Friday, 12 February 2016

Shri Rāghavēndra Maṅgalāṣṭaka: Epilogue

ಕೊನೆಯಲ್ಲಿ ಹೇಳಬೇಕಾದ್ದು

ಶ್ರೀ ರಾಘವೇಂದ್ರಸ್ವಾಮಿಗಳ ಮಂಗಳಾಷ್ಟಕ ಅರ್ಥ ಚಿಂತನೆಯು ತಾತ್ಕಾಲಿಕವಾಗಿ ಮುಗಿತಾಯದ ಹಂತಕ್ಕೆ ಬಂದಿದೆ. ಇದು ಚಿಂತನೆಯ ಮುಕ್ತಾಯವಲ್ಲ. ಕೇವಲ ಈ ಚಿಂತನೆಯ ಪರ್ವದ ಕೊನೆಯಷ್ಟೆ. ಈ ಪರ್ವದ ಅಂತ್ಯವೇ ನಮ್ಮೆಲ್ಲರ ಮುಂದಿನ ಚಿಂತನಾ ಸರಣಿಯ ಆದಿಯಾಗಬೇಕೆಂದು ಹೃತ್ಪೂರ್ವಕವಾಗಿ ಆಶಿಸುತ್ತೇನೆ.

ಒಂದು ವೇಳೆ, ಈ ಕೃತಿಯಲ್ಲಿ ಹೇಳಿದಂತೆ ಇಷ್ಟೆಲ್ಲಾ ಫಲಗಳು ಸಿಗುತ್ತವೆಯೇ ಎಂಬ ಅನುಮಾನ ಬಂದರೆ, ಅದಕ್ಕೆ ಇಲ್ಲೇ ಉತ್ತರ ಸಿಗುತ್ತದೆ. ಹೇಗೆಂದರೆ, ರಾಯರು ಸತತ ತಪಸ್ಸಿನಿಂದ, ಧ್ಯಾನದಿಂದ ಜಗನ್ನಾಥನನ್ನೇ ತನ್ನವನನ್ನಗಿಸಿಕೊಂಡವರು. 'ಕಿಮಲಭ್ಯಂ ಭಗವತಿ ಪ್ರಸನ್ನೇ ಶ್ರೀನಿಕೇತನೇ' ಎಂಬ ಹಿರಿಯರ ವಾಕ್ಯದಂತೆ ಯಾರಿಗೆ ಭಗವಂತನ ಅನುಗ್ರಹವಾಗಿದೆಯೋ ಅವರಿಗೆ ಅಸಾಧ್ಯವಾದುದಾದರೋ ಯಾವುದು. ಇಂದಿನಿಂದಲೇ, ಕಲಿಯುಗ ಕಲ್ಪತರು, ಅಪರೋಕ್ಷೀಕೃತ ಶೀಶ: ಎನ್ನಿಸಿಕೊಂಡ ರಾಯರ ಈ ಸ್ತೋತ್ರವನ್ನು ನಿತ್ಯಪಾರಾಯಣ ಮಾಡೋಣ, ಮಾಡಿ ಕೃತಾರ್ಥರಾಗೋಣ. ಮೇಲೆ ಹೇಳಿದ ಫಲಗಳಿಗಾಗಿಯಲ್ಲ, ಬದಲಿಗೆ ಅವರ ಅನುಗ್ರಹದಿಂದ ಆಚಾರ್ಯ ಮಧ್ವರ ಉತ್ತಮ ಶಾಸ್ತ್ರವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದಕ್ಕೋಸ್ಕರ.

ರಾಯರ ಅನುಗ್ರಹದಿಂದ ಇನ್ನು ಮುಂದೆ ಕೂಡ ಇಂಥ ಉತ್ತಮ ಕೃತಿಗಳ ಚಿಂತನಾ ಸರಣಿಗಳು ತಡೆಯಿಲ್ಲದೇ ನಡೆಯಲೆಂದು ಆ ರಾಘವೇಂದ್ರ ಗುರುಸಾರ್ವಭೌಮರಲ್ಲಿ ಪ್ರಾರ್ಥಿಸುತ್ತಾ, ಇಷ್ಟುದಿನ ಈ ಕೃತಿಯ ಅರ್ಥಚಿಂತನೆಯಲ್ಲಿ, ನನಗೆ ಮಾರ್ಗದರ್ಷನ ಮಾಡಿ, ಆಂಗ್ಲ ಅನುವಾದಕ್ಕೆ ಸಹಕರಿಸಿದ ಶ್ರೀಯುತ ಪ್ರಸಾದ್ ಅವರಿಗೆ, ಹಾಗೂ ನನ್ನ ಪ್ರಯತ್ನವನ್ನು ಮೆಚ್ಚಿ ಪ್ರೋತ್ಸಾಹಿಸಿದ  ನಮ್ಮ ಬಳಗದ ಹಿರಿಯ- ಕಿರಿಯ ಗೆಳೆಯರಿಗೂ ಕೂಡ ನನ್ನ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.

****
Epilogue

We have just concluded a discussion on the Maṅgaḷāṣṭakaṁ of Śrī Rāghavēndra Swāmi. This is not the end of contemplation on this work. It is merely the culmination of one episode of a discussion. May the conclusion of this episode, cascade into a new opening for another contemplative series, is my heartfelt wish for all of us.

Should there be any doubt in any one’s mind on whether this work would be as beneficial as stated in it to the one who chants it, there is ready answer for it right here. Rāyaru, through his relentless penance and meditation, endeared himself to Jagannātha (the Lord of our world). As said by our elders, ‘किमलभ्यं भगवति प्रसन्ने श्रीनिकेतने (Kimalabhyaṁ bhagavati prasannē śrīnikētanē),’ nothing is impossible to those who are blessed by the grace of God. Let us start chanting each day, to Rāyaru, the one who has been called as कलियुग कल्पतरु, अपरोक्षीकृत शीशः Kaliyuga kalpataru, aparōkṣīkr̥ta śīśaḥ, and in the process accomplish something meaningful in our lives. It is not for the fruits that are mentioned in the stōtra but instead, by Rāyaru’s grace, let us be able to understand all of Ācarya Madhva’s supreme scriptural texts, in a better manner.

May we be blessed through Rāyaru’s grace to continue ceaselessly, a series of discussions on several similar supreme works. I hereby pray to Śrī Rāghavēndra Gurusārvabhouma, for guiding me in the course of a meaningful contemplation of this work; I thank Shri Prasad who supported me by translating it to English and last but not the least, I am extremely grateful to all of you, my bandhus, older and younger, who constantly appreciated and encouraged me, in this effort of mine.

No comments:

Post a Comment

ಗೋ-ಕುಲ Go-Kula