ಭಾವ ಗುಚ್ಛ by “ತ್ರಿವೇಣಿ ತನಯ”
ಆತ್ಮ ಚರಿತ್ರೆ
ಮೊದಲ
"ಆತ್ಮ"ಅವತಾರಗಳ ಚರಿತ್ರೆ ಬರೆದು ಕೊಟ್ಟವನು ವೇದವ್ಯಾಸ,
ಅರ್ವಾಚೀನರೆಲ್ಲರದೂ
ಆತ್ಮಪ್ರಶಂಸೆಯ ವಿರೋಧಾಭಾಸ,
ಲೌಕಿಗರೆಲ್ಲರದು ಪ್ರತಿಷ್ಠೆ
ಪ್ರಚಾರದ ಕೀಳು ಚಪಲ,
ಹರಿಯ ಉದ್ದೇಶವಾದರೋ
"ಸಮ"ಗತಿ ಕೊಡುವ ಜಾಲ.
ವಿಷ್ಣು ಧರ್ಮ
ವಿಷ್ಣುಧರ್ಮದ
ಪ್ರಾರಂಭದಿಚ್ಛಮಾತ್ರವೂ ನಿಷ್ಫಲವಲ್ಲವಂತೆ,
ಪ್ರಾಮಾಣಿಕ ನಡೆಯಿರುವವರಿಗೆ
ದೂರ ಸಂಸಾರ ನೋವು ಚಿಂತೆ,
ಕರ್ಮಾನುಸಾರ ಪಾಪಗಳ ನಿವಾರಿಸುವ
ತೋರಿ ಕಾರ್ಮೋಡದ ನೆರಳು,
ಶಿಕ್ಷೆ ಕೊಂಚಮಾಡಿ ಎಚ್ಚರಿಸಿ
ಸನ್ಮಾರ್ಗದಲ್ಲಿರಿಸುವ ನೀನೆಷ್ಟು ಕರುಣಾಳು.
ತಾರಕ -ಚುಟುಕ
ಚುಟುಕ ಚಿಟಿಕೆಯಲಿ ಮನ
ಮುಟ್ಟಬೇಕು,
ದುರಿತಗಳ ಕುಟ್ಟಿ ಕುಟ್ಟಿ
ಅಟ್ಟಬೇಕು,
ಸುಜನರ ಮನದ ಕದ ತಟ್ಟಬೇಕು,
ಹರಿಪಾದದಲಿ ಮನವ ಕಟ್ಟಬೇಕು.
ಸಹಜ ಸ್ಫುರಣವದು ಹುಟ್ಟಬೇಕು,
"ನಾನು
ನನ್ನದು"ಅಳಿಸಿ ಮೆಟ್ಟಬೇಕು,
ಕೊಡು ಇದಕೆ ಜ್ಞಾನ ಬೆಟ್ಟ ಬೇಕು,
ಶರಣ ಸ್ಮರಣವ ಕೊಟ್ಟು ನೀ
ಮುಟ್ಟಬೇಕು.
ಸುಪ್ರಭಾತ
ಉದಯಿಸುವ ಸೂರ್ಯ ಹಕ್ಕಿಗಳ
ಸುಪ್ರಭಾತ,
ತಂದನು ಹೊಸದೊಂದು ದಿನ ನಿನ್ನೆಯ
ಹಿಂದಿಕ್ಕಿ ಆತ,
ಕೋಳಿಯೂ ಕೂಗುತಿದೆ ಬೆಳಗಾಯ್ತು ಏಳು,
ನಿರ್ಮಲ ಮನವಿರೆ ಪ್ರತಿದಿನವೂ
ಹಣ್ಣಿನ ಹೋಳು.
(Contributed by Shri Govind Magal)
No comments:
Post a Comment
ಗೋ-ಕುಲ Go-Kula