ಭಾವ ಗುಚ್ಛ by “ತ್ರಿವೇಣಿ
ತನಯ”
ಜೀವಾತ್ಮ -ಪರಮಾತ್ಮ
ಭಗವಂತ ಬಿಂಬ,
ಜೀವರು ಪ್ರತಿಬಿಂಬ,
ಅವನಿಗೆ ಅಗಣಿತ ಗುಣ,
ನಮ್ಮಲ್ಲಿಲ್ಲ ಒಂದೂ ಕಣ,
ಅವನು ಮಾಲಿಯಾಗಿ ಸಾಕುವ,
ಸದಾ ಹಸಿವೆಮಗೆ ಮೇಯುವ,
ಎಲ್ಲರಿಗೆಂದೇ ಎಲ್ಲಾ ಕೊಟ್ಟ,
ಎಲ್ಲಾ ನನಗೆಂದೇ ನಮ್ಮ ಹಠ,
ಎಂದು ಇದರಿಂದ ಮುಕ್ತಿ,
ಒಂದ್ ಹಂತಕ್ಕೆ ಬರಬೇಕು ತೃಪ್ತಿ,
ಅಶಾಶ್ವತದೆಡೆಗೆ ವಿರಕ್ತಿ,
ಶಾಶ್ವತದೆಡೆಗೆ ಭಕ್ತಿ.
ಬದುಕಿನ ಆಟ
ಅರ್ಥವಾಗದ ಬದುಕಿನ ದೊಂಬರಾಟ,
ಮರೆಯಲಿದ್ದು ಆಡಿಸುವ ವಿಧಾತನಾತ,
ಹತ್ತಿರವಿರುವವರ ಸರಿಸುವೆ ದೂರ,
ದೂರಿದ್ದವರ ಸೆಳೆದು ತೋರಿಸುವೆ ಆದರ,
ತಿಳಿಯಲಾದೀತೆ ನಿನ್ನಾಟಗಳ ಆಳ,
ಒಪ್ಪಿ ಶರಣಾದಾಗಲಷ್ಟೇ ಬದುಕು ನಿರಾಳ.
ಕ್ಲೇಶ ಕಳಚುವ ಕೇಶವ
ಹಣ ಹೆಸರು ಹೆಣ್ಣುಗಳ ಪಾಕದ ರಾಡಿ,
ಎಸೆದಿರುವ ಜೀವಗಳ ಜೊತೆ ಮಾಡಿ,
ತೊಡಗದಿರು ರಾಡಿಯಲಿ ಎಂಬ ಉಪದೇಶ,
ಅವನ ಕೃಪೆ ಇರದಿರೆ ಕಳಚೀತೆ ಕ್ಲೇಶ?
(Contributed by Shri Govind Magal)
No comments:
Post a Comment
ಗೋ-ಕುಲ Go-Kula