Thursday 4 February 2016

ಈರುಳ್ಳಿ – ಬೆಳ್ಳುಳ್ಳಿ: ಭಾಗ 1 - ನಮ್ಮ ಆಹಾರ - ಪ್ರಾಚೀನರ ಕೊಡುಗೆ

ಈರುಳ್ಳಿ – ಬೆಳ್ಳುಳ್ಳಿ ಬಗ್ಗೆ ಚಿಂತನೆಯ ಹಿನ್ನಲೆ :

ಮನೆಯಲ್ಲಿ ಹಬ್ಬ-ಹರಿದಿನ,ಪೂಜೆ-ಹವನ ಮುಂತಾದ ದೇವಕಾರ್ಯಗಳಿರುವಾಗ ಅಡಿಗೆಯಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಗಳನ್ನು ಬಳಸುವಂತಿಲ್ಲ.ಅದಕ್ಕೆ ಕಾರಣಗಳೇನು..?

ಈರುಳ್ಳಿ ಹಾಗೂ ಬೆಳ್ಳುಳ್ಳಿಯ ವಿಷಯದಲ್ಲೊಂದು ಪೌರಾಣಿಕೆ ಕಥೆಯಿದೆ.ಸಮುದ್ರಮಂಥನದ ನಂತರ ಮೋಹಿನಿಯ ವೇಷವನ್ನು ಧರಿಸಿ ಮಹಾವಿಷ್ಣು ಸುರರಿಗೆ ಅಮೃತವನ್ನು ಹಂಚುತ್ತಿರುತ್ತಾನೆ.ಅದನ್ನರಿತ ರಾಹು ಹಾಗೂ ಕೇತುವೆಂಬ ರಾಕ್ಷಸರು ಅಮೃತವನ್ನು ಸ್ವೀಕರಿಸಲು ಬರುತ್ತಾರೆ.ಪ್ರಮಾದದಿಂದ ವಿಷ್ಣು ಅವರಿಗೂ ಅಮೃತವನ್ನು ಹಂಚುತ್ತಾನೆ.ತತ್ಕ್ಷಣದಲ್ಲೇ ಸೂರ್ಯ ಹಾಗೂ ಚಂದ್ರ,ಅವರಿಬ್ಬರು ಅಸುರರೆಂಬ ಮಾಹಿತಿಯನ್ನು ಮಹಾವಿಷ್ಣುವಿಗೆ ನೀಡುತ್ತಾರೆ.ಅಷ್ಟರಲ್ಲಿ ಅವರಿಬ್ಬರೂ ಅಮೃತವನ್ನು ಕುಡಿದಾಗಿತ್ತು.ಆದರೆ ಅಮೃತ ಗಂಟಲಿಂದ ಇಳಿದು ದೇಹ ಸೇರಿರಲಿಲ್ಲ.ಕೂಡಲೇ ಮಹಾವಿಷ್ಣು ಅವರಿಬ್ಬರ ತಲೆಯನ್ನು ಕಡಿಯುತ್ತಾನೆ.ಅಮೃತವನ್ನು ಕುಡಿದಿದ್ದರಿಂದ ಅವರ ತಲೆ ನಾಶವಾಗುವುದಿಲ್ಲ.ಕೇವಲ ದೇಹಾಂತ್ಯವಾಗುತ್ತದೆ.ಆ ಕಾರಣದಿಂದ ಇಂದಿಗೂ ರಾಹು, ಕೇತುಗಳಿಗೆ ಶರೀರವಿಲ್ಲ.ಕೇವಲ ಶಿರವಷ್ಟೇ..!!

