ಮುನ್ನುಡೀ:
ಶ್ರೀ ರಾಘವೇಂದ್ರ ಮಂಗಳಾಷ್ಟಕದ ಅರ್ಥ ಚಿಂತನೆಗೆ ಮೊದಲು ನನ್ನ ಬಾಲ
ಬುದ್ಧಿಗೆ ತೋಚಿದ,
ಕೆಲವು ಶ್ಲೋಕಗಳನ್ನು ಹೆಣೆದಿದ್ದೇನೆ.
ಮೊದಲಿಗೆ ರಾಮದೇವರ ಸ್ತೋತ್ರ.
ರಾಜೀವಲೋಚನಂ ರಾಮಂ ಕೌಸಲ್ಯಾನಂದಿವರ್ಧನಮ್ |
ಸೇವ್ಯೇ ಸೀತಾಪತಿಂ ನಿತ್ಯಂ ರಾಘವಂ ಲಕ್ಷ್ಮಣಾಗ್ರಜಮ್ ||
ಕಮಲದಂತ: ಕಣ್ಣುಗಳುಳ್ಳ, ಕೌಸಲ್ಯೆಯ
ಆನಂದವನ್ನು ಹೆಚ್ಚಿಸಿದ, ಲಕ್ಷ್ಮಣನಿಗೆ ಮುನ್ನ ಜನಿಸಿದ,(ಅಣ್ಣನಾದ) ಸೀತೆಯ ಪತಿಯಾದ, ರಘುವಂಶದಲ್ಲಿ
ಅವತರಿಸಿದ, ರಾಮನನ್ನು ಯಾವಾಗಲೂ ಸೇವಿಸುತ್ತೇನೆ.
ಎರಡನೆಯದು ಪ್ರಾಣದೇವರ ಸ್ತೋತ್ರ.
ಪ್ರಣಮಾಮಿ ಪ್ರಾಣಂ ರಾಮಸ್ಯ ದೂತಂ
ಯಾಂತಂ ಮಹಾಂತಂ ಜನಕಾತ್ಮಜಾಯೈ |
ಉಲ್ಲಂಘ್ಯ ಸಿಂಧುಂ ಶತಯೋಜನಾನಾಂ
ನಿಪೀಡ್ಯ ಪಾದೇನ ನಗಸ್ಯ ಶೀರ್ಷಮ್||
ಸೀತೆಗೋಸ್ಕರ (ಹುಡುಕುವುದಕ್ಕೋಸ್ಕರ) ಪರ್ವತದ ಶಿಖರ ಕುಸಿಯುವಂತೆ
ತುಳಿದು, ನೂರಾರು ಯೋಜನ ದೂರದ ಸಮುದ್ರವನ್ನು ಹಾರಿಕೊಂಡು ಹೋಗುತ್ತಿರುವ, ರಾಮದೂತನಾದ, ಮಹಾತ್ಮನಾದ, ಪ್ರಾಣನನ್ನು (ಹನುಮಂತನನ್ನು) ಬಹಳವಾಗಿ ನಮಸ್ಕರಿಸುತ್ತೇನೆ.
ಮೂರನೆಯದರಲ್ಲಿ ರಾಯರ ಸ್ತೋತ್ರ.
