ಏವಂ ವಿರಾಟಂ
ಮೋಚಯಿತ್ವೈವ ಗಾಶ್ಚ ತಮಸ್ಯನ್ಧೇ ಕೀಚಕಾನ್ ಪಾತಯಿತ್ವಾ ।
ಪ್ರಾಪ್ತೋ ಧರ್ಮ್ಮಃ
ಸುಮಹಾನ್ ವಾಯುಜೇನ ತಸ್ಯಾನು ಪಾರ್ತ್ಥೇನ ಚ ಗೋವಿಮೋಕ್ಷಣಾತ್ ॥೨೩.೪೯॥
ಹೀಗೆ ವಿರಾಟನನ್ನೂ ಅವನ ಹಸುಗಳನ್ನೂ ಬಿಡುಗಡೆಗೊಳಿಸಿದ ಭೀಮಸೇನ,
ಕೀಚಕರ ಅಂಧಂತಮಸ್ಸಿಗೆ ಕಳಿಸಿದ ಭೀಮಗಾಯಿತು ಮಹಾಪುಣ್ಯ ಪ್ರದಾನ.
ಗೋವುಗಳನ್ನು ಬಿಡಿಸಿದ್ದರಿಂದ ಭೀಮನ ನಂತರದ ಪುಣ್ಯ ಹೊಂದಿದ ಅರ್ಜುನ.
ಅಯಾತಯನ್ ಕೇಶವಾಯಾಥ
ದೂತಾನ್ ಸಹಾಭಿಮನ್ಯುಃ ಸೋSಪಿ ರಾಮೇಣ
ಸಾರ್ದ್ಧಮ್ ।
ಆಗಾದನನ್ತಾನನ್ದಚಿದ್
ವಾಸುದೇವೋ ವಿವಾಹಯಾಮಾಸುರಥಾಭಿಮನ್ಯುಮ್ ॥೨೩.೫೦॥
ಆನಂತರ ಪಾಂಡವರ ಕಡೆಯಿಂದ ಶ್ರೀಕೃಷ್ಣನಲ್ಲಿಗೆ ಕಳುಹಿಸಲ್ಪಡುತ್ತಾನೆ
ಒಬ್ಬ ದೂತ,
ಬಲಭದ್ರ ಅಭಿಮನ್ಯುವಿನೊಡನೆ ವಿರಾಟನಗರಕ್ಕೆ ಸಾಗಿ ಬರುತ್ತಾನೆ
ಸರ್ವಜ್ಞನಾತ.
ಅಭಿಮನ್ಯುವಿಗೆ ಮದುವೆ ಮಾಡಿಸಿದರು ಒದಗಿ ಬಂದಿದ್ದರಿಂದ ಸುಮುಹೂರ್ತ.
ಆಸೀನ್ಮಹಾನುತ್ಸವಸ್ತತ್ರ
ತೇಷಾಂ ದಶಾರ್ಹವೀರೈಃ ಸಹ ಪಾಣ್ಡವಾನಾಮ್ ।
ಸಪಾಞ್ಚಾಲಾನಾಂ
ವಾಸುದೇವೇನ ಸಾರ್ದ್ಧಮಜ್ಞಾತವಾಸಂ ಸಮತೀತ್ಯ ಮೋದತಾಮ್ ॥೨೩.೫೧॥
ಆಗ ಯಾದವರಿಂದ ಕೂಡಿದ ಪಾಂಡವರಿಗೆ ಅದು ಹಬ್ಬದ ಸಂಭ್ರಮ,
ಪಾಂಚಾಲರೂ ಇದ್ದ ಹಬ್ಬದಲ್ಲವರು ಮುಗಿಸಿದ್ದರು ಅಜ್ಞಾತದ ನಿಯಮ.
ದುರ್ಯ್ಯೋಧನಾದ್ಯಾಃ
ಸೂತಪುತ್ರೇಣ ಸಾರ್ದ್ಧಂ ಸಸೌಬಲೇಯಾ ಯುಧಿ ಪಾರ್ತ್ಥಪೀಡಿತಾಃ ।
ಭೀಷ್ಮಾದಿಭಿಃ
ಸಾರ್ದ್ಧಮುಪೇತ್ಯ ನಾಗಪುರಂ ಮನ್ತ್ರಂ ಮನ್ತ್ರಯಾಮಾಸುರತ್ರ ॥೨೩.೫೨॥
ಈಕಡೆ ಯುದ್ಧದಲ್ಲಿ ಅರ್ಜುನನಿಂದ ಸೋತ ದುರ್ಯೋಧನ, ಕರ್ಣ, ಶಕುನಿ ಮುಂತಾದವರು,
ಭೀಷ್ಮಾದಿಗಳೊಡನೆ ಹಸ್ತಿನಪುರಕ್ಕೆ ಹೋಗಿ ಮಂತ್ರಾಲೋಚನೆ ಮಾಡಲೆಂದು
ಸೇರಿದರು.
