ಸಾಲಂಕಾರಕ -ಕಾವ್ಯ -ನಾಟಕ-ಕಲಾ ಕಾಣಾದ-ಪಾತಂಜಲ |
ತ್ರೈಯ್ಯರ್ಥ-ಸ್ಮೃತಿ-ಜೈಮಿನೀಯಕವಿತಾ ಸಂಗೀತ ಪಾರಂಗತಃ |
ವಿಪ್ರ-ಕ್ಷತ್ರ -ವಿಡಂಘ್ರಿಜಾತ-ಮುಖರಾ ನೇಕಪ್ರಜಾ-ಸೇವಿತಃ |
ಶ್ರೀಮದ್-ಸದ್ಗುರು ರಾಘವೇಂದ್ರ -ಯತಿರಾಟ್ ಕುರ್ಯಾದ್-ಧ್ರುವಂ ಮಂಗಳಮ್ || ೩ ||
ಪದಚ್ಚೇದ :-
ಸ ಅಲಂಕಾರಕ ಕಾವ್ಯ
ನಾಟಕ ಕಲಾ ಕಾಣಾದ ಪಾತಂಜಲ, ತ್ರಯೀ ಅರ್ಥ, ಸ್ಮೃತಿ, ಜೈಮಿನೀಯ ಕವಿತಾ, ಸಂಗೀತ ಪಾರಂಗತ: | ವಿಪ್ರ, ಕ್ಷತ್ರ, ವಿಟ್, ಅಂಘ್ರಿ ಜಾತ ಮುಖರಾ: ಅನೇಕ ಪ್ರಜಾ ಸೇವಿತ:
ಅನ್ವಯಾರ್ಥ :-
ಸಾಲಂಕಾರಕ-ಕಾವ್ಯ - ಅಲಂಕಾರಶಾಸ್ತ್ರ ಸಹಿತವಾದ ಕಾವ್ಯ, (ಪರಿಮಳ, ಚಂದ್ರಿಕಾ ಮೊದಲಾದ ಶಾಸ್ತ್ರ ಕಾವ್ಯ ಪ್ರಕಾರಗಳು) ನಾಟಕ - ಭರತನೇ ಮೊದಲಾದವರ ನಾಟ್ಯ, ನಾಟಕಶಾಸ್ತ್ರ, ಕಲಾ- ಚಿತ್ರಕಲೆ, ಶಿಲ್ಪಕಲೆ ಮತ್ತಿತರ 64 ಕಲೆಗಳು, ಕಾಣಾದ- ಕಣಾದ
ಪರಂಪರೆಯ ನ್ಯಾಯ ಮತ್ತು ವೈಶೇಷಿಕಾದಿ ಶಾಸ್ತ್ರಗಳು, ಪಾತಂಜಲ- ಪತಂಜಲ
ಋಷಿಯ ಯೋಗಶಾಸ್ತ್ರ, ತ್ರಯ್ಯರ್ಥ - ಶ್ರುತಿ (ಶೀಕ್ಷ, ವ್ಯಾಕರಣ, ನಿರುಕ್ತ, ಛಂಧಸ್ಸು, ಜೌತಿಷ, ಕಲ್ಪ ಎಂಬ 6 ಅಂಗಸಹಿತ) ವೇದ ವೇದಾಂತಗಳು ಸ್ಮೃತಿ- ಇತಿಹಾಸ
ಪುರಾಣಗಳು, ಯಾಜ್ಞವಲ್ಕ್ಯ, ಪರಾಶರ ಸ್ಮೃತಿ ಮೊದಲಾದವುಗಳು, ಜೈಮಿನೀಯ- ಪೂರ್ವ
ಮೀಮಾಂಸ ಮತ್ತಿತರ ಮೀಮಾಂಸಾ ಶಾಸ್ತ್ರಗಳು, ಕವಿತಾ- ಸಂಸ್ಕೃತ
ಹಾಡುಗಬ್ಬಗಳು, ಕನ್ನಡ ಭಕ್ತಿಗೀತೆಗಳು ( ವ್ಯಾಸ-ದಾಸ
ಸಾಹಿತ್ಯ) ಸಂಗೀತ- ನರಹರಿತೀರ್ಥರಿಂದ ಹಿಡಿದು ವಾದಿರಾಜರವರೆಗಿನ ಸಂಗೀತ, ಗಾಯನ, ವಿವಿಧ ಸಂಗೀತ ಸಾಧನಗಳ ವಾದನ. ಇವುಗಳಲ್ಲಿ, ಪಾರಂಗತ: ಉತ್ತಮ