ಶ್ರೀರಾಘವೇಂದ್ರಂ ಶ್ರಿತರಾಮಚಂದ್ರಂ
ಮುನೀಂದ್ರಮಧ್ವೌ ನುತ ಚಂದ್ರಿಕಾರ್ಯಮ್ |
ಭಕ್ತಾಶ್ರಯಂ ಭಕ್ತಜನಾನುಕೂಲಂ
ಯಾಚೇ ಮಹಾಂತಂ ಯತಿರಾಜರಾಜಮ್ ||
ರಾಮಚಂದ್ರನನ್ನೇ ಆಶ್ರಯಿಸಿರುವ, ಮುನಿಗಳಲ್ಲಿ
ಶ್ರೇಷ್ಟರಾದ ವ್ಯಾಸರು ಮತ್ತು ಆಚಾರ್ಯ ಮಧ್ವರು
ಇಬ್ಬರಿಗೂ ಮಣಿದ,
ಸಮಸ್ತ ಭಕ್ತರಿಗೆ ಆಶ್ರಯ ನೀಡಿರುವ, ಭಕ್ತರಿಗೆ ಎಲ್ಲ ರೀತಿಯ ಲೌಕಿಕ ಅಲೌಕಿಕ ಅನುಕೂಲಗಳನ್ನು ಮಾಡಿಕೊಡುವ, ಚಂದ್ರಿಕಾದಿ ವ್ಯಾಖ್ಯಾನಗಳನ್ನು ಮಾಡಿದ ಹಿರಿಯರಾದ, ಹಿರಿಯ ಯತಿಗಳಿಗೂ ನಾಯಕರಾದ, ಮಹಾತ್ಮರಾದ
ಶ್ರೀ ರಾಘವೇಂದ್ರರನ್ನು ಬೇಡುತ್ತೇನೆ.
ಇನ್ನೊಂದು ಎಂಟು ಹತ್ತು ದಿನಗಳಕಾಲ ಈ ಅರ್ಥಚಿಂತನೆಯೊಂದಿಗೆ
ಗುರುರಾಯರ ನೆನಪಿನಲ್ಲಿ ಸಮಯದ ಸದುಪಯೋಗ ಮಾಡಿಕೊಳ್ಳೋಣ ಎಂಬ ನಮ್ರ, ಹಾರ್ದ ಆಶಯಗಳೊಂದಿಗೆ.....
****
ಶ್ಲೋಕ ೦೧:
ಈ ಕೃತಿಯನ್ನು
ಪಠಿಸುವ ಎಲ್ಲರಿಗೂ ಮಂಗಳವಾಗಲಿ ಎಂಬ ಆಶಯದಿಂದ ಅಪ್ಪಣಾಚಾರ್ಯರು, ಶ್ರೀ ರಾಮನ ಪಾದಕಮಲಗಳ ಸ್ಮರಣೆಯೊಂದಿಗೆ ಈ ಕೃತಿಯನ್ನು
ರಚಿಸಿದ್ದಾರೆ.
ಶ್ರೀಮದ್- ರಾಮಪದಾರವಿಂದ-ಮಧುಪ: ಶ್ರೀಮಧ್ವ-ವಂಶಾಧಿಪ: |
ಸಚ್ಚಿಷ್ಯೋಡು-ಗಣೋಡುಪ: ಶ್ರಿತ-ಜಗದ್ಗೀರ್ವಾಣ -ಸತ್ಪಾದಪ: |
ಅತ್ಯರ್ಥಂ ಮನಸಾ-ಕೃತಾಚ್ಯುತ- ಜಪ: ಪಾಪಾಂಧ-ಕಾರಾ-ತಪ: |
ಶ್ರೀಮದ್-ಸದ್ಗುರು
ರಾಘವೇಂದ್ರ -ಯತಿರಾಟ್
ಕುರ್ಯಾದ್-ಧ್ರುವಂ
ಮಂಗಳಮ್ || ೧ ||
ಪದಚ್ಚೇದ:
ಶ್ರೀಮತ್, ರಾಮಪದಾರವಿನ್ದಮಧುಪ: , ಶ್ರೀಮಧ್ವವಂಶಾಧಿಪ: , ಸತ್- ಶಿಷ್ಯ- ಉಡುಗಣ ಉಡುಪ: ಶ್ರಿತ-ಜಗತ್, ಗೀರ್ವಾಣ-ಸತ್ಪಾದಪ: , ಅತ್ಯರ್ಥಂ, ಮನಸಾ, ಕೃತ ಅಚ್ಯುತ
ಜಪ:, ಪಾಪಾಂಧಕಾರ- ಆತಪ:,
ಶ್ರೀಮತ್, ಸತ್-ಗುರು-ರಾಘವೇಂದ್ರ
ಯತಿರಾಟ್, ಕುರ್ಯಾತ್, ಧ್ರುವಂ, ಮಂಗಳಮ್.
