Monday, 8 February 2016

Shri Rāghavēndra Maṅgalāṣṭaka Ślōka 05

ವಿದ್ವದ್ರಾಜಶಿರ: ಕಿರೀಟಖಚಿತಾನರ್ಘೋರುರತ್ನಪ್ರಭಾ         
ರಾಗಾಘೌಘಹ ಪದುಕದ್ವಯಚರೋ  ಪದ್ಮಾಕ್ಷಮಾಲಾಧರ:  
ಭಾಸ್ವದ್ದಂಡಕಮಂಡಲೋಜ್ಜ್ವಲ ಕರೋ ರಕ್ತಾಮ್ಬರಾಡಮ್ಬರ:  
ಶ್ರೀಮದ್-ಸದ್ಗುರು ರಾಘವೇಂದ್ರ -ಯತಿರಾಟ್ ಕುರ್ಯಾದ್-ಧ್ರುವಂ ಮಂಗಳಮ್ || ೫ ||       

ಪದಚ್ಚೇದ :-

ವಿದ್ವತ್ ರಾಜ ಶಿರ: ಕಿರೀಟ ಖಚಿತ ಅನರ್ಘ್ಯ ಉರು ರತ್ನ ಪ್ರಭಾ, ರಾಗ ಅಘ ಓಘ ಹ ಪಾದುಕದ್ವಯ ಚರ:, ಪದ್ಮಾಕ್ಷ ಮಾಲಾಧರ:, | ಭಾಸ್ವತ್, ದಂಡ, ಕಮಂಡಲ ಉಜ್ಜ್ವಲ ಖರ:, ರಕ್ತ ಅಂಬರ ಅಡಂಬರ:

ಅನ್ವಯಾರ್ಥ:-

ಅನರ್ಘ- ಬೆಲೆಕಟ್ಟಲಾಗದ, ಉರುರತ್ನಪ್ರಭಾ - ಉತ್ಕೃಷ್ಠವಾದ ರತ್ನದ ಪ್ರಭೆಉಳ್ಳ, ಕಿರೀಟಖಚಿತ - ಕಿರೀಟದಿಂದ ಕೂಡಿದ, ವಿದ್ವದ್ರಾಜ- ವಿದ್ವಾಂಸ ಶ್ರೇಷ್ಠರ, ಶಿರ: - ಶಿರಸ್ಸಿನಂತಿರುವ,   ರಾಗ- ಅಘ - ಓಘ -   ರಾಗ- ಮೋಹ, ಅಘ- ಪಾಪ ಇವುಗಳ , ಓಘ- ಸಮೂಹವನ್ನು, - ನಾಶಪಡಿಸುವಂತ: ಪದುಕದ್ವಯ- ಎರಡುಪಾದುಕೆ ಗಳೊಂದಿಗೆ, ಚರ:- ನಡೆದಾಡುವ, ಪದ್ಮಾಕ್ಷಮಾಲಾಧರ: ಪದ್ಮಾಕ್ಷ ಮಣಿಗಳ ಹಾರ ಧರಿಸಿರುವಂತ: , ಭಾಸ್ವಾತ್- ಹೊಳೆಯುತ್ತಿರುವ, ದಂಡ- (ಯತಿಗಳು ಹಿಡಿಯುವ ಯಜ್ಞೋಪವೀತ ಸಹಿತವಾದಕೋಲು, ಕಮಂಡಲ- ಕಳಶ/ ತಂಬಿಗೆ, ಹಿಡಿದಿರುವ, ಉಜ್ವಲ- ಹೊಳೆಯುವ ಕರ:- ಕೈಉಳ್ಳ, ರಕ್ತಾಮ್ಬರಾಡಮ್ಬರ: ರಕ್ತ- ಕೆಂಪು, ಅಂಬರ- ವಸ್ತ್ರ, ಆಡಂಬರ: ಹಿರಿಮೆ ಉಳ್ಳವರು. ಸಣ್ಣ ಪುಟ್ಟ ಸಾಧನಾಶೂನ್ಯರೆಲ್ಲ ಜರತಾರಿ, ರೇಶಿಮೆ, ಇತ್ಯಾದಿ ಬೆಲೆಬಾಳುವ ವಸ್ತ್ರ ಧರಿಸಿ ಅಬ್ಬರದ   ಆಡಂಬರ ಮಾಡುವಾಗದೊಡ್ಡ  ತಪಸ್ವಿಗಳೂ, ಶಾಪಾನುಗ್ರಹ ಸಂಪನ್ನರೂ ಆದ ರಾಯರು ಮಾತ್ರಾ ಕೇವಲ ಕೆಂಪು ಕಾಷಾಯ ವಸ್ತ್ರವನ್ನೇ ಆಡಮ್ಬರ ಎಂಬಂತೆ ಧರಿಸುತ್ತಿದ್ದರು. ಶ್ರೀಮತ್ - ಜ್ಞಾನಿಗಳಾದ, ಸದ್ಗುರು- ಉತ್ತಮಗುರುಗಳಾದ, ರಾಘವೇಂದ್ರ ಯತಿರಾಟ್ - ಯತಿಶ್ರೇಷ್ಠರಾದ ರಾಘವೇಂದ್ರರು, ಧೃವಂ- ಶಾಶ್ವತವಾದ, ಮಂಗಳಂ - ಔನ್ನತ್ಯವನ್ನು (ಭಾಗ್ಯವನ್ನು ) ಕುರ್ಯಾತ್ - ಮಾಡಲಿ (ಉಂಟುಮಾಡಲಿ)