ಪಾಂಡಿತ್ಯ ಉಳ್ಳ,
ವಿಪ್ರ, ಕ್ಷತ್ರ, ವಿಟ್, ಅಂಘ್ರಿಜಾತ (ವಿಡಂಘ್ರಿಜಾತ) - ವಿಪ್ರ- ಬ್ರಾಹ್ಮಣರು, ಕ್ಷತ್ರ- ಕ್ಷತ್ರಿಯರು, ವಿಟ್- ವೈಶ್ಯರು, ಅಂಘ್ರಿಜಾತ- ಭಗವಂತನ
ಪಾದದಿಂದ ಹುಟ್ಟಿದ ಶೂದ್ರರು, ಮುಖರಾ:- ಮೊದಲಾದ, ಅನೇಕ- ಬಹಳ, ಪ್ರಜಾಸೇವಿತ:- ಜನರುಗಳಿಂದ (ಬಡವ-ಬಲ್ಲಿದ, ಮೇಲು-ಕೀಳು ಎನ್ನದೆ ಸಮಾಜದ ಎಲ್ಲಾ ವರ್ಗದ ಜನರಿಂದ) ಸೇವಿಸಲ್ಪಟ್ಟ,
ಶ್ರೀಮತ್ - ಜ್ಞಾನಿಗಳಾದ, ಸದ್ಗುರು- ಉತ್ತಮಗುರುಗಳಾದ, ರಾಘವೇಂದ್ರ ಯತಿರಾಟ್ - ಯತಿಶ್ರೇಷ್ಠರಾದ
ರಾಘವೇಂದ್ರರು, ಧೃವಂ- ಶಾಶ್ವತವಾದ, ಮಂಗಳಂ - ಔನ್ನತ್ಯವನ್ನು ( ಭಾಗ್ಯವನ್ನು ) ಕುರ್ಯಾತ್ - ಮಾಡಲಿ (ಉಂಟುಮಾಡಲಿ)
ತಾತ್ಪರ್ಯ:
ಮೂರನೆಯ ಶ್ಲೋಕದಲ್ಲಿ ರಾಯರ ಜ್ಞಾನದ ಆಳ ಹರಹುಗಳ ಕಿಂಚಿತ್ ಪರಿಚಯ
ಮಾಡಿಸುತ್ತ, ಸಮಾಜದಲ್ಲಿ
ಜನರಿಗೆ ರಾಯರ ಮೇಲಿದ್ದ ಗೌರವಾದರಗಳ ಬಗ್ಗೆ ಹೇಳಿದ್ದಾರೆ.
ಸಾಮಾನ್ಯವಾಗಿ ಜನರು ಯೋಚಿಸುವುದು ಸನ್ಯಾಸಿಯೆಂದರೆ ಯಾವಾಗಲೂ ಜಪ
ತಪಗಳಲ್ಲಿ ಇರುವವರು, ಹೆಚ್ಚೆಂದರೆ ಪಾಠ ಪ್ರವಚನ
ಮಾಡುವವರು, ಲಲಿತ ಕಲೆಗಳು, ಸಂಗೀತ, ಕಾವ್ಯ ನಾಟಕಗಳಿಗೂ ಅವರಿಗೂ
ಸಂಬಂಧವೇ ಇಲ್ಲ ಎಂದು. ಆದರೆ, ನಮ್ಮ ಪ್ರಾಚೀನ ಯತಿ ಪರಂಪರೆಯ ರೀತಿಯೇ ಬೇರೆ. ಎಲ್ಲವನ್ನೂ ತಿಳಿಯದವನು
ಏನೊಂದನ್ನೂ ತಿಳಿಯಲಾರ ಎಂಬ ತತ್ವ ಅವರದು. ಅದಕ್ಕಾಗಿಯೇ ಅಂದಿನ ಗುರುಗಳು ತಮ್ಮ ಶಿಷ್ಯರನ್ನು
ಅನೇಕಪ್ರಕಾರದ ವಿದ್ಯೆಗಳಲ್ಲಿ ತಳಸ್ಪರ್ಷಿಯಾದ ಜ್ಞಾನಾರ್ಜನೆಗೆ ತೊಡಗಿಸುತ್ತಿದ್ದರು. ಅಂತೆಯೇ
ರಾಯರು ಕೂಡಾ ಇದಕ್ಕೆ ಹೊರತಾಗಿರಲಿಲ್ಲ.