ಅನ್ವಯಾರ್ಥ:-
ಶ್ರೀಮತ್-ಜ್ಞಾನಮಯವಾದ, ರಾಮಪದಾರವಿಂದ - ರಾಮದೇವರ ಪಾದಕಮಲಗಳಲ್ಲಿ, ಮಧುಪ:-ದುಂಬಿಯಂತಿರುವ, (ಜ್ಞಾನಾನಂದಗಳೆಂಬ ಮಧುವನ್ನು ಹೀರುವ ದುಂಬಿ) ಶ್ರೀಮಧ್ವ
ವಂಶಾಧಿಪ: - ಶ್ರೀಮದಾಚಾರ್ಯರ
ಜ್ಞಾನಪರಂಪರೆಯ ಹಿರಿಯ ನಾಯಕರಾದ, ಸತ್- ನಿರ್ದುಷ್ಟರಾದ, ಶಿಷ್ಯ - ಶಿಷ್ಯರೆಂಬ, ಉಡುಗಣ - ನಕ್ಷತ್ರಸಮೂಹದ
ನಡುವೆ, ಉಡುಪ: ನಕ್ಷತ್ರಾಧಿಪತಿ ಚಂದ್ರನಂತಿರುವ, ಶ್ರಿತ - ಆಶ್ರಿತರಾದ, (ಸತ್) ಜಗತ್ -ಸಜ್ಜನಸಮೂಹಕ್ಕೆ, ಗೀರ್ವಾಣ - ದೇವಲೋಕದ, ಸತ್ ಪಾದಪ:- ನಿರ್ದುಷ್ಟವಾದ ಕಲ್ಪವೃಕ್ಷದಂತಿರುವ ( ಅಶ್ರಯಿಸಿಬಂದ ಸಜ್ಜನರಿಗೆ ಕಲ್ಪವೃಕ್ಷದಂತೆ ಕೇಳಿದ್ದನ್ನು ಕೊಡುವ) ಅತ್ಯರ್ಥಂ- ತಡೆಯಿಲ್ಲದಂತೆ, ಮನಸಾ- ಮನಸ್ಸಿನಿಂದ, ಕೃತ- ಮಾಡಲ್ಪಟ್ಟ, ಅಚ್ಯುತ ಜಪ: - ನಾಶರಹಿತನಾದ
ಭಗವಂತನ ಧ್ಯಾನ ಉಳ್ಳ, ಪಾಪ
ಅಂಧಕಾರ - ದೋಷವೆಂಬ
ಕತ್ತಲೆಗೆ, ಆತಪ: ಸೂರ್ಯನಂತಿರುವ, ಶ್ರೀಮತ್ - ಜ್ಞಾನಿಗಳಾದ, ಸದ್ಗುರು- ಉತ್ತಮಗುರುಗಳಾದ, ರಾಘವೇಂದ್ರ ಯತಿರಾಟ್ - ಯತಿಶ್ರೇಷ್ಠರಾದ
ರಾಘವೇಂದ್ರರು, ಧೃವಂ- ಶಾಶ್ವತವಾದ, ಮಂಗಳಂ - ಔನ್ನತ್ಯವನ್ನು ( ಭಾಗ್ಯವನ್ನು ) ಕುರ್ಯಾತ್ - ಮಾಡಲಿ (ಉಂಟುಮಾಡಲಿ)
ತಾತ್ಪರ್ಯ:
ಪ್ರಾಚೀನ ಪರಂಪರೆಯಂತೆ
ಮೊದಲ ಶ್ಲೋಕದಲ್ಲಿ ಮಂಗಳಾಶಂಸನವೆಂಬಂತೆ ಭಗವಂತನ ಪಾದಗಳ ಸ್ಮರಣೆ ಜೊತೆಗೆ ಗುರುಗಳ ಈ
ಸ್ತೋತ್ರವನ್ನು ಶುರುಮಾಡುತ್ತಾರೆ. ಮೊದಲ ಶ್ಲೋಕದಲ್ಲಿರಾಯರ ವ್ಯಕ್ತಿತ್ವದ ಕಿರುಪರಿಚಯ
ಮಾಡಿಸುತ್ತಾರೆ.
