSಪೃಚ್ಛದತ್ರ ನೃಪತಿರ್ಯ್ಯತವ್ರತಮ್ ॥೨೧.೨೪೩॥
ವೇದವ್ಯಾಸ ಪರಶುರಾಮರು
ಕೇಳಿಸಿಕೊಳ್ಳುತ್ತಿದ್ದ ಸಮಯ,
ಮಂಡಿಸಲ್ಪಡುತ್ತಿತ್ತು
ಉತ್ಕೃಷ್ಟವಾದ ತತ್ವಜ್ಞಾನ ನಿರ್ಣಯ.
ಅಲ್ಲಿತ್ತು ಸಂತಸದಿಂದಿದ್ದ
ಎಲ್ಲಾ ಸಜ್ಜನರ ವೃಂದ,
ಆಗ ಧರ್ಮರಾಜ ಭೀಷ್ಮರನ್ನು
ಪ್ರಶ್ನೆ ಮಾಡಿದ.
ಜಾನಮಾನೋSಪಿ ನೃಪತಿಃ ಸರ್ವಪೂಜ್ಯತಮಂ ಹರಿಮ್ ।
ಸಂಶಯಂ ಭೂಭೃತಾಂ ಭೇತ್ತುಂ ಭೀಷ್ಮಂ ಪಪ್ರಚ್ಛ ಧರ್ಮ್ಮವಿತ್ ॥೨೧.೨೪೪॥
ಧರ್ಮರಾಜಗೆ ಅರಿವಿತ್ತು
ಶ್ರೀಕೃಷ್ಣ ಸರ್ವೋತ್ತಮ ನಾರಾಯಣನೆಂಬ ವಿಚಾರ,
ಭೀಷ್ಮರಿಗೆ ಪ್ರಶ್ನೆ ಮಾಡಿದ,ಮಾಡಲು ಅಲ್ಲಿ
ನೆರೆದ ರಾಜರ ಸಂಶಯ ಪರಿಹಾರ.
ನಾಸ್ತಿ ನಾರಾಯಣಸಮಮಿತಿ
ವಾದೇನ ನಿರ್ಣ್ಣಯೇ ।
ಕೃತೇ ಬ್ರಹ್ಮಾದಿಭಿರಪಿ
ಕೃಷ್ಣಂ ಮರ್ತ್ತ್ಯಂ ಹಿ ಮೇನಿರೇ ॥೨೧.೨೪೫॥
ನೃಪಾಸ್ತಸ್ಮಾದಯಂ ಕೃಷ್ಣೋ ನಾರಾಯಣ ಇತಿ ಸ್ಮ ಹ ।
ಸಮ್ಯಗ್ ಜ್ಞಾಪಯಿತುಂ ಧರ್ಮ್ಮಸೂನುರ್ಭೀಷ್ಮಮಪೃಚ್ಛತ ॥೨೧.೨೪೬॥
ನಾರಾಯಣಗೆ ಸಮರಿಲ್ಲವೆಂದು
ಬ್ರಹ್ಮಾದಿಗಳಿಂದ ಸಿದ್ಧವಾಗಿತ್ತು,
ಜನರಲ್ಲಿ ಕೃಷ್ಣ ಮನುಷ್ಯ
ಮಾತ್ರನೆಂಬ ಭಾವವದು ಮನೆ ಮಾಡಿತ್ತು.
ಶ್ರೀಕೃಷ್ಣನೇ ನಾರಾಯಣನೆಂದು
ದೃಢಪಡಿಸಲೋಸುಗ,
ಧರ್ಮರಾಜ ಭೀಷ್ಮಾಚಾರ್ಯರನ್ನು
ಪ್ರಶ್ನೆ ಮಾಡಿದನಾಗ.
[ಅಲ್ಲಿ ಬ್ರಹ್ಮಾದಿ
ದೇವತೆಗಳು ನೆರೆದಿದ್ದರೂ ಕೂಡಾ ಧರ್ಮರಾಜ ಭೀಷ್ಮಾಚಾರ್ಯರನ್ನೇ ಏಕೆ ಪ್ರಶ್ನಿಸಿದ ಅಂದರೆ: ]
ಬ್ರಹ್ಮಾದಯಃ ಸುರಾ ಯಸ್ಮಾದ್ ದೃಶ್ಯನ್ತೇ ಮರ್ತ್ತ್ಯವನ್ನೃಭಿಃ ।
ನಚೈವಾತಿತರಾಭ್ಯಾಸೋ ನೃಣಾಮಸ್ತಿ ಮುನಿಷ್ವಪಿ ॥೨೧.೨೪೭॥
ಬ್ರಹ್ಮಾದಿ ದೇವತೆಗಳೂ
ಸಾಮಾನ್ಯರಿಗೆ ಮನುಷ್ಯರಂತೆ ಕಾಣುತ್ತಿದ್ದರಿಂದ,
ಕಾಡಿನ ಋಷಿಗಳ
ಅರಿವಿರದುದರಿಂದ ; ಬ್ರಹ್ಮಾದಿಗಳನ್ನು
ಕೇಳದೇ ಉಳಿದ.
ಸರ್ವಶಾಸ್ತ್ರವಿದಂ ಭೀಷ್ಮಂ ಜಾನನ್ತ್ಯೇತೇ ನೃಪಾ ಅಪಿ ।
ತಸ್ಮಾದ್ ಭೀಷ್ಮಮಪೃಚ್ಛತ್ ಸ ಕುಲವೃದ್ಧತ್ವತಸ್ತಥಾ ॥೨೧.೨೪೮॥
ರಾಜರೆಲ್ಲಾ ಅರಿತಿದ್ದರು
ಭೀಷ್ಮರನ್ನ,
ಗೊತ್ತಿತ್ತು ಭೀಷ್ಮರಲ್ಲಿದ್ದ
ಶಾಸ್ತ್ರಜ್ಞಾನ,
ಕುಲಕ್ಕೆ ಹಿರಿಯರೆಂಬ
ಸ್ಥಾನಮಾನ,
ಹಾಗಾಗಿ ಧರ್ಮರಾಜ ಕೇಳಿದ
ಭೀಷ್ಮರನ್ನ.
[Contributed by Shri Govind Magal]
No comments:
Post a Comment
ಗೋ-ಕುಲ Go-Kula