ಮಹಾವಿಷ್ಣು ಶಿರವನ್ನು ತುಂಡರಿಸುವಾಗ ಅವರ ಬಾಯಲ್ಲಿದ್ದ ಅಮೃತಬಿಂದುಗಳು ನೆಲವನ್ನು ಸೇರಿದವು.ಆಗಲೇ ಹುಟ್ಟಿದ್ದು ಈರುಳ್ಳಿ ಹಾಗೂ ಬೆಳ್ಳುಳ್ಳಿ.ಈರುಳ್ಳಿ ಹಾಗೂ ಬೆಳ್ಳುಳ್ಳಿಗೆ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ.ಅಮೃತಕ್ಕೆ ಸರಿಸಮವಾದ ಔಷಧೀಯ ಗುಣಗಳಿವೆ. ಹಾಗೇ ರಾಕ್ಷಸರ ಬಾಯಿಯ ಎಂಜಲೂ ಸೇರಿದ್ದರಿಂದ ದುರ್ಗಂಧ,ಹಾಗೂ ಅಪವಿತ್ರವೆಂಬ ಕುಖ್ಯಾತಿಯೂ ಸೇರಿಕೊಂಡಿದೆ.ಹಾಗಾಗಿ ದೇವಕಾರ್ಯಗಳಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯ ಸೇವನೆ ವರ್ಜ್ಯವಾಗಿದೆ.ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಅತಿಯಾಗಿ ಸೇವಿಸುವುದರಿಂದ ಶರೀರ ರಾಕ್ಷಸರಂತೇ ಗಟ್ಟಿಮುಟ್ಟಾದರೂ. ಆಚಾರ-ವಿಚಾರಗಳೂ ಸಹ ರಾಕ್ಷಸರಂತಾಗುತ್ತವೆ.ಬೆಳ್ಳುಳ್ಳಿ ಹಾಗೂ ಈರುಳ್ಳಿಗಳನ್ನು ತಾಮಸಿಕ ಆಹಾರವೆಂದು ಕರೆಯಲಾಗುತ್ತದೆ.ನಾವು ತಿನ್ನುವ ಆಹಾರ ನಮ್ಮ ಸ್ವಭಾವವನ್ನು ನಿರ್ಧರಿಸುತ್ತದೆ.ಸಾತ್ವಿಕ ಆಹಾರಗಳನ್ನು ಸೇವಿಸಿದರೆ ಸಾತ್ವಿಕರಾಗುತ್ತೇವೆ.ತಾಮಸಿಕ ಆಹಾರವನ್ನು ಸೇವಿಸಿದರೆ ತಾಮಸೀಪ್ರವೃತ್ತಿ ಬೆಳೆಯುತ್ತದೆ.ತಾಮಸಿಕ ಆಹಾರವನ್ನು ಆದಷ್ಟು ವರ್ಜಿಸುವಂತೆ ಆಹಾರನಿಯಮಗಳು ತಿಳಿಸುತ್ತವೆ.

ಮೇಲಿನ ಲೇಖನಕ್ಕೆ ಉತ್ತರವಾಗಿ ರೂಪುಗೊಂಡ ಬರಹ ಇದು.....

ಈರುಳ್ಳಿ-ಬೆಳ್ಳುಳ್ಳಿಯ ಬಗೆಗೆ ಗೀತಾರವರು ಪೋಸ್ಟ್ ಮಾಡಿದ ಲೇಖನ ಓದಿದೆ.. ಅದಕ್ಕೆ ಉತ್ತರ ರೂಪವಾಗಿ ಹೆಚ್ಚು ವಿಸ್ತಾರ ರೀತಿಯಲ್ಲೆ , ತಿಳಿಯುವ ದೃಷ್ಟಿಯಿಂದ ಲೇಖನವೊಂದನ್ನು ಬರೆದು ಕಳಿಸುತ್ತಿದ್ದೇನೆ... ನಿಮ್ಮ ಓದುವ ತಾಳ್ಮೆಗೆ ಮೊದಲೇ ಧನ್ಯವಾದ ಹೇಳಲು ಬಯಸುತ್ತೇನೆ...


                             ನಮ್ಮ ಆಹಾರ - ಪ್ರಾಚೀನರ ಕೊಡುಗೆ
                                                     🔹🔹🔹🔹🔹🔹🔹🔹🔹🔹🔹🔹

