Thursday 11 February 2016

Shri Rāghavēndra Maṅgalāṣṭaka Ślōka 08

ಶ್ರೀಮದ್ವೈಷ್ಣವ-ಲೋಕ-ಜಾಲಕ-ಗುರು: ಶ್ರೀಮದ್ಪರಿವ್ರಾಡ್-ಭರು:
ಶಾಸ್ತ್ರೇ ದೇವಗುರು: ಶ್ರಿತಾಮರ-ತರು: ಪ್ರತ್ಯೂಹ-ಗೋತ್ರ-ಸ್ವರು: |
ಚೇತೋತೀತ-ಶಿರುಸ್ತಥಾ ಜಿತವರು: ಸತ್ಸೌಖ್ಯ-ಸಂಪತ್-ಕರು:
ಶ್ರೀಮತ್ಸದ್ಗುರು-ರಾಘವೇಂದ್ರ-ಯತಿರಾಟ್ ಕುರ್ಯಾದ್ಧೃವಂ ಮಂಗಳಮ್ || ೮ ||

ಪದಚ್ಛೇದ :

ಶ್ರೀಮತ್, ವೈಷ್ಣವ ಲೋಕ ಜಾಲಕ ಗುರು:, ಶ್ರೀಮತ್, ಪರಿವ್ರಾಟ್ ಭರು:, ಶಾಸ್ತ್ರೇ, ದೇವಗುರು:, ಶ್ರಿತ ಅಮರತರು:, ಪ್ರತ್ಯೂಹ ಗೋತ್ರ ಸ್ವರು:, ಚೇತ: ಅತೀತ ಶಿರು:, ತಥಾ, ಜಿತ ವರು:, ಸತ್ ಸೌಖ್ಯ ಸಂಪತ್ ಕರು:

ಅನ್ವಯಾರ್ಥ:

ಶ್ರೀಮತ್- ಜ್ಞಾನವುಳ್ಳ, ವೈಷ್ಣವ - ವಿಷ್ಣವನ್ನು ಆರಾಧಿಸುವ, ಲೋಕ - ಜನರ, ಜಾಲಕ - ಸಮೂಹಕ್ಕೆ, - ಗುರು: ದಾರಿತೋರುವ ಗುರುಗಳು, ಶ್ರೀಮತ್ - ಜ್ಞಾನಿಗಳಾದ, ಪರಿವ್ರಾಟ್ - ಸನ್ಯಾಸಿಗಳ, ಭರು: ರಕ್ಷಕರು, ಶಾಸ್ತ್ರೇ - ಶಾಸ್ತ್ರ ವಿಶಯಗಳಲ್ಲಿ, ದೇವಗುರು- ದೇವತೆಗಳ ಗುರುವಾದ ಬೃಹಸ್ಪತಿಯಂಥವರು, ಶ್ರಿತ - ಬೇಡಿ ಬಂದವರಿಗೆ, ಅಮರ ತರು: - ದೇವಲೋಕದ ಮರ, ಅಂದರೆ, ಕಲ್ಪವೃಕ್ಷದಂತೆ ಬೇಡಿದ್ದನ್ನು ಕೊಡುವವರು. ಪ್ರತ್ಯೂಹ - ವಿಘ್ನಗಳ, ಗೋತ್ರ - ಬೆಟ್ಟಗಳಿಗೆ, ಸ್ವರು - ಸಿಡಿಲಿನಂಥವರು, (ವಜ್ರಾಯುಧ). ಚೇತ:   - ಅಂತ:ಕರಣಕ್ಕೆ(ಮನಸ್ಸಿಗೆ), ಅತೀತ - ನಿಲುಕದ, ಶಿರು:  - ಜ್ಞಾನಿಗಳುಜಿತ - ಜಿತೇಂದ್ರಿಯರಲ್ಲಿವರು:  - ಶ್ರೇಷ್ಠರು. ತಥಾ - ಹಾಗೆಯೇ, ಸತ್ - ನಿರ್ದುಷ್ಟವಾದ, ಸೌಖ್ಯ - ಆನಂದ ಮತ್ತು ಸಂಪತ್ - ಸಂಪತ್ತನ್ನು, ಕರು: - ಉಂಟುಮಾಡುವವರು.

