Monday 1 February 2016

Bhava Guccha 14

ಭಾವ ಗುಚ್ಛ  by “ತ್ರಿವೇಣಿ ತನಯ “

ಗುರುವಂದನೆ

ಕೊಟ್ಟರು-ಕೊಡುತ್ತಿರುವರು ಭಗವಂತನ ನಲ್ನುಡಿ,
ಕಣ್ಮುಚ್ಚಿ ಒಳನೋಟಕ್ಕಿಳಿಯಲು ಬರೆದರು ಮುನ್ನುಡಿ,
ಬಂದದ್ದು ಬರಲಿ ಅಂಟದಂತಿರಲಿ ಎಂಬ ಹೊನ್ನುಡಿ,
ಗುರು ಪಾದಕೆ ದಾಸನ ಎರಡು ತೊದಲ್ನುಡಿ.

ಎಂದಿಗೂ ನಿನ್ನದು ಶುದ್ಧಪಾಠದ ಹುಡುಕಾಟ,
ಎದುರಾದವು ಅನೇಕ ಸಂಪ್ರದಾಯಿಗಳ ಕಾದಾಟ,
ಅಂಜದೇ ಅಳುಕದೇ ಎದುರಿಸಿದೆ ಎಲ್ಲ,
ಮುದದಿಂದ ಹಂಚುತಿಹೆ ಮಧ್ವಶಾಸ್ತ್ರದ ಬೆಲ್ಲ.

ಲೋಕದಲ್ಲುಂಟು ಅನೇಕ ಪಂಡಿತ ವರ್ಗ,
ಸೌಭಾಗ್ಯ ನಮ್ಮದು ಸುಜ್ಞಾನಿ ಸಿಕ್ಕ ಯೋಗ,
ಬದುಕನ್ನು ನೋಡುವ ಬಗೆಯ ತಿಳಿಸಿದ ಧೀರ,
ಮನೋವಿಜ್ಞಾನಿಯಾಗಿ ಮನವ ತೊಳೆವ ವ್ಯಾಪಾರ,
ಎದೆ ಬಗೆದು ರಾಮನ ತೋರಿದ ಹನುಮಂತ,
ಹುಲುಜೀವದ ತ್ರಾಣ-ಎರಡು ನುಡಿಗಷ್ಟೇ ಸೀಮಿತ .

ಗುರುವೆಂದರೆ ಆತ ಕತ್ತಲು ಕಳೆವಾತ
ಮುಗ್ಗರಿಸಿ ಬಿದ್ದಾಗ ಹಿಡಿದೆತ್ತುವಾತ,
ಜಾರಿದರೂ ಚೀರಿದರೂ ಕೈಯ ಬಿಡದಾತ,
ಜೀವಸ್ವಭಾವವರಿತು ಸಾಧನೆ ಮಾಡಿಸುವಾತ,
ಕಲಿಗಾಲದ ಕಾರ್ಗತ್ತಲಲಿ ಬೆಳಕು ತೋರಿದಾತ,

ನಮಗಾಗೇ ಮುಕುಂದ ಕಳಿಸಿದ ಗುರು ಗೋವಿಂದನೀತ.

(Contributed by Shri Govind Magal)

No comments:

Post a Comment

ಗೋ-ಕುಲ Go-Kula