ನಮ್ಮ ಆಹಾರ ಪದ್ಧತಿಯಲ್ಲಿ ನಮ್ಮ  ಪ್ರಾಚೀನರು ದೇಹದ ಆರೋಗ್ಯಕ್ಕಿಂತ ನಮ್ಮ ಮನಸ್ಸಿನ ಆರೋಗ್ಯಕ್ಕೆ ಹೆಚ್ಚು ಒತ್ತುಕೊಟ್ಟರು.. ಮನಸ್ಸೇ ಅಲ್ಲವೆ ನಮ್ಮ ಬೆಳವಣಿಗೆಗೆ ಕಾರಣ... ಕೇವಲ ಬಲಿಷ್ಠವಾದ ದೇಹದಿಂದ ನಮ್ಮ ಆಂತರಿಕ ಬೆಳವಣಿಗೆ ಸಾಧ್ಯವಿಲ್ಲ . ಆ ದೃಷ್ಟಿಯಿಂದ ಅವರು ಹೇಳಿದರು ಬೆಳ್ಳುಳ್ಳಿ ಮತ್ತು ಈರುಳ್ಳಿ ,ಅವು ದೇಹದ ಆರೋಗ್ಯಕ್ಕೆ ಎಷ್ಟೇ ಹಿತಕಾರಿಯಾದರೂ ಅವುಗಳ ದುಷ್ಪರಿಣಾಮ ಮನಸ್ಸಿನ ಮೇಲೆ ಆಗುವುದರಿಂದ ನಮ್ಮ ದೈನಂದಿನ ಆಹಾರದಲ್ಲಿ ಈರುಳ್ಳಿ - ಬೆಳ್ಳುಳ್ಳಿ ಬಳಸಬಾರದು ಎಂದು...

ನಿತ್ಯ ಬೆಳ್ಳುಳ್ಳಿ-ಈರುಳ್ಳಿ ಸೇವನೆಯಿಂದ ನಮ್ಮ ಮನಸ್ಸಿನ Sharpness ಹೊರಟು ಹೋಗುತ್ತದೆ.. ದೇಹಾಲಸ್ಯವನ್ನು ಜಾಸ್ತಿ ಮ‌ಾಡಿ ನಿದ್ರೆಯನ್ನು ಹೆಚ್ಚಿಸುವ ಗುಣ ಈ ಪದಾರ್ಥಗಳಲ್ಲಿ ಇದೆ... ಈರುಳ್ಳಿ-ಬೆಳ್ಳುಳ್ಳಿ ನಿತ್ಯ ಬಳಸುವುದರಿಂದ ಮನುಷ್ಯರಲ್ಲಿ ಇದು ಮಂದ ಬುದ್ಧಿಗೂ ಕಾರಣವಾಗುತ್ತದೆ...

ಸಂಸ್ಕೃತದಲ್ಲಿ ಬೆಳ್ಳುಳ್ಳಿಗೆ "ಮಹೌಷಧ" ಅಂತಲೇ ಹೆಸರು.. ನಮ್ಮ ಹೃದಯ ಸಂಬಂಧಿ ಕಾಯಿಲೆಗಳಿಗೆ ಇದು ದಿವ್ಯೌಷಧ...
ಓಷಧಿಯಾಗಿ ಸೇವಿಸಬೇಕಾದದ್ದನ್ನು ಊಟದಂತೆ ಸೇವಿಸಬಾರದಲ್ಲವೆ.. ಅದ್ದರಿಂದ ಆಹಾರದಲ್ಲಿ ಇವು ವರ್ಜ್ಯ..

