ಭಾವ ಗುಚ್ಛ by “ತ್ರಿವೇಣಿ
ತನಯ “
ಆಕಾಶಾಭಿಮಾನಿ -ಅವಕಾಶಾಭಿಮಾನಿ
ಶಿವ -ಪಾರ್ವತೀ
ಪುತ್ರ,
ನಿನ್ನದೆಂಥಾ ಪಾತ್ರ,
ನಿನ್ನ ಮನೆ ಆಕಾಶ,
ನೀ ನೀಡುವೆ ಅವಕಾಶ.
ದೇಹ ನಾಡಿಗಳಿಗೆ ನೀ
ಮೂಲಾಧಾರ,
ಮೊದಲ
ಅಂತರ್ಜಾಗೃತಿಯ ಸೂತ್ರಧಾರ,
ನಿನ್ನ
ಅನುಗ್ರಹವಿರೇ ಅಪಾರ,
ಸಹಸ್ರಾರದಲ್ಲಿ ಪರಮ
ಸಾಕ್ಷಾತ್ಕಾರ.
ನಿನ್ನಪ್ಪನ ಮನೆ
ಮನಸು,
ಅವಕಾಶವೀವ ನೀನವನ
ಕೂಸು,
ನಮೋ ಗಣೇಶಾಂತರ್ಗತ
ವಿಶ್ವಂಭರ,
ತೊಡಿಸೆಮಗೆ ಜ್ಞಾನ
ಭಕ್ತಿ ವೈರಾಗ್ಯಗಳಂಬರ.
ನಮೋ ನಮೋ
ಆಕಾಶಾಭಿಮಾನಿ ಗಣೇಶ,
ಕರುಣಿಸೆಮಗೆ
ಸದ್ಬುದ್ಧಿ ಸತ್ಕರ್ಮಗಳ ಅವಕಾಶ,
ನೀಡೆಮಗೆ
ಕೇಳುವಿಚ್ಛೆಯ ತೆರೆದ ಕಿವಿ,
ಅವಾಗಬಲ್ಲವು
ದುರ್ವಚನ ದುರ್ವಾದಗಳಿಗೆ ಪವಿ.
ವಿಘ್ನನಿವಾರಕ
ತರಿದು ಬಿಡು ವಿಘ್ನ,
ನಿನ್ನೊಲುಮೆಯಿಂದ
ಬದುಕಾಗಲಿ ಯಜ್ಞ,
ಬಾಳಯಾತ್ರೆಯಲಿ
ಸತ್ಕರ್ಮಗಳನೇ ನಡೆಸು,
ತಂದೆಯೊಡಗೂಡಿ ಎನ್ನ
ಮನ ಹರಿಪಾದದೊಳಿರಿಸು.
(Contributed by Shri Govind Magal)
No comments:
Post a Comment
ಗೋ-ಕುಲ Go-Kula