Friday, 6 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 350-356

 

ಅಥ ದುರ್ಯ್ಯೋಧನಃ ಪಾಪೋ ಭೀಮಸೇನಸ್ಯ ಪಶ್ಯತಃ ।

ಊರುಂ ಸನ್ದರ್ಶಯಾಮಾಸ ಕೃಷ್ಣಾಯೈ ಭೀಮ ಆಹ ತಮ್             ॥೨೧.೩೫೦॥

 

ತವೋರುಮೇನಂ ಗದಯೋರುವೇಗಯಾ ಬಿಭೇತ್ಸ್ಯ ಇತ್ಯೇವ ಪುನಃ ಸುಯೋಧನಃ ।

ಊಚೇ ನಾನ್ಯದ್ ಭವತಾಮಸ್ತಿ ವಿತ್ತಂ ದ್ಯೂತೇ ಕೃಷ್ಣಂ ಸ್ಥಾಪಯಧ್ವಂ ಪಣಾಯ ॥೨೧.೩೫೧॥

ಬಳಿಕ ಪಾಪಿ ದುರ್ಯೋಧನ ಭೀಮ ನೋಡುತ್ತಿರುವಂತೆಯೇ ದ್ರೌಪದಿಗೆ ತನ್ನ ಎಡ ತೊಡೆ ತೋರುತ್ತಾನೆ,

ಆಗ ಭೀಮಸೇನ ನಿನ್ನ ತೊಡೆಯನ್ನು ಬಹುವೇಗದ ಗದೆಯಿಂದ ಹೊಡೆದು ಸೀಳುತ್ತೇನೆ ಎನ್ನುತ್ತಾನೆ.

ದುರ್ಯೋಧನನಾಗ-ನಿಮ್ಮಲ್ಲಿ ಪಣಕ್ಕೆ ಹಣವಿಲ್ಲ ಕೃಷ್ಣನನ್ನೇ ಪಣವಾಗಿಡಿ ಎಂದು ಮೂದಲಿಸುತ್ತಾನೆ.

 

ಅಥಾಬ್ರವೀದ್ ವೃಕೋದರಃ ಕೃತೇSವಮಾನನೇ ಹರೇಃ ।

ನಿಪಾತ್ಯ ಭೂತಳೇ ಹಿ ತೇ ಶಿರೋ ಮೃದಿಷ್ಯ ಇತ್ಯಲಮ್             ॥೨೧.೩೫೨॥

ಆಗ ಭೀಮಸೇನ -ನೀನು ಭಗವಂತಗೆ ಮಾಡುತ್ತಿದ್ದೀಯ ಅವಮಾನ,

ಪ್ರತಿಜ್ಞೆಯಿದು-ನಿನ್ನ ನೆಲಕ್ಕೆ ಕೆಡವಿ ಜೋರಾಗಿ ತುಳಿವೆ ನಿನ್ನ ತಲೆಯನ್ನ.

 

ಸ ವದ್ಧ್ಯ ಏವ ಮೇ ಸದಾ ಪರೋಕ್ಷತೋSಪಿ ಯೋ ಹರಿಮ್ ।

ವಿನಿನ್ದಯೇದಿತಿ ದ್ಧ್ರುವಂ ಪ್ರತಿಶ್ರುತಂ ಹಿ ಮಾರುತೇಃ      ॥೨೧.೩೫೩॥

ನನ್ನ ಹಿಂದೆ ಯಾರೆಲ್ಲಾ ಭಗವಂತನನ್ನು ನಿಂದಿಸುತ್ತಾರೆ,

ಪ್ರತಿಜ್ಞೆಗೈಯ್ಯುತ್ತಿದ್ದೇನೆ ಅವರೆಲ್ಲಾ ನನ್ನಿಂದ ಕೊಲ್ಲಲ್ಪಡುತ್ತಾರೆ.

 

ಪುನಶ್ಚ ಪಾಪವೃದ್ಧಯೇ ತದೈವ ನೋ ಜಘಾನ ತಮ್ ।

ವಿಕರ್ತ್ತನಾತ್ಮಜಃ ಪುನರ್ಜ್ಜಗಾದ ಸೋಮಕಾತ್ಮಜಾಮ್             ॥೨೧.೩೫೪॥

 

ಪ್ರಯಾಹಿ ಭೂಭೃತೋ ಹಿ ನೋ ಗೃಹಂ ನ ಸನ್ತಿ ಪಾಣ್ಡವಾಃ ।

ಇತೀರಿತೇ ಸಮುತ್ಥಿತೌ ವೃಕೋದರೋSನು ಚಾರ್ಜ್ಜುನಃ             ॥೨೧.೩೫೫॥

ದುರ್ಯೋಧನನ ಪಾಪ ಇನ್ನೂ ಬೆಳೆಯಬೇಕು ಎಂದು,

ಭೀಮಸೇನ ಆಗಲೇ ಅವನನ್ನು ಕೊಲ್ಲಲಿಲ್ಲ ಅಂದು.

ನಂತರ ಸೂರ್ಯಪುತ್ರ ಕರ್ಣ ದ್ರೌಪದಿಗೆ ಹೇಳುತ್ತಾನೆ,

ನೀನೀಗ ಹೋಗಿ ಸೇರಬೇಕು ದುರ್ಯೋಧನನ ಮನೆ.

ನಿನ್ನ ಪಾಲಿಗೆ ಪಾಂಡವರದು ಆಗಿ ಹೋಗಿದೆ ಮರಣ,

ಭೀಮಾರ್ಜುನರು ಎದ್ದು ನಿಲ್ಲುತ್ತಾರೆ ಹೀಗನ್ನುತ್ತಿರಲು ಕರ್ಣ.

 

ಉಭೌ ಚ ತೌ ಯುಧಿಷ್ಠಿರೋ ನ್ಯವಾರಯತ್ ತಥಾSಪರೇ ।

ತತೋ ನಿಷಣ್ಣಯೋಸ್ತಯೋಃ ಸುಯೋಧನೋ ವಚೋSಬ್ರವೀತ್             ॥೨೧.೩೫೬॥

ಅವರಿಬ್ಬರೂ ಏಳುತ್ತಿರುವಾಗ ಅಣ್ಣ ಯುಧಿಷ್ಠಿರ ಇತರರೂ ಅವರನ್ನು ತಡೆಯುತ್ತಾರೆ,

ಅವರಿಬ್ಬರೂ ಕುಳಿತುಕೊಳ್ಳುತ್ತಿರಲು ದುರ್ಯೋಧನ ಆರಂಭಿಸುತ್ತಾನೆ ಮಾತಿನ ಧಾರೆ.


 [Contributed by Shri Govind Magal]

No comments:

Post a Comment

ಗೋ-ಕುಲ Go-Kula