Tuesday, 2 February 2016

Bhava Guccha 15

ಭಾವ ಗುಚ್ಛ by “ತ್ರಿವೇಣಿ ತನಯ”

ಗುರುವಂದನೆ

ಇಂದು ವೇದಪ್ರತಿಪಾದ್ಯ ಹಯಗ್ರೀವ ಜಯಂತಿ,
ಈ ದಿನವೇ ಕಂಪಿಸಿತು ಗೋವಿಂದನೆಂಬ ವೀಣೆ ತಂತಿ,
ಜ್ಞಾನದತಂತಿ ಮೀಟುತ ಕಳೆಯುತಿದೆ ಅಂಧಾಚರಣೆಯ ಭ್ರಾಂತಿ,
ದಶಕಕಗಳ ತಪಸ್ಸಿನಿಂದೆರುಯುತಿದೆ ಜ್ಞಾನ ಭಾಗೀರಥಿ.

ಬಿಡಿಬಿಡಿಸಿ ಹೇಳಿದೆ ಮಧ್ವಮತ-ವಿಶ್ವಮತ,
ಅರಿತು ಅನುಭವಿಸಿ ಆಚರಿಸಲದುವೇ ಸಮ್ಮತ,
ಪ್ರವಚನಾ ಸ್ಥಳಗಳಲಿ ಅಪರಿಮಿತ ಜನ ಜಾತ್ರೆ,
ತಿಳಿಯುವುದು ತುಂಬುವುದು ಅವರವರ ಯೋಗ್ಯತಾ ಪಾತ್ರೆ.

ಹರಿಪೂಜೆ ನಡೆಸಿರುವೆ ಪಾಠ ಪ್ರವಚನದಿಂದ,
ದಾರಿ ಹಿಡಿದ ಜೀವಗಳೆಷ್ಟೋ ನಿನ್ನ ಹಿತವಚನದಿಂದ,
ಬಿದ್ದವರನೆತ್ತಲು ಬಂದ ಕರುಣಾಳು ಅವಧೂತ,
ನಮಗಾಗೇ ನಿನ್ನ ಕಳಿಸಿರುವ ಸೃಷ್ಟಿಕರ್ತ ವಿಧಾತ.

ನೊಂದು ಶರಣುಬಂದವರಿಗೆ ದಾರಿತೋರುವ ನೀನೆಷ್ಟು ಉದಾರಿ,
ಧರ್ಮ -ದೇವರುಗಳ ಗುತ್ತಿಗೆ ಹೊತ್ತವರಿಗದು ಭಾರೀ ಉರಿ,
ಬಂದದುಣ್ಣುತ ಅಂಟಿಕೊಳ್ಳದ ಹರಿಸ್ಮರಣೆಯ ಬದುಕೆಷ್ಟು ಸರಳ,

ಬುದ್ಧಿ ಗಿರವಿಟ್ಟವರ ಮಂದಿ ಮಂದೆಯಲಿ ಸತ್ಯ ತಿಳಿದವರೇ ವಿರಳ.

(Contributed by Shri Govind Magal)

No comments:

Post a Comment

ಗೋ-ಕುಲ Go-Kula