Sunday 7 February 2016

Bhava Guccha 19

ಭಾವ ಗುಚ್ಛ by "ತ್ರಿವೇಣಿ ತನಯ"


ಸಾಧನೆ

ಸಾಧನ ಸಾಧನವೆನುತ ಬದುಕ ಮಾಡಿಕೊಳ್ಳದಿರು ಅದ್ವಾನ,
ಎಲ್ಲವನೂ ಮಾಡಿ ಮಾಡಿಸುತಿಹ ಅವನೇ ಜನಾರ್ದನ,
ಇದನಂಬಿ ನಡೆವುದೆಲ್ಲವ ಹರಿಪೂಜೆಯಂದರ್ಪಿಸು,
ತಾಳ್ಮೆಯಲಿ ಪಾಳಿ ಕಾಯುತ ಜೀವನಯಜ್ಞದಲಿ ಸುಖಿಸು.

ನಿರ್ಲಿಪ್ತತೆ

ಹೊಗಳಿಕೆಗೆ ಹಿಗ್ಗದಿರು,
ತೆಗಳಿಕೆಗೆ ಕುಗ್ಗದಿರು,
ಕಷ್ಟಗಳಿಗೆ ನೆಗ್ಗದಿರು,
ಇಷ್ಟದೈವಕೆ ತಗ್ಗಿ ಬಗ್ಗಿರು.

ಅಧ್ಯಾತ್ಮ ನಷ್ಟ

ಅಧ್ಯಾತ್ಮ ಬಳಗದಲಿ ಕಲಹವಿಲ್ಲದಿಲ್ಲ,
ಕಲಹವಾಗಿ ಕಂಡರೂ ಕೊಡುವುದು ಕೆನೆಬೆಲ್ಲ,
ಸ್ಪಂದಿಸುವ ಜೀವಿಗಳ ಆಗಲಿ ಇರುವುದು ಕಷ್ಟ,
ಅಗಲಿಸದಿರು ಸಜ್ಜನರ ಸಹಿಸಲಾರೆ ಅಧ್ಯಾತ್ಮ ನಷ್ಟ .

ಅವರವರ ಭಾವಕ್ಕೆ

ಒಳಿತು ಕೆಡುಕುಗಳೆಂದು ಪಟ್ಟಿ ಮಾಡಲಳವಲ್ಲ,
ಜಗದೊಳು ನಿನ್ನ ಮನವಿದ್ದಂತೆ ತೋರುವುದು ಎಲ್ಲ,
ಏನಿದ್ದರಿರಲಿ ಅದಿದ್ದಂತೆ ಒಪ್ಪುವುದೇ ಮರ್ಮ,
ಬಿಡದಲೇ ನಿನ್ನತನ"ಅರಿತು ಶರಣಾಗುವುದೇ ಧರ್ಮ.

ನಾಮ -ಮಹಿಮ

ಹನಿ ಹಾಲಿಲ್ಲ ಹೆಸ್ರು ಕ್ಷೀರಸಾಗರ ಭಟ್ರು,
ದುಡ್ಡಿಲ್ಲ ಕಾಸಿಲ್ಲ ಸಂಪತ್ತೈಯ್ಯಂಗಾರು,
ವಿದ್ಯೆಯಿಲ್ಲ ಬುದ್ಧಿಯಿಲ್ಲ ವಾಣಿಪತಿ,
ಈ ಗಾದೆಗಳಿಗೆ ಅನ್ವರ್ಥ-ಜೀವನ ಗತಿ.

(Contributed by Shri Govind Magal)

2 comments:

  1. ನಿಮಗೆ ಧನ್ಯವಾದಗಳು 🙏

    ReplyDelete
  2. ಓದಿ ಹರಸುತ್ತಿರುವ ನಿಮಗೂ ನಿರ್ವಹಣೆ ತಂಡದ ಅಭಿನಂದನೆಗಳು....

    ReplyDelete

ಗೋ-ಕುಲ Go-Kula