ಇನ್ನು ನೀವು ಹಬ್ಬ-ಹರಿದಿನಗಳಲ್ಲಿ ಇವುಗಳನ್ನು ಬಳಸಬಾರದು ಅಂದಿದ್ದೀರಿ. ಅದು ಯಾಕೆ ? ಅಲ್ಲೇ ಉತ್ತರ ಕೂಡ ಅಡಗಿದೆ. ಹಬ್ಬಗಳಲ್ಲಿ ಆಯಾ ದೇವತಾರ್ಚನೆ, ಪೂಜೆ , ನೈವೇದ್ಯ ಸಮರ್ಪಣೆ ಇರುತ್ತದೆ.. ಇವುಗಳ ಬಳಕೆ ಇಲ್ಲ.. ಮನಸ್ಸು ಪ್ರಸನ್ನವಾಗಿರಬೇಕಾದರೆ ಸಾತ್ವಿಕ ಆಹಾರ ಸೇವನೆ, ಆ ಸಾತ್ವಿಕ ಆಹಾರದಿಂದ ನಮ್ಮಲ್ಲಿ ಸಾತ್ವಿಕ ಗುಣದ ಉಗಮ... ‌ಆದ್ದರಿಂದ ಪ್ರಾಚೀನರು ಹೇಳಿದರು- "ಆಹಾರ ಶುದ್ಧೌ ಸತ್ವ ಶುದ್ಧಿಃ ಸತ್ವ ಶುದ್ಧೌ ಧ್ರುವಾ ಸ್ಮೃತಿಃ ‌" ಅಂತ... ನಮ್ಮ ಆಹಾರ ಹೇಗೋ ಹಾಗೇ ನಮ್ಮ ಮನಸ್ಸು ಕೂಡ.. ಸಾತ್ವಿಕ ಆಹಾರ ಸೇವನೆಯಿಂದ ಸಾತ್ವಿಕವಾದ ಮನಸ್ಸು ಸಾಧ್ಯ... ಏಕೆಂದರೆ ನಮ್ಮ ಆಹಾರದ ಅತ್ಯಂತ ಸೂಕ್ಷ್ಮಭಾಗ ನಮ್ಮ ಮನಸ್ಸಾಗಿ ಪರಿವರ್ತನೆಗೊಳ್ಳುವಂತದು...

ಪೂಜಾ ಸಮಯಕ್ಕೆ, ಹಬ್ಬಕ್ಕೆ ಬೇಕಾದ ಸಾತ್ವಿಕ ಮನಸ್ಥಿತಿ ನಿತ್ಯವೂ ಏಕಿರಬಾರದು ?...

ಬ್ರಾಹ್ಮಣರ ಮನೆಗಳಲ್ಲಿ ನಿತ್ಯ ದೇವರಪೂಜೆ ಮತ್ತು ಮಾಡಿದ ಎಲ್ಲ ಅಡುಗೆ  ನೈವೇದ್ಯವಾಗಿ ದೇವರಿಗೆ ಸಮರ್ಪಣೆಯಾಗು(ತ್ತದೆ)ತಿತ್ತು.... ಆದ್ದರಿಂದ ಹಿಂದೆ ಬ್ರಾಹ್ಮಣರ ಮನೆಗಳಲ್ಲಿ ಎಂದೂ  ಈರುಳ್ಳಿ-ಬೆಳ್ಳುಳ್ಳಿ ಅಡುಗೆ ಮನೆಗೆ ಪ್ರವೇಶ ಪಡೆದಿರಲಿಲ್ಲ... ಇಂದು ಎಲ್ಲ ಬದಲಾಗಿದೆ.

ಇನ್ನು ಹರಿದಿನದ ಬಗೆಗೆ ಹೇಳುವುದಾದರೆ, ನಮ್ಮ ಮನಸ್ಸು ಅತ್ಯಂತ ಎತ್ತರದಲ್ಲಿ ನೆಲೆಗೊಳ್ಳಲೆಂದೇ ಹರಿದಿನಗಳಲ್ಲಿ ಆಹಾರದ ನಿಯಂತ್ರಣ ಇರಬೇಕು ಎಂದರು ಹಿಂದಿನವರು. (ಶಾಸ್ತ್ರದಲ್ಲಿ ದಶಮಿ-ಏಕಾದಶೀ-ದ್ವಾದಶೀ ತಿಥಿಗಳನ್ನು ಹರಿದಿನಗಳೆಂದು ಕರೆಯುತ್ತಾರೆ)...

ದಶಮಿಯ ರಾತ್ರಿ ಉಪವಾಸ- ಏಕಾದಶಿ ನಿರ್ಜಲ ಉಪವಾಸ- ದ್ವಾದಶೀ ಬೆಳಗ್ಗೆಯೇ ಪಾರಣೆ ಮತ್ತೆ ರಾತ್ರಿಗೆ ಉಪವಾಸ... (ಲಂಘನಂ ಪರಮೌಷಧಂ ಎಂಬಂತೆ)...

