Friday 5 February 2016

Śri Rāghavēndra Maṅgalāṣṭaka Ślōka 02

ಶ್ಲೋಕ ೦೨:

ಕರ್ಮನ್ದೀಂದ್ರ-ಸುಧೀಂದ್ರ-ಸದ್ಗುರು-ಕರಾಂಭೋಜೋದ್ಭವ: ಸಂತತಮ್ |
ಪ್ರಾಜ್ಯಧ್ಯಾನ-ವಶೀಕೃತಾಖಿಲ-ಜಗದ್-ವಾಸ್ತವ್ಯ ಲಕ್ಷ್ಮೀಧವ: |
ಸಚ್ಚಾಸ್ತ್ರಾತಿ-ವಿದೂಶಕಾಖಿಲ-ಮೃಷಾ-ವಾದೀಭಕನ್ಥೀರವ: |
ಶ್ರೀಮದ್-ಸದ್ಗುರು ರಾಘವೇಂದ್ರ -ಯತಿರಾಟ್ ಕುರ್ಯಾದ್-ಧ್ರುವಂ ಮಂಗಳಮ್ || ೨ ||      

ಪದಚ್ಚೇದ :-

ಕರ್ಮಂದಿ ಇಂದ್ರ ಸುಧೀಂದ್ರ ಸದ್ಗುರು ಕರ ಅಂಭೋಜ ಉದ್ಭವ: . ಸಂತತಮ್, ಪ್ರಾಜ್ಯಧ್ಯಾನ ವಶೀಕೃತ ಅಖಿಲ ಜಗತ್ ವಾಸ್ತವ್ಯ ಲಕ್ಷ್ಮೀ ಧವ: |ಸಚ್ಚಾಸ್ತ್ರ ಅತಿ ವಿದೂಶಕ ಅಖಿಲ ಮೃಷಾ ವಾದಿ ಇಭ ಕಂಠೀರವ:| ಶ್ರೀಮತ್, ಸತ್ ಗುರು ರಾಘವೇಂದ್ರ ಯತಿರಾಟ್, ಕುರ್ಯಾತ್, ಧೃವಮ್, ಮಂಗಳಮ್.

ಅನ್ವಯಾರ್ಥ :-

ಕರ್ಮಂದಿ- ಸಜ್ಜನರ, ಇಂದ್ರ- ಮುಖ್ಯಸ್ಥರಾದ, ಸುಧೀಂದ್ರ- ಸುಧೀಂದ್ರತೀರ್ಥರ, ಕರ ಅಂಭೋಜ - ಕರಕಮಲ, ಉದ್ಭವ: - ಸಂಜಾತರಾದ, ಸಂತತಂ- ನಿತ್ಯವೂ, ಪ್ರಾಜ್ಯಧ್ಯಾನ - ದೃಢವಾದ ತಪಸ್ಸಿನಿಂದ, ವಶೀಕೃತ - ವಶೀಕರಿಸಿಕೊಂಡ, ಜಗದ್-ವಾಸ್ತವ್ಯ - ಬ್ರಹ್ಮಾಂಡವನ್ನೇ  ಮನೆಯಾಗಿಸಿಕೊಂಡ  ಲಕ್ಷ್ಮೀಧವ: - ಲಕ್ಷ್ಮೀಪತಿಯನ್ನು ಉಳ್ಳಂತ: (ಜಗತ್ತಿನ ಚರಾಚರಗಳ ಅಂತರ್ಯಾಮಿಯಾದ ಲಕ್ಷ್ಮೀಪತಿಯನ್ನು ತಪಸ್ಸಿನಿಂದ ತನ್ನವನನ್ನಾಗಿಸಿಕೊಂಡ), ಸಚ್ಚಾಸ್ತ್ರ - ಆಚಾರ್ಯಮಧ್ವರ ಉತ್ತಮ ಶಾಸ್ತ್ರಗಳನ್ನು, ಅತಿವಿದೂಶಕ- ಪ್ರಬಲವಾಗಿ ವಿರೋಧಿಸುವ, ಅಖಿಲ- ಎಲ್ಲವೂ ಮೃಷಾ- ಸುಳ್ಳು ಎಂದು, ವಾದಿ- ಪ್ರಚಾರಮಾಡುವಇಭ- ಆನೆಗೆ    (ಜಗನ್ಮಿಥ್ಯಾವಾದಿಗಳೆಂಬ ಆನೆಗೆ) ಕನ್ಥೀರವ: ಸಿಂಹದಂತಿರುವ,
 ಶ್ರೀಮತ್ - ಜ್ಞಾನಿಗಳಾದ, ಸದ್ಗುರು- ಉತ್ತಮಗುರುಗಳಾದ, ರಾಘವೇಂದ್ರ ಯತಿರಾಟ್ - ಯತಿಶ್ರೇಷ್ಠರಾದ ರಾಘವೇಂದ್ರರು, ಧೃವಂ- ಶಾಶ್ವತವಾದ, ಮಂಗಳಂ - ಔನ್ನತ್ಯವನ್ನು ( ಭಾಗ್ಯವನ್ನು ) ಕುರ್ಯಾತ್ - ಮಾಡಲಿ (ಉಂಟುಮಾಡಲಿ) .



