Thursday 5 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 249-259

 

ಪಿತಾಮಹಾಗ್ರ್ಯಪೂಜಾರ್ಹಃ ಕೋsತ್ರ ಲೋಕಸಮಾಗಮೇ ।

ಬ್ರಹ್ಮಶರ್ವಾದಯಶ್ಚಾತ್ರ ಸನ್ತಿ ರಾಜಾನ ಏವ ಚ                        ॥೨೧.೨೪೯॥

ಭೀಷ್ಮಪಿತಾಮಹರೇ, ಈ ಯಾಗದಲ್ಲಿ ಅಗ್ರಪೂಜೆಗೆ ಅರ್ಹರಾರು,

ಬ್ರಹ್ಮ ರುದ್ರಾದಿಗಳು, ಅನೇಕ ಚಕ್ರವರ್ತಿಗಳಲ್ಲಿ ಸೂಕ್ತರು ಯಾರು.

 

ಇತಿ ಪೃಷ್ಟೋSಬ್ರವೀತ್ ಭೀಷ್ಮಃ ಕೃಷ್ಣಂ ಪೂಜ್ಯತಮಂ ಪ್ರಭುಮ್ ।

ಯದ್ಯಪ್ಯೇಕಸ್ತ್ರಿಧಾ ವಿಷ್ಣುರ್ವಸಿಷ್ಠಭೃಗುವೃಷ್ಣಿಷು              ॥೨೧.೨೫೦॥

 

ಪ್ರಾದುರ್ಭೂತಸ್ತಥಾSಪ್ಯೇತೇ ನೃಪಾ ಹಿ ವ್ಯಾಸರಾಮಯೋಃ 

ವಿಪ್ರತ್ವಾನ್ನ ವಿರುದ್ಧ್ಯನ್ತೇ ತತ ಏವ ಚ ಯುಕ್ತತಾಮ್ ॥೨೧.೨೫೧॥

ಧರ್ಮರಾಜನ ಪ್ರಶ್ನೆಗೆ ಉತ್ತರಿಸುತ್ತಾರೆ ಭೀಷ್ಮಾಚಾರ್ಯ,

ರಾಜಾ, ಶ್ರೀಕೃಷ್ಣಪರಮಾತ್ಮನೇ ಅಗ್ರ ಪೂಜೆಗೆ ಅರ್ಹ.

ಇನ್ನೆರಡು ಭಗವದ್ರೂಪಗಳಾದ ವೇದವ್ಯಾಸರು ಪರಶುರಾಮರಿರುವಾಗ,

ವಾಸಿಷ್ಠಕೃಷ್ಣ,ಭಾರ್ಗವರಾಮರಿಗೆ ವಿರೋಧವಿಲ್ಲ ಇಬ್ಬರೂ ವಿಪ್ರರಾಗಿರುವಾಗ.

ಇನ್ನು ವೃಷ್ಣಿಕುಲದಲ್ಲಿ ಬಂದ ಶ್ರೀಕೃಷ್ಣನಿದ್ದಾನೆ,

ಅವನೇ ನಾರಾಯಣನೆಂದಾಗಬೇಕು ಸ್ಥಾಪನೆ.

 

ಮನ್ಯನ್ತೇ ನ ವಿರೋಧಶ್ಚ ತೇಷಾಂ ತತ್ರ ಹಿ ತಾದೃಶಃ । 

ಅವಿವಾದೇ ಪ್ರಸಿದ್ಧಿಶ್ಚ ನೈವಾಸ್ಯ ಭವಿತಾ ಕ್ವಚಿತ್                      ॥೨೧.೨೫೨॥

 

ತಸ್ಮಾತ್ ಕೃಷ್ಣಾಯ ದಾತವ್ಯಮಿತಿ ಭೀಷ್ಮೇಣ ಚಿನ್ತಿತಮ್ ।

ಕೃಷ್ಣಾಯ ದತ್ತೇ ರಾಜಾನೋ ವಿವಾದಂ ಕುರ್ಯ್ಯುರಞ್ಜಸಾ             ॥೨೧.೨೫೩॥

 

