ಭಾವ ಗುಚ್ಛ by “ತ್ರಿವೇಣಿ ತನಯ”
ಕಾಲ -ಕಂಡವರು -ಕಾಣದವರು
ಪರೀಕ್ಷಿತಗಿದ್ದದ್ದು ದಿನ ಏಳು ,
ಶುಕರುಪದೇಶಿಸಿ ಹರಸಿದರು-ಏಳು,
ಖಟ್ವಾಂಗ ರಾಜಗಿದ್ದದ್ದು
ಅತ್ಯಲ್ಪ ಕಾಲ.
ಅದರಲ್ಲೇ ಸಾರ್ಥಕ ಮಾಡಿಕೊಂಡ
ಬಾಳ,
ನಮಗಾದರೋ ಕಾಲದ ಪರಿವೂ ಇಲ್ಲ,
ಕಾಣದವನ ಪರಿಚಯವೂ ಬೇಕಿಲ್ಲ,
ನಡೆ ಸರಿಯೇ ಎಂದು ಅಂತರಂಗವ
ಕೇಳು,
ಇನ್ನಾದರೂ ನಿಜ ಮಾನವನಾಗಿ ಬಾಳು.
ಮುಖ್ಯವಾಗವವು ಬದುಕಿದಾ ವರ್ಷ,
ಸವಿದದ್ದು ಹಂಚಿದ್ದು ಎಷ್ಟು ನೀ
ಹರ್ಷ,
ಬಂಗಾರ ಭೂಮಿ ಹಣ ಎಷ್ಟಿದ್ದರೇನು?
ಹಸಿವೆಗೇ ಅನ್ನವಲ್ಲಡೇ ಚಿನ್ನ
ತಿನ್ನುವೆ ಏನು?
ಅನ್ನ -ಜ್ಞಾನ
ಹೊಟ್ಟೆ ಹಸಿವೆಗೆ ಅನ್ನ ತಲೆ
ಹಸಿವೆಗೆ ಜ್ಞಾನ,
ಹೊಟ್ಟೆ ಹಸಿವು ಸೀಮಿತ
ಜ್ಞಾನದ್ದು ದೂರದಯಾನ,
ಹಂಚುತಿದ್ದರೂ ಬೆಳೆದು ಬೆಳಕನೀವ
ಸಾಧನ,
ಜನ್ಮಾಂತರಕೆ ಹರ್ಷವೀವ
ಮುಕ್ತಿಗೊಯ್ವ ಸೋಪಾನ.
ಕಾಣದ ಸತ್ಯ
ಜಗದೊಳಗೆ ಕಾಣುವುದಷ್ಟೇ
ಸತ್ಯವಲ್ಲ ,
ಗಾಳಿ ಘ್ರಾಣ ರುಚಿ ಶಾಖಗಳೇಕೆ
ಕಾಣ್ತಿಲ್ಲ,
ಅರಿತು ಅನುಭವಿಸಲು ಬೇಕು
ಅಂತಃಶಕ್ತಿ,
ನಿರಾಕರಿಸದಿರು ಉಂಟೊಂದು
ನಿಯಂತ್ರಕ ಶಕ್ತಿ.
(Contributed by Shri
Govind Magal)
No comments:
Post a Comment
ಗೋ-ಕುಲ Go-Kula