ಅವರ ಅಧ್ಯಯನವಂತೂ ಅಪರಂಪಾರ. ಅಲಂಕಾರ ಶಾಸ್ತ್ರಸಹಿತವಾದ ಕಾವ್ಯ, ವಿವಿಧ ನಾಟಕಗಳ ಪ್ರಭೇದಗಳು, ಚಿತ್ರಕಲೆ, ಶಿಲ್ಪಕಲೆ ಮುಂತಾದ ಅನೇಕ ಕಲಾ ಪ್ರಭೇದಗಳು, ಕಣಾದರ ನ್ಯಾಯ ವೈಶೇಷಿಕಗಳು, ಪತಂಜಲಿಯ
ಯೋಗಶಾಸ್ತ್ರ,
ವೇದಗಳು, ಇತಿಹಾಸ ಪುರಾಣಗಳು, ಜೈಮಿನಿಯ ಮೀಮಾಂಸಾ ಶಾಸ್ತ್ರಗಳು, (ಉತ್ತರ ಮತ್ತು ಪೂರ್ವ ಮೀಮಾಂಸಾ) ಸಂಗೀತಶಾಸ್ತ್ರದ ವಿವಿಧ ಗಾಯನ, ವಾದನ ಪ್ರಭೇದಗಳು, ಹೀಗೆ ಆಡು
ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯಂತೆ ರಾಯರಿಗೆ ತಿಳಿಯದ ವಿದ್ಯೆಯೇ ಇರಲಿಲ್ಲ ಎನ್ನುವಹಾಗೆ
ಎಲ್ಲಾವಿದ್ಯೆಗಳಲ್ಲೂ ಪಾರಂಗತರಾಗಿದ್ದರು. ಇಥ: ಮಹಾಮಹಿಮರಾದ ರಾಯರಿಗೆ ಸಹಜವಾಗಿಯೇ, ಜಾತಿ ಮತ ಧರ್ಮಗಳ ಹಂಗಿಲ್ಲದೆ
ಸಮಾಜದ ಎಲ್ಲವರ್ಗಗಳ ಜನರು ಕೂಡ ಅವರ ಬಳಿಸಾರಿ, ಮನದುಂಬಿ
ಸೇವೆಮಾಡಿ ಕೃತಾರ್ಥರಾಗುತ್ತಿದ್ದರು ಮತ್ತು ಆಗುತ್ತಿದ್ದಾರೆ. ಇಂಥಾ ಯತಿಶ್ರೇಷ್ಟರಾದ ರಾಘವೇಂದ್ರ
ಗುರುಗಳು ನಮಗೆ ಶಾಶ್ವತವಾದ ಮಂಗಳವನ್ನು ಉಂಟುಮಾಡಲಿ.
****
Ślōka 03:
सालंकारक काव्य नाटक कला काणाद पातंजल
त्रय्यर्थ स्मृति जैमिनीयकविता संगीत पारंगतः ।
विप्रक्षत्रविडंघ्रिजातमुखरानेकप्रजासेवितः
श्रीमत्सद्गुरुराघवेंद्रयतिराट् कुर्याद्ध्रुवं मंगलम् ॥ ३॥
त्रय्यर्थ स्मृति जैमिनीयकविता संगीत पारंगतः ।
विप्रक्षत्रविडंघ्रिजातमुखरानेकप्रजासेवितः
श्रीमत्सद्गुरुराघवेंद्रयतिराट् कुर्याद्ध्रुवं मंगलम् ॥ ३॥
sālaṅkāraka -kāvya -nāṭaka-kalā
kāṇāda-pātan̄jala |
traiyyartha-smr̥ti-jaiminīyakavitā saṅgīta pāraṅgataḥ |
vipra-kṣatra -viḍaṅghrijāta-mukharā nēkaprajā-sēvitaḥ |
śrīmad-sadguru rāghavēndra -yatirāṭ kuryād-dhruvaṁ maṅgaḷam || 3 ||
traiyyartha-smr̥ti-jaiminīyakavitā saṅgīta pāraṅgataḥ |
vipra-kṣatra -viḍaṅghrijāta-mukharā nēkaprajā-sēvitaḥ |
śrīmad-sadguru rāghavēndra -yatirāṭ kuryād-dhruvaṁ maṅgaḷam || 3 ||
Padacchēda:
स अलंकारक काव्य नाटक कला काणाद पातंजल
त्रयी अर्थ . स्मृति . जैमिनीय कविता . संगीत पारंगतः .
विप्र . क्षत्र . विट् . अंघ्रि . जात . मुखराः अनेक प्रजा सेवितः
त्रयी अर्थ . स्मृति . जैमिनीय कविता . संगीत पारंगतः .
विप्र . क्षत्र . विट् . अंघ्रि . जात . मुखराः अनेक प्रजा सेवितः
sa alaṅkāraka . kāvya . nāṭaka . kalā . kāṇāda . pātan̄jala .
trayī . artha . smr̥ti . jaiminīya . kavitā . saṅgīta . pāraṅgataḥ .
vipra . kṣatra . vit . aṅghri . jāta . mukharāḥ . anēkaprajā sēvitaḥ .