ವಿವಾದೇನ ಚ ಕೀರ್ತ್ತಿಃ ಸ್ಯಾದ್ ವಾಸುದೇವಸ್ಯ ವಿಸ್ತೃತಾ ।

ತತಃ ಕೃಷ್ಣಾಯಾಗ್ರಪೂಜಾ ದತ್ತಾ ಪಾರ್ತ್ಥೈರ್ಜ್ಜಗತ್ಪುರಃ             ॥೨೧.೨೫೪॥

ವೇದವ್ಯಾಸ ಪರಶುರಾಮರ ಅಗ್ರಪೂಜೆಗೆ ಬರುವುದಿಲ್ಲ ವಿರೋಧ,

ಶ್ರೀಕೃಷ್ಣ ಸರ್ವೋತ್ತಮತ್ವ ಸಿದ್ಧವಾಗುವುದಿಲ್ಲ ನಡೆಯದೇ ವಿವಾದ.

ಕೃಷ್ಣನಿಗೆ ಅಗ್ರಪೂಜೆಯಾದರೆ ಅನೇಕರಿಂದ ಬಂದೀತು ಆಕ್ಷೇಪಣೆ,

ವಿವಾದದಿಂದ ಆಗುತ್ತದೆ ಶ್ರೀಕೃಷ್ಣನ ಹಿರಿಮೆ ಕೀರ್ತಿಯ ಸ್ಥಾಪನೆ.

ಹೀಗಾಗಿತ್ತು ಭೀಷ್ಮರ ಚಿಂತನೆಯ ತೀರ್ಮಾನ,

ಅದರಂತೆ ಪಾಂಡವರಿಂದ ಶ್ರೀಕೃಷ್ಣಗೆ ಸಮ್ಮಾನ.

 

ವ್ಯಾಸಭಾರ್ಗ್ಗವಯೋಃ ಸಾಕ್ಷಾತ್ ತದೈಕ್ಯಾತ್ ತದನನ್ತರಮ್ ।

ಅಗ್ರ್ಯಾಂ ಪೂಜಾಂ ದದುಶ್ಚಾನ್ಯಾನ್ ಯಥಾಯೋಗ್ಯಮಪೂಜಯನ್             ॥೨೧.೨೫೫॥

ಯಾಗದ ಅಗ್ರಪೂಜೆ ನೆರವೇರಿತು ಶ್ರೀಕೃಷ್ಣನಿಗೆ,

ನಂತರ ಕೃಷ್ಣ ಐಕ್ಯ ಹೊಂದಿದ ವ್ಯಾಸ ರಾಮರಿಗೆ.

ಯೋಗ್ಯತಾನುಸಾರವಾದ ಪೂಜೆ ಉಳಿದವರಿಗೆ.

  

ಅಗ್ರ್ಯೋಪಹಾರಮುಪಯಾಪಿತ ಏವ ಕೃಷ್ಣೇ ಕೋಪಾದನಿನ್ದದಮುಮಾಶು ಚ ಚೇದಿರಾಜಃ ।

ಶ್ರುತ್ವೈವ ತತ್ ಪವನಜೋSಭಿಯಯೌ ನೃಪಂ ತಂ ಹನ್ತುಂ ಜಗದ್ಗುರುವಿನಿನ್ದಕಮೃದ್ಧಮನ್ಯುಃ ॥೨೧.೨೫೬॥

ಶ್ರೀಕೃಷ್ಣನಿಗೆ ಅಗ್ರಪೂಜೆ ನಡೆಯುತ್ತಿರುವಾಗ,

ಶಿಶುಪಾಲ ಸಿಟ್ಟಿನಿಂದ ಕೃಷ್ಣನ ನಿಂದಿಸಿದನಾಗ.

ಶಿಶುಪಾಲ ಭಗವಂತನ ನಿಂದನೆ ಮಾಡಿದ್ದರಿಂದ,

ಅವನ ಕೊಲ್ಲಲೆಂದು ಭೀಮಸೇನ ಮೇಲೆದ್ದ.