ತಾತ್ಪರ್ಯ:

ಈ ಶ್ಲೋಕದಲ್ಲಿ ರಾಯರ ಗುರುಗಳು, ರಾಯರ ಸಾಧನೆ ಮತ್ತು ಅವರ ವಾದ ಪ್ರೌಢಿಮೆಗಳಬಗ್ಗೆ ಹೇಳಲಾಗಿದೆ. 64 ವಿದ್ಯೆಗಳನ್ನು ಕಲಿತು ಕರತಲಾಮಲಕ ಮಾಡಿಕೊಂಡ ವಿಜಯೀಂದ್ರ ತೀರ್ಥರ ಪ್ರಿಯಶಿಷ್ಯ, ಆ ಕಾಲದಲ್ಲೇ ದೊಡ್ಡ ಜ್ಞಾನಿಗಳೂ, ವಿದ್ವಜ್ಜನರ ನಾಯಕರೂ ಆದ ಶ್ರೀ ಸುಧೀಂದ್ರ ತೀರ್ಥರ ಕರಕಮಲ ಸಂಜಾತರಾದ, (ವಿಜಯೀಂದ್ರ ಕರಾಬ್ಜೋತ್ಥ ಸುಧೀಂದ್ರ ವರಪುತ್ರಕ:)  ಸತತ ಜ್ಞಾನದಾನ, ತಪಸ್ಸುಗಳಿಂದ ಸರ್ವಾಂತರ್ಯಾಮಿಯಾದ ಭಗವಂತನನ್ನು ವಶಪಡಿಸಿಕೊಂಡ, ಆಚಾರ್ಯ ಮಧ್ವರ ಭಗವತ್ಪಾರಮ್ಯ ಸಾರುವ, ಉತ್ತಮ ಶಾಸ್ತ್ರಗಳನ್ನು ದೂಶಿಸುವ, ಖಂಡಿಸುವ ಜಗನ್ಮಿಥ್ಯಾವಾದಿಗಳೆಂಬ ಆನೆಗಳಿಗೆ ಪರಿಮಳ, ಚಂದ್ರಿಕಾದಿ ಅನೇಕ ಶಾಸ್ತ್ರಗ್ರಂಥಗಳ ಘರ್ಜನೆಯಿಂದ ಸಿಂಹಸದೃಶರಾದ (ರಾಯರು ಹೇಗೆ ಸಜ್ಜನರಪಾಲಿಗೆ ಕೇಳಿದ್ದನ್ನು ಕೊಡುವ ಕಲ್ಪವೃಕ್ಷದಂತಿದ್ದರೋ ಹಾಗೆಯೇ, ಸತ್ಯ ಸಂಕಲ್ಪನಾದ ಭಗವಂತನ ಸೃಷ್ಟಿಯನ್ನೇ ನಿರಾಕರಿಸುವ ಜಗನ್ಮಿಥ್ಯಾವಾದಿಗಳ ಪಾಲಿಗೆ ಸಿಂಹಸದೃಷರಾಗಿದ್ದರು). ಶ್ರೀ   ರಾಘವೇಂದ್ರ ತೀರ್ಥರೆಂಬ ಉತ್ತಮ ಗುರುಗಳು ಶಾಶ್ವತವಾದ ಮಂಗಳವನ್ನು ಉಂಟು   ಮಾಡಲಿ.
****

Ślōka 02:

कर्मंदींद्रसुधींद्रसद्गुरुकरांभोजोद्भ संततम्
प्राज्यध्यानवशीकृताखिलजगद्वास्तव्यलक्ष्मीधवः
सच्छास्त्रातिविदूषकाखिलमृषावादीभकंठीरवः
श्रीमत्सद्गुरुराघवेंद्रयतिराट् कुर्याद्ध्रुवं मंगलम् २॥

Karmandīndra-sudhīndra-sadguru-karāmbhōjōdbhavah Santatam |
prājyadhyāna-vaśīkr̥tākhila-jagad-vāstavya lakṣmīdhavah |
Saccāstrāti-vidūśakākhila-mr̥ṣā-vādībhakanthīravah |
Śrīmad-sadguru rāghavēndra -yatirāṭ kuryād-dhruvaṁ maṅgaḷam || 2 ||

Padaccheda :-

कर्मंदि इंद्र सुधींद्र सद्गुरु करांभोजद्भवः . संततम् .
प्राज्यध्यान वशीकृतखिल जगत् वास्तव्य लक्ष्मी धवः
त् शास्त्र अति विदूषकखिल मृषा वादि इ कंठीरवः.
श्रीमत् सत गुरु राघवेंद्र यतिराट्. कुर्यात् धृवं मंगलम् २॥

karmandi indra sudhīndra sadguru kara ambhōja udbhavah . santatam .
prājyadhyāna . vaśīkr̥ta . akhila . jagat . vāstavya . lakṣmī dhava: .
sat śāstra ati . vidūśaka akhila mr̥ṣā vādi ibha kanthīrava: .
śrīmat . sat guru rāghavēndra yatirāṭ . kuryāt . dhruvaṁ . maṅgaḷam ,

Word Meanings:

कर्मंदि(karmandi)- good people; इंद्र(indra) – chief amongst; सुधींद्र(Sudhīndra) –of Sudhīndra tīrtha; कर अंभोज(kara ambhōja) – lotus hands;द्भवः(udbhavah) – born; संततम्(santatam) – eternally;  प्राज्यध्यान(prājyadhyāna) – from determined penance; वशीकृत(vaśīkr̥ta) – endeared; जगद्-वास्तव्य(jagad-vāstavya) लक्ष्मीधवः (lakṣmī dhavah) – like the holder of the spouse of lakṣmī(from penance, endearing lakṣmīpati, the universal indweller of all animate/ inanimate beings); त् शास्त्र(sat śāstra) – the supreme scriptures of Acārya Madhva; अतिविदूषक(atividūśaka) – forcefully opposed;खिल(akhila) – everything; मृषा(mr̥ṣā) – false; वादि(vādi) - propaganda(ibha)- elephant; कंठीरवः(kanthīravah) – lion like; श्रीमत्(śrīmat) – the learned; द्गुरु(sadguru) – best among gurus; राघवेंद्र यतिराट्(rāghavēndra yatirāṭ) – the best among saints; धृवं(dhruvaṁ) – eternal; मंगलम्(maṅgaḷam) – propitious; कुर्यात्(kuryāt) – may it be bestowed.

Tātparya :-


This ślōka covers the guru(master/ teacher) of Rāyaru, Rāyaru’s striving and his mastery in debate/ discussions. Rāyaru had completely mastered all the sixty four proficiencies; the favourite pupil of Vijayēndra Tīrtha. He was shaped by the lotus like hands of the eminently learned one who was reknowned in that period itself as a scholarly leader namely Śri Sudhīndra tīrtha (विजयीन्द्र कराब्ज्योत सुधीन्द्र वर पुत्रकः – Vijayīndra karābjyota Sudhīndra varaputrakah). Rāyaru was able to put up a lion like countenance to the opponents who stood like rogue elephants spreading false tenets that the world was unreal/ illusory and opposed the supreme scriptural works of Ācārya Madhva  which had established firmly, through continuous dissemination of knowledge and penances, the supremacy of Bhagavan. This he did through his treatises viz., Parimalׅā, Chandrik ā etc., (Rayaru was at once the benevolent one who granted everything that was wished for to good people while being lion like to those deluded opposers of truth, who believed in falsehood; who spread the tenet that the world was false/ illusory). May the best among Gurus namely Śri Rāghavēndra tirtha bless us with eternal auspiciousness.

No comments:

Post a Comment

ಗೋ-ಕುಲ Go-Kula