ಈ ಸ್ತೋತ್ರದ ಆಶಯವೆಂದರೆ, ಯತಿಶ್ರೇಷ್ಟರಾದ ರಾಯರು ನಮಗೆ ಶಾಶ್ವತವಾದ ಮಂಗಳವನ್ನು
ಉಂಟುಮಾಡಲಿ ಎಂದು ಪ್ರಾರ್ಥಿಸುವುದು. ಆ ರಾಯರು ಎಂಥವರು?
ಜ್ಞಾನಾನಂದಮಯನಾದ ಭಗವಂತನ
ಪಾದಕಮಲಗಳಲ್ಲಿ ಇದ್ದುಕೊಂಡು ಜ್ಞಾನಾನಂದಗಳೆಂಬ ಮಧುವನ್ನು ಹೀರುವ ದುಂಬಿಯಂಥವರು. (ರಾಯರು ರಾಮನ
ವಿಶೇಷವಾದ ಆರಾಧಕರಾದ್ದರಿಂದ ಇಲ್ಲಿ ರಾಮರೂಪಿಯಾದ ಭಗವಂತನ ಚಿಂತನೆ.)
ಶ್ರೀಮದಾಚಾರ್ಯರ ಜ್ಞಾನಪರಂಪರೆಗೆ ಹಿರಿಯ ನಾಯಕರು.
ಸದ್ಗುಣಿಗಳಾದ ಶಿಷ್ಯರೆಂಬ ನಕ್ಷತ್ರಗಳ ನಡುವೆ ಚಂದ್ರನಂತೆ ಹೊಳೆಯುತ್ತಿರುವವರು.
ಆಶ್ರಯಿಸಿಬಂದವರಿಗೆ ಕಲ್ಪವೃಕ್ಷದಂತೆ ಕೇಳಿದ್ದನ್ನು ಕೊಡುವವರು. ಯಾವಾಗಲೂ ನಾಶರಹಿತನಾದ ಭಗವಂತನ
ಚಿಂತನೆಯಲ್ಲೇ ಇರುವವರು. ಪಾಪಗಳರಾಶಿಯೆಂಬ ಕತ್ತಲೆಗೆ ಸೂರ್ಯನಂತಿರುವವರು. ಇಂಥಾ ರಾಯರು ನಮ್ಮ
ಪಾಪಗಳನ್ನು ತೊಳೆದು ಭಗವಂತನೆಡೆಗಿನ ದಾರಿಯಲ್ಲಿ ನಡೆಸಲಿ.
*****
Foreword:
I am
inspired by Rāyaru, to present to you, a few ślōkas that have been composed by
me within my limited spiritual capabilities. These are sincerely dedicated to
the Gurusārvabhouma.