 

ದೂರೇSಪಿ ಕೇಶವವಿನಿನ್ದನಕಾರಿಜಿಹ್ವಾ̐ಮುಚ್ಛೇತ್ಸ್ಯ ಇತ್ಯುರುತರಾSಸ್ಯ ಸದಾ ಪ್ರತಿಜ್ಞಾ ।

ಭೀಮಸ್ಯ ತಂ ತು ಜಗೃಹೇ ಸರಿದಾತ್ಮಜೋSಥ ಸಮ್ಪ್ರೋಚ್ಯ ಕೇಶವವಚೋ ನಿಜಯೋರ್ವಧಾಯ ॥೨೧.೨೫೭॥

ಪರೋಕ್ಷದಲ್ಲಿಯಾದರೂ ದೈವನಿಂದನೆ ಮಾಡುವ ನಾಲಿಗೆಯನ್ನ,

ಕಿತ್ತುಹಾಕುತ್ತೇನೆಂದು ಭೀಮಸೇನ ಮಾಡಿಬಿಟ್ಟಿದ್ದ ಪ್ರತಿಜ್ಞೆಯನ್ನ.

ಆಗ ಭೀಷ್ಮಾಚಾರ್ಯರು ಭೀಮಸೇನನನ್ನು ತಡೆಯುತ್ತಾರೆ,

ಜಯ ವಿಜಯರ ಜನ್ಮ ; ದೈವಸಂಕಲ್ಪದ ಬಗ್ಗೆ ಹೇಳುತ್ತಾರೆ.

 

ಮಯೈವ ವದ್ಧ್ಯಾವಿತಿ ತಾವಾಹ ಯತ್ ಕೇಶವಃ ಪುರಾ ।

ತಚ್ಛ್ರುತ್ವಾ ಭೀಮಸೇನೋSಪಿ ಸ್ಥಿತೋ ಭೀಷ್ಮಕರಗ್ರಹಾತ್             ॥೨೧.೨೫೮॥

ಮೂಲರೂಪದಲ್ಲಿ ನಾರಾಯಣ ಜಯ ವಿಜಯರಿಗೆ ಹೇಳಿದ್ದ,

ನನ್ನ ಕೈಯಲ್ಲೇ ನಿಮ್ಮಿಬ್ಬರ ಸಾವಾಗುವುದು ಖಚಿತವಿದು ಸಿದ್ಧ.

ಇದೆಲ್ಲವನ್ನೂ ಭೀಷ್ಮರಿಂದ ಕೇಳಿಸಿಕೊಂಡ ಭೀಮಸೇನ ಸುಮ್ಮನಾದ.

 

[ ಹಾಗಿದ್ದರೆ ಭೀಷ್ಮಾಚಾರ್ಯರಿಗೆ ತಿಳಿದಿದ್ದ ಈ ವಿಷಯ ಭೀಮನಿಗೆ ಮೊದಲೇ ತಿಳಿದಿರಲಿಲ್ಲವೇ ಎಂದರೆ: ]

ಜಾನನ್ನಪಿ ಹರೇರಿಷ್ಟಂ ಸ್ವಕರ್ತ್ತವ್ಯತಯೋತ್ಥಿತಃ ।

ಭೀಮ ಏತಾವದುಚಿತಮಿತಿ ಮತ್ವಾ ಸ್ಥಿತಃ ಪುನಃ                       ॥೨೧.೨೫೯॥

ದೈವಚಿತ್ತವನ್ನು ತಿಳಿದವನಾಗಿದ್ದರೂ ಭೀಮಸೇನ,

ದೈವವಿರೋಧಿಯ ಖಂಡಿಸುವುದವನ ಸುಜ್ಞಾನ,

ಪ್ರತಿಭಟಿಸಿ, ವಿಷಯ ತಿಳಿದು ವಹಿಸಿದ ಮೌನ.


[Contributed by Shri Govind Magal]

No comments:

Post a Comment

ಗೋ-ಕುಲ Go-Kula