Word Meanings: -
सालंकारक-काव्य(sālaṅkāraka-kāvya) – poetry based on the alaṅkāra technique; नाटक(nāṭaka) – nāṭya(dance-drama),
founded by Bharata; कला(kalā) – visual arts, sculpture and all the other skill sets of
the 64 proficiencies; काणाद(kāṇāda) – nyāya (logic, methodology, treatises on epistemology) and vyśeśika(perception and inference as the
main paths to knowledge) schools of thinking, in the kāṇāda tradition, which
are regarded as amongst the six orthodox schools of philosophy of Sanatana
Dharma; पातंजल(pātan̄jala) – yoga śāśtra of Patanjali rṣi; त्रैय्यार्थ(traiyyārtha) – śr̥ti{the six branches of śikṣa(the
science of proper articulation or pronunciation), vyākarṇa(grammar),
nirukta(the
unstated or unapparent or difficult meaning of words/ terms), candas(poetic
meter), jyotiṣa (astrology) and kalpa (that which prescribes the ritual and
gives rules for ceremonial or ‘yagna’ i.e. sacrificial acts)}, vēda, vēdāntas; स्मृति(smr̥ti) – itihāsas(histories) and purāṇas(mythologies) and Parāśara /
Yāgnyavalkya smr̥tis; जैमिनीय(jaiminīya) – pūrva mimāmsa and other similar mimāmsa branches of philosophy; कविता(kavitā) – sanskrit songs and couplets, Kannada devotional
songs(vyāsa
– dāsa sahitya or literature) संगीत(saṅgīta) – music, with compositions ranging from Narahari tīrtha
to Vādirāja
tīrtha’s works, singing, playing of various musical instruments and in
these - पारंगतः(pāraṅgataḥ) – supreme scholarship; विप्र क्षत्र विट् अंघ्रिजात[vipra kṣatra vit aṅghrijāta (विडंघ्रिजात/ viḍaṅghrijāta)] –
Vipra – Brahmins, kṣatra - kṣatriyas, vit – vyśyas, aṅghrijāta – those born
from the feet of Bhagavan namely śūdrās, मुखराः(mukharāḥ) – the first amongst such; अनेक(anēka) – many; प्रजासेवितः(prajā sēvitaḥ) – served by one and all(irrespective of economic or
social status or caste or sect); श्रीमत् (śrīmat) – the learned; सद्गुरु(sadguru) – best among
gurus; राघवेंद्र यतिराट्(rāghavēndra yatirāṭ) – the best among saints; धृवं(dhruvaṁ) – eternal; मंगलम्(maṅgaḷam) – propitious; कुर्यात्(kuryāt) – may it be bestowed.
Tātparya
:-
In the third ślōka, Rāyaru’s
prowess on the knowledge dimension of his persona has been subtly dealt with.
Also the regard and respect he received from all sections of society is
pictured here.
When
we commonly think of ascetics, we picturise those who are engaged in penance, meditation,
lecturing, teaching etc but not involved in dance, dramatic arts, arts in
general, music, poetry etc. Our ancient ascetic traditions however mark a
departure from such stereotyping by us. He who does not understand everything,
understands nothing was their tenet. It is thus that the ancient masters laid
stress on all round knowledge/ skill set development, at an in-depth level.
Rāyaru was not an outsider to such thinking or training/ practice.
His
depth of knowledge/ contemplation in this matter was unparalleled. He excelled
in poetry based on alaṅkāra śāśtra,
various forms of dance/ drama, fine art, sculpture etc., amongst various art
forms; Kāṇāda’s nyāya and vyśeśika systems of philosophy, Patanjali’s yōga śāśtra, Vedas,
histories and mythologies, Jaimini’s mimāmsa śāśtra (uttara and pūrva mimāmsa),
various forms of classical music singing, instrumental music; in a way, as per
the saying that there is ‘no leaf that is untouched by a goat,’ no branch of
knowledge or skill set, was unfamiliar to Rāyaru, and he was adept at every
such facet or form of knowledge / skillsets. It came naturally to the venerable
Rāyaru, to mingle freely with all sections of the society, no matter what
caste, creed, religion or social status that people belonged to; all of them
served him with unmindful and sincere devotion, benefitted from it and even to
this day, we continue to see similar devotion across the spectrum of the
society - the benefits continue to accrue to one and all.
May
such Rāyaru, the supreme saint and master, bless us with eternal
auspiciousness.
No comments:
Post a Comment
ಗೋ-ಕುಲ Go-Kula