To
start with, a stotra on Lord Rama –
राजीवलोचनं
रामं कौसल्यानंदिवर्धनम् |
सेव्ये
सीतापतिं नित्यं राघवं लक्ष्मणाग्रजम् ||
Rājīvalōcanaṁ rāmaṁ kausalyānandivardhanam
|
sēvyē sītāpatiṁ nityaṁ rāghavaṁ lakṣmaṇāgrajam ||
sēvyē sītāpatiṁ nityaṁ rāghavaṁ lakṣmaṇāgrajam ||
Endowed
with lotus like eyes, the one who amplified Kausalya’s happiness, the one who
preceded Lakśmaṇa in birth (as elder brother), the spouse of Sītā, took
incarnation in the lineage of Raghuvanshis, to such Rāmā, I dedicate my services, at all times.The next is a stōtra to Prāṇadēva
प्रणमामि
प्राणं रामस्य दूतम
यांतं
महांतं जानकात्मजायै |
उल्लङ्घ्य
सिन्धुं शतयोजनानाम्
निपीड्य पादेन नगस्य शीर्षम्||
praṇamāmi prāṇaṁ rāmasya dūtaṁ
yāntaṁ mahāntaṁ janakātmajāyai |
ullaṅghya sindhuṁ śatayōjanānāṁ
nipīḍya pādēna nagasya śīrṣam||
yāntaṁ mahāntaṁ janakātmajāyai |
ullaṅghya sindhuṁ śatayōjanānāṁ
nipīḍya pādēna nagasya śīrṣam||
He
who, searching for Sītā, stomped a mountain to flatness; who flew hundreds of
yojanas across a sea, as messenger of Rāma, a great soul, I bow down deep, in
obeisance to Prāṇa (Hanumanta).
The third is a stōtra on Rāyaru.
श्रीराघवेन्द्रं
श्रितरामचंद्रम्
मुनीन्द्रमध्व
नुत चंद्रिकार्यम् |
भक्ताश्रयं
भक्तजनानुकूलम्
याचे
महांतं यतिराजराजम् ||
śrīrāghavēndraṁ śritarāmacandraṁ
munīndra madhva nuta candrikāryam |
bhaktāśrayaṁ bhaktajanānukūlaṁ
yācē mahāntaṁ yatirājarājam ||
munīndra madhva nuta candrikāryam |
bhaktāśrayaṁ bhaktajanānukūlaṁ
yācē mahāntaṁ yatirājarājam ||
Śri Rāghavēndra who is sheltered
by none other than Rāmachandra, who bowed to both
Vyāsa,
the supreme amongst sages and Acharya
Madhva, I address this
supplication of mine, to that Śri
Rāghavēndra, venerable master saint, the noble soul, who
protects and provides
for all the worldly and spiritual needs of his devotees and is the composer of the Candrikā treatises.
With
all humility, I entreat you to join me over the next 8-9 days in this meaningful
contemplation of Rāyaru, which I fondly hope would be mutually beneficial, as
we proceed.
****
Ślōka - 01:
Wishing everyone who recites this
composition, auspiciousness, Appannacarya has dedicated this composition to the
lotus feet of śrī Rāmā.
श्रीमद् -रामपदारविंद -मधुपः -श्रीमध्व-वंशाधिपः
सच्छिष्योडु-गणोडुपः-श्रित-जगद्गीर्वाण-सत्पादपः ।
अत्यर्थं मनसा-कृताच्युत-जपः पापांध-कारा-तपः
श्रीमद् -सद्गुरु राघवेंद्र -यतिराट् कुर्याद् - धृवं मंगलम् ॥ १॥
सच्छिष्योडु-गणोडुपः-श्रित-जगद्गीर्वाण-सत्पादपः ।
अत्यर्थं मनसा-कृताच्युत-जपः पापांध-कारा-तपः
श्रीमद् -सद्गुरु राघवेंद्र -यतिराट् कुर्याद् - धृवं मंगलम् ॥ १॥
Śrīmad- rāmapadāravinda-madhupa:
Śrīmadhva-vanśādhipah |
Sacciṣyōḍu-gaṇōḍupa: Śrita-jagadgīrvāṇa -satpādapah |
Atyarthaṁ manasā-kr̥tācyuta- japa: Pāpāndha-kārā-tapah |
Śrīmad-sadguru rāghavēndra -yatirāṭ kuryād-dhruvaṁ maṅgaḷam || 1 ||
Sacciṣyōḍu-gaṇōḍupa: Śrita-jagadgīrvāṇa -satpādapah |
Atyarthaṁ manasā-kr̥tācyuta- japa: Pāpāndha-kārā-tapah |
Śrīmad-sadguru rāghavēndra -yatirāṭ kuryād-dhruvaṁ maṅgaḷam || 1 ||
Padacheda:
श्रीमत् . रामपदारविंदमधुपः . श्रीमध्ववंशाधिपः . सत् - शिष्य
– उडुगण उडुपः श्रित-जगत्. गीर्वाण-सत्पादपः.अत्यर्थं . मनसा. कृत अच्युत जपः.पापांधकार अतपः . श्रीमत्.सत्-सद्गुरु-राघवेंद्र . यतिराट् .