ಅಜ್ಞಾತವಾಸೇ ಫಲ್ಗುನೋ
ನೋSದ್ಯ ದೃಷ್ಟಸ್ತಸ್ಮಾತ್ ಪುನರ್ಯ್ಯಾನ್ತು ಪಾರ್ತ್ಥಾ ವನಾಯ ।
ಇತಿ ಬ್ರುವಾಣಾನಾಹ
ಭೀಷ್ಮೋSಭ್ಯತೀತಮಜ್ಞಾತವಾಸಂ ದ್ರೋಣ ಆಹೈವಮೇವ ॥೨೩.೫೩॥
ಅಜ್ಞಾತವಾಸದಲ್ಲಿ ಅರ್ಜುನ ತಮಗೆ ಕಂಡಿದ್ದರಿಂದ ಮತ್ತವರು ಕಾಡಿಗೆ
ಹೋಗಬೇಕೆಂದು ಕೌರವರ ವಾದ,
ಅಜ್ಞಾತವಾಸ ಮುಗಿದಿದೆಯೆಂದು ತಿಳಿಸಿ ಭೀಷ್ಮ ದ್ರೋಣರು ಕೌರವರಿಗೆ
ಹೇಳುತ್ತಾರೆ ಬುದ್ಧಿವಾದ.
ತಯೋರ್ವಾಕ್ಯಂ ತೇ
ತ್ವನಾದೃತ್ಯ ಪಾಪಾ ವನಂ ಪಾರ್ತ್ಥಾಃ ಪುನರೇವ ಪ್ರಯಾನ್ತು ।
ಇತಿ ದೂತಂ
ಪ್ರೇಷಯಾಮಾಸುರತ್ರ ಜಾನನ್ತಿ ವಿಪ್ರಾ ಇತಿ ಧರ್ಮ್ಮಜೋSವದತ್ ॥೨೩.೫೪॥
ಅವರಿಬ್ಬರ ಮಾತಿನೆಡೆಗೆ ಕೌರವರ ಅನಾದರ ಮತ್ತು ತಿರಸ್ಕಾರ,
ದೂತನ ಕಳಿಸಿ ಮಾಡುತ್ತಾರೆ ಪಾಂಡವರ ಕಾಡಿಗಟ್ಟುವ ಹುನ್ನಾರ.
ಧರ್ಮರಾಜನಿಂದ 'ಬ್ರಾಹ್ಮಣರಿಗೆ ತಿಳಿದಿದೆ' ಎಂದ್ಹೇಳುವ ವ್ಯಾಪಾರ.
[ಯಾವ ಕಾಲಮಾನದ ಪ್ರಕಾರ ಯುಧಿಷ್ಠಿರ, ಭೀಷ್ಮ-ದ್ರೋಣಾದಿಗಳು
ಅಜ್ಞಾತವಾಸ ಪೂರ್ಣವಾಗಿದೆ ಎಂದು ಹೇಳಿದರು ಹಾಗೂ ಯಾವ ಕಾಲಮಾನದ ಪ್ರಕಾರ ದುರ್ಯೋಧನಾದಿಗಳು
ಅಜ್ಞಾತವಾಸ ಅಪೂರ್ಣವಾಗಿದೆ ಎಂದರು
ಎನ್ನುವುದನ್ನು ವಿವರಿಸುತ್ತಾರೆ-]
ಸೌರಮಾಸಾನುಸಾರೇಣ
ಧಾರ್ತ್ತರಾಷ್ಟ್ರಾ ಅಪೂರ್ಣ್ಣತಾಮ್ ।
ಆಹುಶ್ಚಾನ್ದ್ರೇಣ ಮಾಸೇನ
ಪೂರ್ಣ್ಣಃ ಕಾಲೋSಖಿಲೋSಪ್ಯಸೌ ॥೨೩.೫೫॥
ಪಾಂಡವರ ಅಜ್ಞಾತವಾಸಕ್ಕೆ ವರ್ಷವಾಗಿರಲಿಲ್ಲ ಸೌರಮಾನದ ಪ್ರಕಾರ,
ಸಂಪೂರ್ಣವಾಗಿತ್ತು ಆಗಿನ ಮಾಪನವಾಗಿದ್ದ ಚಾಂದ್ರಮಾನದ ಪ್ರಕಾರ.
