Wednesday 17 February 2016

Bhava Guccha 24

ಭಾವ ಗುಚ್ಛ  by “ತ್ರಿವೇಣಿ ತನಯ“

ಸ್ವಗತ

ಜಪ ತಪ ಅನುಷ್ಠಾನಗಳರಿಯದ ಮೂಢ ನಾನು,
ವೇದಗಮ್ಯ ಸರ್ವಶಕ್ತ ಸರ್ವಾಂತರ್ಯಾಮಿ ಅವನು,
ಅರಿತವರು ಹೇಳುವರು ಅವನು ಭಕ್ತವತ್ಸಲ,
ಕಳಿಸಿದವನು ಕರಕೊಳ್ಳಲಿ ನನಗಿತ್ತು ಬೇಕಾದ ಬಲ.

ಅಂತರ್ಯಾಮಿ

ಎಲ್ಲರೊಳಗಿದ್ದು ಪ್ರೀತಿಸುವವ ನೀನು,
ಎಲ್ಲರೊಳಗಿದ್ದು ದ್ವೇಷಿಸುವವ ನೀನು,
ಇರಲಿ ಪುರಸ್ಕಾರ ಬರಲಿ ತಿರಸ್ಕಾರ ಬಿಡುಗಡೆಗೆ ಅದೆಲ್ಲ,
ಜೀವಸ್ವಭಾವದಂತೆ ಸಾಧನೆ ಮಾಡಿಸುತಿಹ ಲಕುಮೀ ನಲ್ಲ.

ಮರ್ಕಟ ಮನ

ಮನದೊಳು ಹುಳ ಹೊಕ್ಕರೆ ಕಾಣುವುದೆಲ್ಲಾ ತಪ್ಪು,
ಸಕ್ಕರೆ ಅಪಾರವಿದ್ದರೂ ರುಚಿಸುವುದದು ಉಪ್ಪು ,
ಶಾಂತಚಿತ್ತದಿ ಕಿತ್ತೆಸೆದುಬಿಡು ಹುಳವ ,
ಒಪ್ಪಿ ಸುಖಿಸುವೆ ಆಗ ಜಗದ ವ್ಯಾಪಾರವ.

ಭ.ಹ .ನೀ .ಶ .ದಿಂದ ಪ್ರೇರಿತ .....

ಕ್ಷಮಾಶೀಲನಿಗೆ ರಕ್ಷಣೆ ಬೇಕೆ?
ಕೋಪಾವಿಷ್ಟನಿಗೆ ಬೇರೆ ಶತ್ರುಗಳ್ಯಾಕೆ?
ದಾಯಾದಿಗಳಿಗೆ ಕಿಚ್ಚು ಇನ್ಯಾಕೆ?
ಸನ್ಮಿತ್ರನಿರಲು ಮದ್ದು ಅದೇಕೆ?
ದುರ್ಜನರೇ ತುಂಬಿರಲು ವಿಷಜಂತುಗಳೇಕೆ?
ನಿಜ ಜ್ಞಾನವಿರಲು ಧನವಿನ್ಯಾಕೆ?
ಸೌಜನ್ಯವಿದ್ದಲ್ಲಿ ಮೇಲಾಭರಣ ಬೇಕೆ?
ಪಾಂಡಿತ್ಯ(ಜ್ಞಾನ )ವಿದ್ದಲ್ಲಿ ಪದವಿ ಅದ್ಯಾಕೆ?


[Contributed by Shri Govind Magal]

No comments:

Post a Comment

ಗೋ-ಕುಲ Go-Kula