ತಾತ್ಪರ್ಯ:

ರಾಯರ ಅತ್ಯಂತ ಆಪ್ತಶಿಷ್ಯರೂ, ಪರಮಭಕ್ತರೂ ಆದ ಅಪ್ಪಣಾಚಾರ್ಯರು ಈಶ್ಲೋಕದಲ್ಲಿ ರಾಯರ ಬಾಹ್ಯ ಸ್ವರೂಪವನ್ನು ಮೈಮರೆತು ವರ್ಣಿಸಿದ್ದಾರೆ.

ರಾಯರು ನೋಡುವ ಭಕ್ತರ ಕಣ್ಣಿಗೆ ಹೇಗೆ ಕಾಣುತ್ತಿದ್ದರು ? ನಿಜವಾಗಲೂ ಈ ಉಪಮೆ ಬಹಳ ಸುಂದರ.

ಎಲಾ ಶ್ರೇಷ್ಠ ವಿದ್ವಾಂಸರುಗಳ ಗುಂಪೇ ಒಂದು ಶರೀರವಾದರೆ, ನಮ್ಮ ರಾಯರು ಆ ಶರೀರದ, ಅತ್ಯಂತ ಬೆಲೆಬಾಳುವ, ಬೆಲೆಕಟ್ಟಲಾರದ ವಜ್ರ ಮಣಿಗಳಿಂದ ಅಲಂಕೃತವಾದ ಶಿರಸ್ಸಿನಂತಿದ್ದರು. ಅಂದರೆ, ಒಂದು ಶರೀರಕ್ಕೆ ತಲೆ ಹೇಗೆ ಮುಖ್ಯವೋ ಹಾಗೆಯೇ ಸಮಸ್ತ ವಿದ್ವಾಂಸರ ಸಮೂಹಕ್ಕೆ ರಾಯರು ಬಹಳ ಪ್ರಮುಖರೂ ಕಿರೀಟಪ್ರಾಯರೂ ಆಗಿದ್ದರು.

ಪಾಪಗಳ ರಾಶಿಯನ್ನು, ರಾಗಾದಿ ದೋಷಗಳನ್ನು ನಾಶಮಾಡಲು ಸಾಕ್ಷಾತ್ತಾಗಿ ಅವರೇ ಬರಬೇಕಿಲ್ಲ, ಅವರ ಪಾದುಕೆಗಳೇ ಸಮರ್ಥವಾಗಿದ್ದವು.  ಸ್ಪರ್ಷಮಣಿಯ ಸ್ಪರ್ಷದಿಂದ ಕಬ್ಬಿಣ ಕೂಡ ಬಂಗಾರವಾಗುವಂತೆ, ಅವರ ತಪ;ಪ್ರಭಾವಕ್ಕೆ ಸಮೀಪವಾದ ಪಾದುಕೆಯಂಥ ಜಡವಸ್ತುಗಳು ಕೂಡ ಪಾಪಗಳ ರಾಶಿಯನ್ನು ನಾಶಮಾಡುವ ಶಕ್ತಿಯನ್ನು ಪಡೆದಿರುತ್ತಿದ್ದವು  ಎಂಬ ವಿಶಯವನ್ನು ಇಲ್ಲಿ ವಿವರಿಸಿದ್ದಾರೆ.

ಕೊರಳಲ್ಲಿ ಪದ್ಮಾಕ್ಷಿ ಹಾರ, ಕೈಯಲ್ಲಿ ಹೊಳೆಯುವ ದಂಡ ಕಮಂಡಲಗಳನ್ನು ಹಿಡಿದು, ಕೆಂಪುಬಣ್ಣದ  ಕಾವಿ ಧರಿಸಿದ ರಾಯರು ಉಜ್ವಲವಾಗಿ ಕಾಣಿಸುತ್ತದ್ದರು.  "ಯತಿಶ್ರೇಷ್ಠರಾದ ರಾಯರು ಕೇವಲ ಕೆಂಪು ಕಾಷಾಯ ವಸ್ತ್ರವನ್ನು ಧರಿಸುತ್ತಿದ್ದರು". ಇದು ಅವರ ಅತ್ಯಂತ ಸರಳ ಜೀವನ ಶೈಲಿಯ ಒಂದು ಉದಾಹರಣೆ ಅಷ್ಟೆ.