ತಾತ್ಪರ್ಯ: ಎಂಟನೆಯ ಶ್ಲೋಕದಲ್ಲಿ ರಾಯರ ಇನ್ನೂ ಹಲವು ವಿಶಿಷ್ಟ ಗುಣಗಳಬಗ್ಗೆ ಹೇಳಿದ್ದಾರೆ.

ರಾಯರು, ವಿಷ್ಣುವನ್ನು ಆರಾಧಿಸುವ ಎಲ್ಲಾ ಸಜ್ಜನರ ಸಮೂಹಕ್ಕೂ ಭಗವಂತನೆಡೆಗಿನ ದಾರಿ ತೋರುವ ಗುರುಗಳು, ಆಗಿನ ಕಾಲದ ಎಲ್ಲಾ ಜ್ಞಾನಿಗಳಾದ ಯತಿಗಳ ರಕ್ಷಿಸುವ ಮುಂದಾಳುವಾಗಿದ್ದರು.

ಶಾಸ್ತ್ರ ಪಾಠ ಪ್ರವಚನದಲ್ಲಿ ಸಾಕ್ಷಾತ್ ದೇವಗುರು ಬೃಹಸ್ಪತಿಯಂತೆ ಜ್ಞಾನಿಗಳಾಗಿದ್ದರು.. ತಮ್ಮನ್ನು ಆಶ್ರಯಿಸಿ ಬಂದ ಸಮಸ್ತ ಸಜ್ಜನರಿಗೂ ಕಲ್ಪವೃಕ್ಷದಂತೆ ಕೇಳಿದ್ದನ್ನು ಕೊಡುತ್ತಿದ್ದರು. ತಮ್ಮ/ಭಗವಂತನ ಭಕ್ತರ ಬೆಟ್ಟದಂಥ ಕಷ್ಟಗಳನ್ನು ಸಹ ನಿವಾರಿಸುವ ಸಿಡಿಲಿನಂಥವರು. ಇಲ್ಲಿ, ರಾಯರ ಮಹಿಮೆಯನ್ನು ಪರ್ವತಗಳ ರೆಕ್ಕೆ ಸೀಳಿ ಕೊಬ್ಬಿಳಿಸಿದ ಇಂದ್ರನ ವಜ್ರಾಯುಧಕ್ಕೆ ಮತ್ತು ದೊಡ್ಡ ದೊಡ್ಡ ಬೆಟ್ಟಗಳನ್ನೂ ಪುಡಿಗುಟ್ಟಿಸುವ ಸಿಡಿಲಿಗೆ ಹೋಲಿಸಿದ್ದಾರೆ.

ಇನ್ನು, ಅವರ ಜ್ಞಾನದ ಆಳವಂತೂ ಯಾರ ಊಹೆಗೂ ನಿಲುಕದಂಥದು. ಜಿತೇಂದ್ರಿಯರಲ್ಲಿ ಉತ್ತಮರಾಗಿದ್ದರು. ನಿರ್ದುಷ್ಟವಾದ (ಪರಮ) ಆನಂದವನ್ನೂ, ಹಾಗೆಯೇ ಐಹಿಕ ಮತ್ತು ಪಾರಮಾರ್ಥಿಕ ಸಂಪತ್ತನ್ನೂ ನೀಡಬಲ್ಲವರು.
ಇಂಥ: ಸಜ್ಜನರ ಪಾಲಿನ ಪ್ರೀತಿಯ ಗುರುಗಳಾದ, ಯತಿಶ್ರೇಷ್ಟರಾದ ರಾಘವೇಂದ್ರರು ಶಾಶ್ವತವಾದ ಮಂಗಳವನ್ನು ಉಂಟುಮಾಡಲಿ.
****

Ślōka 08:

श्रीमद्वैष्णवलोकजालकगुरुः श्रीमत्परिव्राढ्भरुः
शास्त्रे देवगुरुः श्रितामरतरुः प्रत्यूहगोत्रस्वरुः
चेतोतीतशिरुस्तथा जितवरुः सत्सौख्यसंपत्करुः
श्रीमत्सद्गुरुराघवेंद्रयतिराट् कुर्याद्ध्रुवं मंगलम् ८॥

śrīmadvaiṣṇava-lōka-jālaka-guruḥ śrīmadparivrāḍ-bharuḥ
śāstrē dēvaguruḥ śritāmara-taruḥ pratyūha-gōtra-svaruḥ |
cētōtīta-śirustathā jitavaru
ḥ satsaukhya-sampat-karuḥ
śrīmatsadguru-rāghavēndra-yatirāṭ kuryād'dhr̥vaṁ maṅgaḷam ||8 ||



Padacchēda:

श्रीमत् वैष्णव लोक जालक गुरुः श्रीमत् रिव्राट् रुः शास्त्रे देवगुरुः श्रित मरतरुः प्रत्यूह गोत्र स्वरुः चेतः तीत शिरुः था जित वरुः त् सौख्य संपत् रुः

śrīmat vaiṣṇava lōka jālaka guruḥ śrīmat parivrāt bharuḥ śāstrē dēvaguruḥ śritā amarataruḥ pratyūha gōtra svaruḥ cētaḥ atīta śiruḥ tathā jita varuḥ sat saukhya sampat karuḥ

Word Meanings:

श्रीमत्(śrīmat) – Knowledgeable; वैष्णव(vaiṣṇava) – worshippers of Viṣṇū; लोक(lōka) – people; जालक(jālaka) – group of;  गुरुः(guru) – the teacher who shows the way; श्रीमत्(śrīmat) – the knowledgeable; रिव्राट्(parivrāt) – ascetics;  रुः(bharu) – protectors; शास्त्रे(śāstrē)  in the matter of scriptures; देवगुरुः(dēvaguru) - Bṛhaspati, the teacher of demi-gods; श्रित(śritā) – those who come with a prayer; मर तरुः(amara taru) – a divine tree in the abode of gods, namely, like kalpavṛkśa that grants anything prayed for; प्रत्यूह(pratyūha) – obstacles; गोत्र(gōtra) – to the mountains of; स्वरुः(svaru) – like lightning (vajrāyudha); चेतः(cēta) – to the intellect; तीत(atīta) – unreachable; शिरुः(śiru) – the knowledgeable ones; था(tathā) – also; जित(jita) – those who have prevailed over their senses; वरुः(varu) – the best; त्(sat) – pure, untainted; सौख्य(saukhya) – joyous and संपत्(sampat) – treasure; रुः(karu) – causing; श्रीमत् (śrīmat) – the learned; द्गुरु(sadguru) – best among gurus; राघवेंद्र यतिराट्(rāghavēndra yatirāṭ) – the best among saints; धृवं(dhruvaṁ) – eternal; मंगलम्(maṅgaḷam) – propitious; कुर्यात्(kuryāt) – may it be bestowed.

Tātparya:

In the eighth ślōka, several other special aspects of Rāyaru has been brought out.
Rāyaru was the guru who guided all groups of good people who worshipped Viṣṇū and he was also at the forefront to protect all the learned saints of his time.

In terms of lecturing on and the teaching of the scriptures, he was as knowledgeable as the very teacher of demi-gods namely Bṛhaspati. To all those good Samaritans who approached him with some desire of theirs, he fulfilled their wishes just like the kalpavṛkśa would. He would bring relief, to his / Bhagavān’s devotees, who were reeling under huge mounds of hardships, striking it out like lightning. Here Rayaru’s greatness is compared to the way Lord Indra’s vajrāyudha, that struck like lightning, to clip the wings of the mountains and reduced them to dust.

His level of knowledge was beyond the grasp of anyone. Amongst those who had prevailed over their senses, he was at the top. He could grant to anyone, untainted (supreme) bliss and also treasures of this world, and divine ones.     


May such Rāyaru, the supreme saint and master, bless us with eternal auspiciousness.

No comments:

Post a Comment

ಗೋ-ಕುಲ Go-Kula