कुर्यात् . धृवं . मंगलम् .
śrīmat. rāmapadāravindamadhupah .
śrīmadhvavanśādhipah .
sat śiṣya - uḍugaṇa . uḍupah . śrita-jagat . gīrvāṇa – satpādapah .
atyarthaṁ . manasā . kr̥ta acyuta japah . pāpāndhakāra-atapah . śrīmat . sadguru - rāghavēndra . yatirāṭ . kuryāt . dhruvaṁ . maṅgaḷam .
sat śiṣya - uḍugaṇa . uḍupah . śrita-jagat . gīrvāṇa – satpādapah .
atyarthaṁ . manasā . kr̥ta acyuta japah . pāpāndhakāra-atapah . śrīmat . sadguru - rāghavēndra . yatirāṭ . kuryāt . dhruvaṁ . maṅgaḷam .
Word meanings:
श्रीमत्(śrīmat) – Knowledgeable; रामपदारविंद(rāmapadāravinda)
– at the lotus feet of Lord Rama; मधुपः(madhupah) – as a honey bee (a bee that suckles on the nectar of knowledge) .श्रीमध्ववंशाधिपः(śrīmadhvavanśādhipah) – venerable protector of the enlightened traditions of Shri Madhvacharya; सत्(sat)
– wholesome शिष्य(śiṣya)
–
known as a student; उडुगण(uḍugaṇa) – cluster of stars; उडुपः(uḍupah) – the king of stars namely moon; श्रित(śrita) – sheltered
under; सत् जगत्(sat jagat) – company of good people; गीर्वाण(gīrvāṇa) – abode of gods; पादपः(pādapah) – like a tree (as a kalpavṛkśa that
grants anything to good people who seek its shelter); अत्यर्थं(atyarthaṁ) – unrestricted; मनसा(manasā) – from the mind; कृत(kr̥ta) – performed; अच्युत जपः(acyuta japah) – meditating on Bhagavān, the indestructible One; पाप अंधकार(pāpa andhakāra) – the darkness of flaws; अतपः(atapah) – like the sun; श्रीमत्(śrīmat) – the learned; सद्गुरु(sadguru) – best among gurus; राघवेंद्र . यतिराट्(rāghavēndra yatirāṭ) – the best among saints; धृवं(dhruvaṁ) – eternal; मंगलम्(maṅgaḷam) – propitious; कुर्यात्(kuryāt) – may it be bestowed.
Tātparya:
In
line with established traditions, the first ślōka starts off as an invocatory verse of
this Guru stōtra,
dedicated to the feet of Bhagavān. There is brief introduction of Rāyaru’s
persona in this ślōka.
This stōtra is a prayer to the supreme saint, Shri Rāghavēndrā, to bless us with eternal
auspiciousness. What sort of a person is
Rāyaru? He is like the bee that suckles on the sweet nectar of knowledge from
the fountain of knowledge, at the lotus feet of Bhagavān. (Rāyaru was an ardent
devotee of Rāmā and hence here the form of Bhagavān
contemplated upon is that of Rāmā).
He is also a veteran leader of the knowledgeable
traditions of śrimadhacārya. He is among the shining stars of virtuous students
and stands out glowing like the moon. Like the kalpavrikśa, he grants
everything that anyone approaching him, desires for. He is always situated in
deep contemplation on the imperishable form of Bhagavān. To the mounds of sins
that loom as darkness, he shines like the sun. May such Rāyaru, wash away our
sins and help us move on the path to Bhagavān.
No comments:
Post a Comment
ಗೋ-ಕುಲ Go-Kula