ಭಾವ ಗುಚ್ಛ by “ತ್ರಿವೇಣಿ
ತನಯ “
ವಾಗ್ದೇವಿಗೆ ವಂದನೆ
ಪರ್ವತರಾಜ ಪುತ್ರಿ ಪಾರ್ವತಿ,
ಕೈಲಾಸಾಧಿಪತಿಯ ಪ್ರಿಯ ಸತಿ,
ಮನಸಿಗಭಿಮಾನಿ ನಿನ್ನ ಪತಿ,
ನಿನ್ನಧೀನ ಎಲ್ಲರ ಮಾತಿನ ಗತಿ.
ನಿನ್ನ ಪತಿಯಧೀನವದು ಮನಸು,
ನಿನ್ನಧೀನವಿರುವ ಒಳ್ಳೆಯ ಮಾತೇ ನುಡಿಸು,
ಅವಕಾಶವೀವವ ನಿನ್ನೊಬ್ಬ ಕೂಸು,
ಸಾಧನೆಗೈಸುವ ಸ್ಕಂದ ಮತ್ತೊಬ್ಬ ಕೂಸು,
ನನ್ನದೇನಿದೆ ಇಲ್ಲಿ ಪೂರಾ ನಿನ್ನದೇ ಸಂಸಾರ,
ವಿಷ್ಣುಪಥಕ್ಕೊಯ್ಯುವ ನಿಜ ಪರಿವಾರ.
ಶಿವ - ಪಾರ್ವತಿ ದಾಂಪತ್ಯ
ಶಿವ ಪಾರ್ವತಿ ನಿಮ್ಮದು ಆದರ್ಶ ದಾಂಪತ್ಯ,
ಮದುಮಗಳಿಂದ ಅದಕೆಂದೇ ಮೊದಲ ಪೂಜಾತಿಥ್ಯ,
ಮನ:ಮಾತುಗಳ ಅಪೂರ್ವ ಸಮಾಗಮ,
ಹರಸುತಿರಿ ನಿಮ್ಮಿರುವಿನ ಅರಿವಿತ್ತೆಮಗದೇ ಸಂಭ್ರಮ.
ನಮಿಸುವೆವು ವರವೀವೆಮಗೆ ವಾಗ್ದೇವಿ ,
ನುಡಿಸುವ ಮಾತೆಲ್ಲಾ ಮಾಡು ಸವಿ ,
ಮಾತಲ್ಲವೇ ಎಲ್ಲದಕೂ ಮೂಲ ,
ತಿಳಿವೆರೆಯುತ್ತಾ ಹರಸು ಅನುಗಾಲ .
ಗೌರಮ್ಮಾ ಪರಮ ಮಂಗಳ ಗೌರಮ್ಮಾ,
ಮಂಗಳ ಶಿವನ ಪಡೆದ ಸ್ವರ್ಣಗೌರಮ್ಮಾ,
ನಿನ್ನ ಪತಿಗೆ ಹೇಳಿ ಮನ ತೊಳಿಸಮ್ಮಾ,
ನಿನ್ನ ಮಗಗೆ ಹೇಳಿ ಸದವಕಾಶ ಕೊಡಿಸಮ್ಮಾ.
(Contributed by Shri Govind Magal)
No comments:
Post a Comment
ಗೋ-ಕುಲ Go-Kula