ದಿನಾನಾಮಧಿಪಃ ಸೂರ್ಯ್ಯಃ
ಪಕ್ಷಮಾಸಾಬ್ದಪಃ ಶಶೀ ।
ತಸ್ಮಾತ್
ಸೌಮ್ಯಾಬ್ದಮೇವಾತ್ರ ಮುಖ್ಯಮಾಹುರ್ಮ್ಮನೀಷಿಣಃ ॥೨೩.೫೬॥
ದಿನಗಳ ಅಧಿಪತಿ ಸೂರ್ಯನಾದುದರಿಂದ,
ಪಕ್ಷ ತಿಂಗಳಿಗೆ ಚಂದ್ರನೇ ಅಧಿಪತಿಯಾದ್ದರಿಂದ, ಚಾಂದ್ರಮಾನವೇ
ಸರಿಯೆಂದರಾ ಕಾರಣದಿಂದ.
ಸೌಮ್ಯಂ ಕಾಲಂ ತತೋ
ಯಜ್ಞೇ ಗೃಹ್ಣನ್ತಿ ನತು ಸೂರ್ಯ್ಯಜಮ್ ।
ತದೇತದವಿಚಾರ್ಯ್ಯೈವ
ಲೋಭಾಚ್ಚ ಧೃತರಾಷ್ಟ್ರಜೈಃ ॥೨೩.೫೭॥
ಇದಾಗಿತ್ತು ವೈದಿಕ ಸಂಪ್ರದಾಯ ಸಿದ್ಧ,
ಯಜ್ಞಗಳಿಗೂ ಚಾಂದ್ರಮಾನವೇ ಬದ್ಧ.
ಲೋಭಿ ದುರ್ಯೋಧನಾದಿಗಳಿಂದ ಇದ್ಯಾವುದೂ ಆಗಲಿಲ್ಲ ವಿಚಾರ,
ದುರಾಸೆ ದುರಾಲೋಚನೆಯ ಕೌರವರು ಬಿಟ್ಟು ಕೊಡಲಿಲ್ಲ ರಾಜ್ಯಭಾರ.
ರಾಜ್ಯಂ ನ ದತ್ತಂ
ಪಾರ್ತ್ಥೇಭ್ಯಃ ಪಾರ್ತ್ಥಾಃ ಕಾಲಸ್ಯ ಪೂರ್ಣ್ಣತಾಮ್ ।
ಖ್ಯಾಪಯನ್ತೋ
ವಿಪ್ರವರೈರುಪಪ್ಲಾವ್ಯಮುಪಾಯಯುಃ ॥೨೩.೫೮॥
ಪಾಂಡವರು ಕಾಲ ಪೂರ್ಣವಾಗಿದೆಯೆಂದು ಜಗತ್ತಿಗೆ ಹೇಳುತ್ತಾ,
ಬ್ರಾಹ್ಮಣರೊಡಗೂಡಿ ಬರುತ್ತಾರೆ ಉಪಪ್ಲಾವ್ಯ ನಗರದತ್ತ.
ಸವಾಸುದೇವಾ ಅಖಿಲೈಶ್ಚ
ಯಾದವೈಃ ಪಾಞ್ಚಾಲಮತ್ಸೈಶ್ಚ ಯುತಾಃ ಸಭಾರ್ಯ್ಯಾಃ ।
ಉಪಪ್ಲಾವ್ಯೇ ತೇ
ಕತಿಚಿದ್ ದಿನಾನಿ ವಾಸಂ ಚಕ್ರುಃ ಕೃಷ್ಣಸಂಶಿಕ್ಷಿತಾರ್ತ್ಥಾಃ ॥೨೩.೫೯॥
ಶ್ರೀಕೃಷ್ಣನೇ ಮೊದಲಾದ ಎಲ್ಲಾ ಯಾದವರು,
ಪಾಂಚಾಲ, ಮತ್ಸ್ಯದೇಶದವರು, ಪತ್ನಿಯರು,
ಇವರೆಲ್ಲರೊಡಗೂಡಿದ ಪಾಂಡವರು ಪಡೆಯುತ್ತಾ ಕೃಷ್ಣನುಪದೇಶ,
ಮಾಡುತ್ತಾರೆ ಉಪಪ್ಲಾವ್ಯ ನಗರದಲ್ಲೇ ಕೆಲವು ದಿನಗಳ ವಾಸ.
[ಆದಿತಃ ಶ್ಲೋಕಾಃ : ೩೬೩೯+೫೯=೩೬೯೮]
॥ ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ
ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಅಜ್ಞಾತವಾಸಸಮಾಪ್ತಿರ್ನ್ನಾಮ ತ್ರಯೋವಿಂಶೋSದ್ಧ್ಯಾಯಃ ॥
ಹೀಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ ವಿರಚಿತವಾದ,
ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯದ ಭಾವಾನುವಾದ,
ಅಜ್ಞಾತವಾಸಸಮಾಪ್ತಿ ಹೆಸರಿನ ಇಪ್ಪತ್ಮೂರನೇ ಅಧ್ಯಾಯ,
ಶ್ರೀಕೃಷ್ಣ, ಆಚಾರ್ಯಮಧ್ವರಿಗರ್ಪಿಸಿದ ಧನ್ಯತಾ ಭಾವ.