ಇದು ಯಾವುದೋ ಒಂದು ಮತದ ಆಚರಣೆಯಷ್ಟೇ ಅಲ್ಲ ಹಿಂದೆ ಎಲ್ಲರೂ ಆಚರಿಸುತ್ತಿದ್ದ , ಆಚರಿಸಲೇಬೇಕಾದ, ಆರೋಗ್ಯದ ದೃಷ್ಟಿಯಿಂದಲೂ ಒಂದು ಒಳ್ಳೆಯ  ಸಂಪ್ರದಾಯ... 15 ದಿನಗಳಲ್ಲಿ 3 ದಿನದ ಆಹಾರ ನಿಯಂತ್ರಣದಿಂದ ಉಳಿದ 12 ದಿನ ಆಹಾರ ಹೆಚ್ಚು ಕಡಿಮೆ ಸ್ವೀಕರಿಸಿದರೂ ದೇಹಕ್ಕೆ ತಡೆಯುವ ಶಕ್ತಿ ಬರುತ್ತದೆ.... ಇದು ಸಂಪೂರ್ಣವಾಗಿ ಹಿಂದಿನವರು ಹೇಳಿಕೊಟ್ಟ ಆರೋಗ್ಯ ಸೂತ್ರ... ಇದನ್ನೆಲ್ಲ ಪಾಲಿಸುವುದನ್ನು ನಾವು ಬಿಟ್ಟೆವು, ನಮ್ಮ ದೇಹದಲ್ಲಿ ಎಲ್ಲ ರೋಗಗಳು ಮನೆಮಾಡಲು ಅವಕಾಶ ಮಾಡಿಕೊಟ್ಟೆವು...
ಅಲೆಕ್ಸಿಸ್ ಕಾರೆಲ್" ನೋಬೆಲ್ ಪ್ರಶಸ್ತಿ ವಿಜೇತ ಖ್ಯಾತ ವೈದ್ಯ ಹೇಳಿದ ಮಾತು - "15 ದಿನದಲ್ಲಿ ಒಂದು ದಿನವಾದರೂ ನಿರ್ಜಲ ಉಪವಾಸ ಮಾಡಿದರೆ, ಪ್ರಾಯಃ ಎಂದೂ ಡಾಕ್ಟರ್ ಬಳಿ ಹೋಗುವ ಅವಶ್ಯಕತೆ ಬದುಕಿನಲ್ಲಿ ಬರುವುದಿಲ್ಲ " ಎಂದು...

ನಮ್ಮ ಹಿಂದಿನವರು ಹೇಳಿದರು ಅವಕಾಶಗಳಿಲ್ಲದೆ ಹಬ್ಬ ಆಚರಿಸುವುದನ್ನು ಬಿಟ್ಟರೂ ಪರವಾಗಿಲ್ಲ ....ಹರಿದಿನದ ಆಚರಣೆ ಎಂದೂ ಮರೆಯಬಾರದು ಅಂತ...
ಕೇವಲ ಈ ಮೂರು ದಿನಗಳ ಆಹಾರ ನಿಯಂತ್ರಣದಿಂದ ಇಡೀ ಜೀವಮಾನದಲ್ಲಿ ಒಮ್ಮೆಯೂ ಡಾಕ್ಟರ್ ಬಳಿ ಹೋಗುವ ಪ್ರಸಂಗ ಬಾರದಂತೆ ಆರೋಗ್ಯವಂತರಾಗಿ ಬದುಕಲು ಇದಕ್ಕಿಂತ ಸುಲಭದ ದಾರಿ ಮತ್ತಾವುದಿದೆ ಹೇಳಿ...


ಆದರೂ ನಾವು ಆಹಾರ ನಿಯಂತ್ರಣದ ಪದ್ಧತಿಯನ್ನು ಅಳವಡಿಸಿಕೊಳ್ಳುದಿಲ್ಲ... ಡಾಕ್ಟರ್ಗೆ ಲಕ್ಷ ಕೊಟ್ಟರೂ ಪರವಾಗಿಲ್ಲ , ಉಪವಾಸದ ಬಗೆಗೆ ನಮ್ಮ ಲಕ್ಷ್ಯ ಇಲ್ಲ ಎನ್ನುವಂತಾಗಿದೆ ನಮ್ಮ ಇಂದಿನ ಯಾಂತ್ರಿಕ ಬದುಕು...

No comments:

Post a Comment

ಗೋ-ಕುಲ Go-Kula