ಅಂಥ: ಶ್ರೀ ರಾಘವೇಂದ್ರ ಗುರುಗಳು ನಮಗೆ ಶಾಶ್ವತವಾದ ಮಂಗಳವನ್ನು ಉಂಟುಮಾಡಲಿ ಎಂಬುದು ಶ್ಲೋಕದ ಆಶಯ.
****


Ślōka 05:

विद्वद्राजशिरः किरीटखचितानर्घ्योरुरत्नप्रभा
रागाघौघहपादुकद्वयचरः पद्माक्षमालाधरः ।
भास्वद्दंडकमंडलोज्वलकरा रक्तांबराडंबरः
श्रीमत्सद्गुरुराघवेंद्रयतिराट् कुर्याद्ध्रुवं मंगलम् ॥ ५

vidvadrājaśira: Kirīṭakhacitānarghōruratnaprabhā 
rāgāghaughaha padukadvayacarō padmākṣamālādharaḥ 
bhāsvaddaṇḍakamaṇḍalōjjvala karō raktāmbarāḍambaraḥ 
śrīmad-sadguru rāghavēndra -yatirāṭ kuryād-dhruvaṁ maṅgaḷam || 5 ||

Padacchēda:

विद्वत् रा शिरः किरीट खचितनर्घ्यरु रत्न प्रभा राग पादुकद्वय चरः पद्माक्ष मालाधरः भास्वत् दं कमंडलज्वलकरा रक्तांबराडंबरः

vidvat rāja śiraḥ kirīṭa khacita anarghya uru ratna prabhā raga agha ōgha ha padukadvaya caraḥ padmākṣa mālādharaḥ Bhāsvat daṇḍa kamaṇḍala ujjvala kara rakta ambara aḍambaraḥ 

Word meanings:

अनर्घ(anargha) – priceless; रुरत्नप्रभा(ururatnaprabhā)- glowing like a high quality gem;  किरीट खचित(kirīṭakhacita)- with a crown;   विद्वद्राज(vidvadrāja) best amongst scholars;  शिरः(śiraḥ) – like the head; राग(rāga) – delusion;(agha) –  sins of these; (ōgha) – cluster; (ha) – capable of destroying; पादुकद्वय(padukadvaya) – the two sandals; चरः (caraḥ) – moving around; पद्माक्षमालाधरः(padmākṣamālādharaḥ) – like one who wears a garland of padmākṣa gems; भास्वत्(bhāsvat) – resplendent; दंड(daṇḍa) – a staff with yagnōpavīta on it, that sages normally hold with them,  कमंडल(kamaṇḍala) – holding a (sacred) vessel; उज्वल(ujvala) – shining; करः(karaḥ) – having hands; रक्तांबराडंबरः   (raktāmbarāḍambaraḥ) – रक्त(rakta) – red, अंबर – vesture, आडंबरः आडंबरः – dignified countenance; while small timers who strive very little wear costly silken vesture and flaunt it around, truly great ascetics who had the power to grant any boon, as also rid anyone of curses, wore simple red – amber clothes and their wearing it, made it look dignified. श्रीमत् (śrīmat) – the learned; द्गुरु(sadguru) – best among gurus; राघवेंद्र यतिराट्(rāghavēndra yatirāṭ) – the best among saints; धृवं(dhruvaṁ) – eternal; मंगलम्(maṅgaḷam) – propitious; कुर्यात्(kuryāt) – may it be bestowed.

Tātparya:

In this ślōka, Appaṇṇacārya, the favourite disciple and devotee of Rāyaru, is fully captivated, as he describes Rāyaru's nature.

How did Rāyaru look, to his devotees? The metaphors used here to describe this in this ślōka, is exquisite indeed!

If we consider all great scholars, as a unified body, our Rāyaru would be its head wearing a priceless diamond studded crown! In other words, as important as the head is to the body, so was Rayaru to the group of scholars and he also stood out like a jewel studded crown of the group.

To wipe out the heap of our sins, the afflictions from attachments etc., it is not necessary that Rāyaru himself should do it for us, even his पादुक(pāduka /sandals) are fully capable of doing this. Just as it is said that the philosopher’s stone can convert even iron into gold, by its mere touch, even those inert sandals of his, by virtue of his penance based prowess, were endowed with the capability of wiping out our heap of sins, as brought out in this ślōka.

Wearing a garland of Padmākshi gems on his neck, holding a glowing daṇḍa - kamaṇḍala in his hands, draped in simple red coloured vesture, his presence was dazzling. Exemplifying his simple living was the saying, “The supreme saint wore just a simple red coloured garb.”  

May such Rāyaru, the supreme saint and master, bless us with eternal auspiciousness.


****

No comments:

Post a Comment

ಗೋ-ಕುಲ Go-Kula